Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ!
ಸಿಂಗಾಪುರದಲ್ಲಿ ಚರಂಡಿ ನೀರು ಮತ್ತು ಮೂತ್ರದಿಂದ ಬಿಯರ್ ತಯಾರಿಸಲಾಗುತ್ತಿದೆಯಂತೆ. ಶುದ್ಧೀಕರಿಸಲಾದ ಕೊಳಚೆ ನೀರು ಮತ್ತು ಮೂತ್ರದಿಂದ ಬಿಯರ್ ಉತ್ಪಾದನೆ ಮಾಡುವುದಾಗಿ ಘೋಷಿಸಲಾಗಿದೆ.
ಖುಷಿಯಾದರೂ, ದುಃಖವಾದರೂ, ಏನೂ ಆಗದೇ ಇದ್ದರೂ ಎಣ್ಣೆ ಹೊಡೆಯುವ ಜನರು ನಮ್ಮ ದೇಶದಲ್ಲಿ ಸಾಕಷ್ಟಿದ್ದಾರೆ. ಕೆಲವರು ಬಿಯರ್, ಇನ್ನು ಕೆಲವರು ವಿಸ್ಕಿ, ಮತ್ತೆ ಕೆಲವರು ರಮ್ ಹೀಗೆ ನಾನಾ ರೀತಿಯ, ನಾನಾ ಬ್ರ್ಯಾಂಡ್ಗಳ ಆಲ್ಕೋಹಾಲ್ ಸೇವನೆ ಮಾಡಲಾಗುತ್ತದೆ. ಆದರೆ, ಸಿಂಗಾಪುರದಲ್ಲಿ ಮನುಷ್ಯನ ಮೂತ್ರದಿಂದ (Urine) ತಯಾರಿಸಲಾಗುವ ಬಿಯರ್ಗೆ ಭಾರೀ ಡಿಮ್ಯಾಂಡ್ ಇದೆಯಂತೆ! ಮೂತ್ರದಿಂದಲೂ ಬಿಯರ್ (Beer) ತಯಾರಿಸುತ್ತಾರಾ? ಎಂದು ಮೂಗು ಮುರಿಯಬೇಡಿ. ಈಗಾಗಲೇ ಈ ಬಿಯರ್ ರೆಡಿಯಾಗಿದ್ದು, ಹೊಸ ಬಗೆಯ ಬಿಯರ್ ಟ್ರೈ ಮಾಡಬೇಕು ಎಂದು ಬಯಸುವವರು ಈ ಬಿಯರ್ ಟೇಸ್ಟ್ ಮಾಡಬಹುದು! ಆದರೆ, ಅದಕ್ಕೆ ಸ್ವಲ್ಪ ಜಾಸ್ತಿಯೇ ಧೈರ್ಯ ಬೇಕಷ್ಟೆ.
ಸಿಂಗಾಪುರದಲ್ಲಿ ಚರಂಡಿ ನೀರು ಮತ್ತು ಮೂತ್ರದಿಂದ ಬಿಯರ್ ತಯಾರಿಸಲಾಗುತ್ತಿದೆಯಂತೆ. ಶುದ್ಧೀಕರಿಸಲಾದ ಕೊಳಚೆ ನೀರು ಮತ್ತು ಮೂತ್ರದಿಂದ ಬಿಯರ್ ಉತ್ಪಾದನೆ ಮಾಡುವುದಾಗಿ ಘೋಷಿಸಲಾಗಿದೆ. ಸಿಂಗಾಪುರದ ನೀರು ಸರಬರಾಜು ಸಂಸ್ಥೆಯು ಹೊಸ ಬಿಯರ್ ಬ್ರ್ಯಾಂಡ್ ನ್ಯೂಬ್ರೂ ಅನ್ನು ಪ್ರಾರಂಭಿಸಿದೆ. ಇದು ಪಾನೀಯವನ್ನು ತಯಾರಿಸಲು ಮರುಬಳಕೆಯ ಮತ್ತು ಫಿಲ್ಟರ್ ಮಾಡಿದ ನೀರನ್ನು ಬಳಸುತ್ತದೆ. ನ್ಯೂಬ್ರೂ ಸಂಸ್ಥೆಯ ಪ್ರಮುಖ ಘಟಕಾಂಶವೆಂದರೆ NEWater ಎಂದು ಕಂಪನಿಯು ಹೇಳಿಕೊಂಡಿದೆ. ಇದು ಸುಮಾರು 20 ವರ್ಷಗಳಿಂದ ಸುಮಾರು ಕೊಳಚೆನೀರಿನ ಶುದ್ಧೀಕರಿಸಿದ ದ್ರವವಾಗಿದೆ. ಇದು ಕುಡಿಯಲು ಸುರಕ್ಷಿತವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: Alcohol Benefits: ಮದ್ಯಪ್ರಿಯರೇ ಶಾಕ್ ಆಗಬೇಡಿ; ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?
ಸಿಂಗಾಪುರದ ವಾಟರ್ ಏಜೆನ್ಸಿಯು ಈ ಬಿಯರ್ ಅನ್ನು ಬಿಡುಗಡೆ ಮಾಡಿದೆ. ಇದು ಅಂಗಡಿಗಳು ಮತ್ತು ಬಾರ್‌ಗಳಲ್ಲಿ ಲಭ್ಯವಿದೆ. ಇದು ದೇಶದ ನೀರಿನ ಕೊರತೆಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ನವೀನ ಪರಿಹಾರಗಳನ್ನು ಹೊಂದಿದೆ. ಸಿಂಗಾಪುರವು ನೀರಿನ ಕೊರತೆಯ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ಪರಿಹರಿಸಲು ಇದು ರೂಪಿಸಿದ ಸೃಜನಶೀಲ ಮಾರ್ಗಗಳಲ್ಲಿ ಒಂದಾಗಿದೆ.
NeWater: Turning urine into beer in Singapore Foto: Pedro Herdoiza Crespo Singapore’s water agency came up with the drink to raise awareness of its scarcity issues. https://t.co/OF4myqoUDO
— Pedro Redmont Herdoiza Crespo (@PedroRedmont) May 26, 2022
ದಿ ಸ್ಟ್ರೈಟ್ಸ್ ಟೈಮ್ಸ್ ಪ್ರಕಾರ, ನ್ಯೂಬ್ರೂ ಬಿಯರ್ ಅನ್ನು ಏಪ್ರಿಲ್ 8ರಂದು ರಾಷ್ಟ್ರೀಯ ವಾಟರ್ ಏಜೆನ್ಸಿ PUB ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರಿ Brewerkzನಿಂದ ಸಿಂಗಾಪುರ್ ಇಂಟರ್ನ್ಯಾಷನಲ್ ವಾಟರ್ ವೀಕ್ (SIWW)ನಲ್ಲಿ ಮೊದಲು ಪ್ರಾರಂಭಿಸಲಾಯಿತು. ಇದನ್ನು ಮೊದಲ ಗ್ರೀನ್ ಬಿಯರ್ ಎಂದು ಕರೆಯಲಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ