RR vs RCB Head to Head Records: ಫೈನಲ್ ರೇಸ್​ನಲ್ಲಿ ಗೆಲುವು ಯಾರಿಗೆ? ಹಿಂದಿನ ಪಂದ್ಯಗಳ ಅಂಕಿಅಂಶ ಹೇಳಿದ ಕಥೆಯಿದು

RR vs RCB Head to Head Records: ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 27 ಪಂದ್ಯಗಳು ನಡೆದಿದ್ದು, ಬೆಂಗಳೂರು ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ ಪಂದ್ಯಗಳ ಪೈಕಿ ಬೆಂಗಳೂರು 13 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ರಾಜಸ್ಥಾನ 11 ಪಂದ್ಯಗಳಲ್ಲಿ ಸೋತಿದೆ.

RR vs RCB Head to Head Records: ಫೈನಲ್ ರೇಸ್​ನಲ್ಲಿ ಗೆಲುವು ಯಾರಿಗೆ? ಹಿಂದಿನ ಪಂದ್ಯಗಳ ಅಂಕಿಅಂಶ ಹೇಳಿದ ಕಥೆಯಿದು
RR vs RCB
Follow us
TV9 Web
| Updated By: ಪೃಥ್ವಿಶಂಕರ

Updated on:May 26, 2022 | 5:50 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಸೀಸನ್ ಅಂತಿಮ ಹಂತದಲ್ಲಿದೆ. ಅದು ಮುಗಿಯಲು ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಒಂದು ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಸ್ಥಾನ ಪಡೆದಿದೆ. ಇದೀಗ ಫೈನಲ್‌ನ ಎರಡನೇ ತಂಡ ಯಾವುದು ಎಂಬುದು ಕ್ವಾಲಿಫೈಯರ್-2ರಲ್ಲಿ ನಿರ್ಧಾರವಾಗಲಿದೆ. ಐಪಿಎಲ್-2022 ರ ಎರಡನೇ ಕ್ವಾಲಿಫೈಯರ್ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ಫೈನಲ್‌ ಆಡಲಿದೆ. ರಾಜಸ್ಥಾನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಗುಜರಾತ್‌ ಎದುರೆ ಆಡಿತು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಎರಡನೇ ಕ್ವಾಲಿಫೈಯರ್ ಅನ್ನು ಆಡಬೇಕಾಗಿದೆ, ಆದರೆ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಎಲಿಮಿನೇಟರ್‌ನಲ್ಲಿ ಬರುತ್ತಿದೆ. ಈ ಪಂದ್ಯದ ಮೊದಲು, ಬೆಂಗಳೂರು ಮತ್ತು ರಾಜಸ್ಥಾನ ನಡುವಿನ ಅಂಕಿಅಂಶಗಳನ್ನು (RR vs CB Head to Head) ನೋಡುವುದು ಅಗತ್ಯವೆಂದು ತೋರುತ್ತದೆ.

2008 ರಿಂದ ರಾಜಸ್ಥಾನ್ ಎಂದಿಗೂ ಫೈನಲ್‌ನಲ್ಲಿ ಆಡಿಲ್ಲ, ಹಾಗೆಯೇ 2016 ರಿಂದ ಬೆಂಗಳೂರು ಫೈನಲ್ ತಲುಪಿಲ್ಲ. ರಾಜಸ್ಥಾನವು ಶೇನ್ ವಾರ್ನ್ ನಾಯಕತ್ವದಲ್ಲಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ಗೆದ್ದ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಅಂದಿನಿಂದ ಈ ತಂಡಕ್ಕೆ ಪ್ಲೇ ಆಫ್ ತಲುಪುವುದು ಕೂಡ ಕಷ್ಟವಾಗಿತ್ತು. ಈ ಬಾರಿ ಈ ತಂಡವು 2018 ರಿಂದ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಆದರೆ, ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ, ಈ ತಂಡವು ಹಿಂದೆಂದಿಗಿಂತಲೂ ಬಲಿಷ್ಠವಾಗಿ ಕಾಣುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವು ಬೆಂಗಳೂರಿಗೆ ಸುಲಭವಲ್ಲ.

ಇದನ್ನೂ ಓದಿ:IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!

ಇದನ್ನೂ ಓದಿ
Image
RR vs RCB Qualifier 2 Live Streaming: ಗೆದ್ದವರಿಗೆ ಫೈನಲ್ ಟಿಕೆಟ್! ಸೋತವರಿಗೆ ಗೇಟ್​ಪಾಸ್; ಪಂದ್ಯದ ಬಗ್ಗೆ ಮಾಹಿತಿ ಹೀಗಿದೆ
Image
IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!
Image
ICC Test Rankings: ನಂ.1 ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜಾ! ಕೊಹ್ಲಿ-ರೋಹಿತ್ ಸ್ಥಾನ ಯಾವುದು?

ಮುಖಾಮುಖಿ ಅಂಕಿಅಂಶಗಳು

ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 27 ಪಂದ್ಯಗಳು ನಡೆದಿದ್ದು, ಬೆಂಗಳೂರು ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ ಪಂದ್ಯಗಳ ಪೈಕಿ ಬೆಂಗಳೂರು 13 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ರಾಜಸ್ಥಾನ 11 ಪಂದ್ಯಗಳಲ್ಲಿ ಸೋತಿದೆ. ಅದೇ ಸಮಯದಲ್ಲಿ, ಮೂರು ಪಂದ್ಯಗಳ ಫಲಿತಾಂಶ ಹೊರಬರಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಅಂಕಿಅಂಶಗಳ ಪ್ರಕಾರ ಫಾಫ್ ಡು ಪ್ಲೆಸಿಸ್ ನಾಯಕತ್ವದ ಬೆಂಗಳೂರು ತಂಡವು ಎರಡು ಪಂದ್ಯಗಳಲ್ಲಿ ರಾಜಸ್ತಾನದ ಮೇಲೆ ಪ್ರಾಬಲ್ಯ ಮೆರೆದಿದೆ.

ಇದು ಕಳೆದ 5 ಪಂದ್ಯಗಳ ಸ್ಥಿತಿ

ಇನ್ನೊಂದೆಡೆ ಈ ಎರಡು ತಂಡಗಳ ನಡುವಣ ಕಳೆದ ಐದು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಇಲ್ಲೂ ಬೆಂಗಳೂರು ಮೇಲುಗೈ ಸಾಧಿಸಿದಂತಿದೆ. ಕಳೆದ ಐದು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಬೆಂಗಳೂರು ರಾಜಸ್ಥಾನ ವಿರುದ್ಧ ಗೆದ್ದಿದೆ. ಈ ಋತುವಿನಲ್ಲಿ ಈ ಎರಡು ತಂಡಗಳ ನಡುವೆ ನಡೆದ ಪಂದ್ಯಗಳಲ್ಲಿ ರಾಜಸ್ಥಾನ ಒಂದರಲ್ಲಿ ಮತ್ತು ಬೆಂಗಳೂರು ಒಂದರಲ್ಲಿ ಗೆದ್ದಿತ್ತು. ಏಪ್ರಿಲ್ 26 ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ 29 ರನ್‌ಗಳಿಂದ ಜಯಗಳಿಸಿತ್ತು. ಇದಕ್ಕೂ ಮುನ್ನ ಏಪ್ರಿಲ್ 5 ರಂದು ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ರಾಜಸ್ಥಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತ್ತು. 29 ಸೆಪ್ಟೆಂಬರ್ 2021, 22 ಏಪ್ರಿಲ್ 2021, 17 ಅಕ್ಟೋಬರ್ 2020 ರಂದು ಆಡಿದ ಪಂದ್ಯಗಳಲ್ಲಿ ಬೆಂಗಳೂರು ಗೆದ್ದಿದೆ.

Published On - 5:50 pm, Thu, 26 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ