AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ ಎರಡಲ್ಲ ಬರೋಬ್ಬರಿ 96 ಚಮಚಗಳನ್ನು ದೇಹದ ಮೇಲೆ ಬೀಳದಂತೆ ಬ್ಯಾಲೆನ್ಸ್​ ಮಾಡಿ, ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ವ್ಯಕ್ತಿ

ಕೆಲವರು ತಮ್ಮ ವಿಭಿನ್ನವಾದ ಪ್ರತಿಭೆ, ಸಾಹಸ, ವಿಚಿತ್ರ ಅವತಾರಗಳ ಮೂಲಕ ಗಿನ್ನೆಸ್‌ ದಾಖಲೆ ಸೃಷ್ಟಿಸುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ತನ್ನ ದೇಹದ ಮೇಲೆ 96 ಚಮಚಗಳನ್ನು ಸಮತೋಲನದಿಂದ ಹಿಡಿದುಕೊಳ್ಳುವ ಮೂಲಕ ತನ್ನ ಹಳೆಯ ಗಿನ್ನೆಸ್ ದಾಖಲೆಯನ್ನೇ ಮುರಿದು ಮತ್ತೊಮ್ಮೆ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 96 ಚಮಚಗಳನ್ನು ದೇಹದ ಮೇಲೆ ಬೀಳದಂತೆ ಬ್ಯಾಲೆನ್ಸ್​ ಮಾಡಿ, ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ವ್ಯಕ್ತಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:May 23, 2025 | 2:50 PM

Share

ಇರಾನ್, ಮೇ 23 : ಈ ಜಗತ್ತಿನಲ್ಲಿರುವ ಅಸಾಮಾನ್ಯ ಪ್ರತಿಭೆಗಳನ್ನು ಕಂಡಾಗ ಅಚ್ಚರಿಯಾಗುತ್ತದೆ. ಅದರಲ್ಲಿಯೂ ಕೆಲವರು ತಮ್ಮ ಪ್ರತಿಭೆಯ ಮೂಲಕ ಗಿನ್ನೆಸ್ ವಿಶ್ವ ದಾಖಲೆ (Guinness world records) ಪಟ್ಟಿಗೆ ಸೇರುತ್ತಾರೆ. ಇನ್ನು ಕೆಲವು ಜನರು ಈ ವಿಶ್ವ ದಾಖಲೆಯನ್ನು ಬರೆಯಲು ಊಹೆ ಕೂಡ ಮಾಡದ ಸಾಹಸಕ್ಕೆ ಕೈ ಹಾಕುವುದನ್ನು ನೋಡಿರಬಹುದು. ಕೆಲವರ ಈ ಸಾಹಸವನ್ನು ನೋಡಿದರೆ ಶಾಕ್ ಆಗುತ್ತದೆ. ಇದೀಗ ಇರಾನಿ (Iran) ನ ಅಬೋಲ್ಫಜಲ್ ಸಾಬರ್ ಮೊಖ್ತಾರಿ (Abolfazl Saber Mokhtari) ಎನ್ನುವ ವ್ಯಕ್ತಿಯೂ 96 ಚಮಚಗಳನ್ನು ತನ್ನ ದೇಹದ ಮೇಲೆ ಸಮತೋಲನಗೊಳಿಸುವ ಮೂಲಕ ತನ್ನ ಹಿಂದಿನ ಎಲ್ಲಾ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಇರಾನಿನ ಅಬೋಲ್ಫಜಲ್  ಸಾಬರ್  ಮೊಖ್ತಾರಿ ಅವರ ಸಾಧನೆ ಸಾಮಾನ್ಯವಾದುದ್ದಲ್ಲ. ಅಬೋಲ್ಫಜಲ್ ಸಬರ್ ಮೊಖ್ತಾರಿ ಏಕಕಾಲದಲ್ಲಿ ತನ್ನ ದೇಹದ ಮೇಲೆ ಗರಿಷ್ಠ ಸಂಖ್ಯೆಯ ಚಮಚಗಳನ್ನು ಸಮತೋಲನಗೊಳಿಸುವ ಮೂಲಕ ತನ್ನ ಹಿಂದಿನ ವಿಶ್ವ ದಾಖಲೆಗಳ್ಳೆಲ್ಲವನ್ನು ಬ್ರೇಕ್ ಮಾಡಿ ಮೂರನೇ ಬಾರಿಗೆ ವಿಶ್ವ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ
Image
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
Image
ಸೆಕೆ ಎಂದು ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ
Image
ಬೈಕ್ ಓಡಿಸುತ್ತಿರುವಾಗಲೇ ಹಿಂಬದಿ ಕುಳಿತ ಪತ್ನಿಯಿಂದ ಪತಿಗ ಬಿತ್ತು ಒದೆ
Image
ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು

ಇದನ್ನೂ ಓದಿ :ಬಾಲಿವುಡ್ ನಟಿ ತಮನ್ನಾ ಕನ್ನಡದವ್ರು, ಪೂರ್ವಜರ ಮೂಲ ಕನ್ನಡದ ನೆಲ : ಇದು ನಿಜಾನಾ?

Guinnessworldrecords ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋಗೆ ಅಬೋಲ್ಫಜಲ್ ಸಾಬರ್ ಮೊಖ್ತಾರಿ ಅವರು ದೇಹದ ಮೇಲೆ 96 ಚಮಚಗಳನ್ನು ಇಟ್ಟುಕೊಂಡು ಬೀಳದಂತೆ ಸಮತೋಲನ ಕಾಯ್ದುಕೊಂಡಿದ್ದಾರೆ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಬೋಲ್ಫಜಲ್ ಸಬರ್ ಮೊಖ್ತಾರಿ ನಿಂತಿರುವುದನ್ನು ನೋಡಬಹುದು. ಮಹಿಳೆಯೊಬ್ಬರು ಮೊಖ್ತಾರಿ ಅವರ ದೇಹದ  ಮೇಲೆ ಚಮಚಗಳನ್ನು ಜೋಡಿಸುವುದನ್ನು ಕಾಣಬಹುದು. ಸರಿಸುಮಾರು 96 ಚಮಚಗಳನ್ನು ದೇಹದ ಮೇಲೆ ಜೋಡಿಸಲಾಗಿದ್ದು ಇದು ಅವರ ದೇಹಕ್ಕೆ ಅಂಟಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಈಗಾಗಲೇ ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಇವನ ದೇಹದಲ್ಲಿ ಆಯಸ್ಕಾಂತೀಯ ಗುಣವಿದೆ ಎಂದಿದ್ದಾರೆ. ಮತ್ತೊಬ್ಬರು, ಈ ರೀತಿ ಗಿನ್ನಿಸ್ ರೆಕಾರ್ಡ್ ಮಾಡಬಹುದು ಎನ್ನುವ ಯೋಚನೆ ವ್ಯಕ್ತಿಗೆ ಹೇಗೆ ಬರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಇವನು ರಿಯಲ್ ಇರಾನ್ ಮ್ಯಾನ್ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Fri, 23 May 25

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?