Viral Video: ಕ್ಲಿಷ್ಟಕರ ಪಾರ್ಕಿಂಗ್​ನಿಂದ ಸಲೀಸಾಗಿ ಕಾರು ಹೊರತಂದ ಚಾಲಕ

ಇಕ್ಕಟ್ಟಿನ ನಡುವೆ ಪಾರ್ಕ್ ಮಾಡಿದ್ದ ಕಾರನ್ನು ಹೊರತರುವ ಚಾಲಕನ ಕೌಶಲ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

Viral Video: ಕ್ಲಿಷ್ಟಕರ ಪಾರ್ಕಿಂಗ್​ನಿಂದ ಸಲೀಸಾಗಿ ಕಾರು ಹೊರತಂದ ಚಾಲಕ
ವೈರಲ್ ಆದ ಕಾರುImage Credit source: Youtube
Follow us
TV9 Web
| Updated By: Rakesh Nayak Manchi

Updated on: May 27, 2022 | 1:23 PM

ಹೆಚ್ಚಿನವರಿಗೆ ಕಾರು ಪಾರ್ಕಿಂಗ್ (Car Parking) ಮಾಡಿದ್ದಲ್ಲಿಂದ ಕಾರನ್ನು ಹಿಂತೆಗೆಯುವುದೇ ದೊಡ್ಡ ವಿಚಾರ, ಪಾರ್ಕಿಂಗ್ ಸ್ಥಳದಲ್ಲಿ ತುಂಬ ವಾಹನಗಳಿತ್ತೆಂದರೆ ಸಾಕು ಅಯ್ಯೋ ಹೇಗಪ್ಪಾ ಪಾರ್ಕಿಂಗ್ ಮಾಡೋದು ಅಂತ ಹೇಳುತ್ತಾರೆ. ಹೀಗಿದ್ದಾಗ ನ್ಯೂಯಾರ್ಕ್​ನ ಚಾಲಕನೊಬ್ಬನ ಚಾಲನಾ ಕೌಶಲ್ಯದ ವಿಡಿಯೋ ಭಾರಿ ವೈರಲ್ (Video Viral) ಆಗುತ್ತಿದೆ. ಇಕ್ಕಟ್ಟಿನಲ್ಲಿ ಪಾರ್ಕ್ ಮಾಡಿದ್ದ ಕಾರ್​ ಅನ್ನು ಹೊರತರುವ ಚಾಲಕನ ಕೌಶಲ್ಯಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್

ಚಾಲಕನು ಪಾರ್ಕ್ ಮಾಡಿದ್ದ ಕಾರಿನ ಒಳಗೆ ಹೋಗುವಾಗ ”ನಾನು ಹೊರಬರುವುದನ್ನು ನೋಡಿ” ಎಂದು ಹೇಳುತ್ತಾರೆ. ನಂತರ ಚಾಲಕ ಕಾರಿನೊಳಗೆ ಕುಳಿತು ಸಣ್ಣ ಅಂತರದಲ್ಲಿ ಹಿಂಬದಿ ಮತ್ತು ಮುಂಬದಿ ಕಾರಿನ ನಡುವೆ ನಿಲ್ಲಿಸಿದ್ದ ಕಾರನ್ನು ಹೊರತಂದು ಅಚ್ಚರಿ ಮೂಡಿಸಿದ್ದಾರೆ. ಕಾರು ಹೊರ ತರುವ ವೇಳೆ ಹಿಂಬದಿ ಮತ್ತು ಮುಂದೆ ಪಾರ್ಕ್ ಮಾಡಿದ್ದ ಕಾರುಗಳಿಗೆ ಸ್ವಲ್ಪವೂ ತಾಗದೆ ಯಶಸ್ವಿಯಾಗಿ ತಂದಿರುವುದು ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.

ಇದನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಪೊಲೀಸರಿಗೆ ಬೆದರಿಕೆಯೊಡ್ಡಿದ ಮಹಿಳಾ ಅಧಿಕಾರಿ; ವಿಡಿಯೋ ವೈರಲ್

ಸದ್ಯ ಕಾರು ಜಾಲಕನ ಚಾಲನಾ ಕೌಶಲ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಇದರ ವಿಡಿಯೋ ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿದ್ದು, 3.44 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಷ್ಟಕ್ಕೂ ಈ ವಿಡಿಯೋ ಒಂದು ವರ್ಷ ಹಳೆಯದ್ದು. ಆದರೆ ಇದೀಗ ಮತ್ತೆ ವೈರಲ್ ಅಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಇನ್ನೊಂದಷ್ಟು ಮಂದಿ ಚಾಲಕನ ತಾಳ್ಮೆ ಬಗ್ಗೆ ಮಾತನಾಡಿದ್ದಾರೆ.

ಕಷ್ಟಕರ ಪಾರ್ಕಿಂಗ್​ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ಹೊರ ತೆಗೆಯುವ ಒಂದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಒಂದೊಮ್ಮೆ ಗೂಗಲ್ ಮೂಲಕ ಸರ್ಚ್ ಮಾಡಿದರೆ ಇಂಥ ಸಾಕಷ್ಟು ವಿಡಿಯೋಗಳು ಲಭ್ಯವಾಗುತ್ತವೆ. ಇದರಲ್ಲಿ ಈ ವಿಡಿಯೋ ಕೂಡ ಒಂದಾಗಿದೆ.

ಇದನ್ನೂ ಓದಿ: Trending: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ‘ಹೆಲ್ಮೆಟ್’ ಟ್ವೀಟ್ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ