Updated on:Mar 15, 2022 | 5:03 PM
ರೋಸ್ ಬಿಯರ್ ಕುಡಿದರೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಹೆಚ್ಚಾಗಬಹುದು. ಹೃದ್ರೋಗದಿಂದ ಮತ್ತಷ್ಟು ಅಪಾಯ ಬರಬಹುದು. ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ.
ಗ್ಲುಟನ್ ಸಮಸ್ಯೆ ಇರುವವರಿಗೆ ಬಿಯರ್ ಒಳ್ಳೆಯದಲ್ಲ. ಏಕೆಂದರೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಯರ್ ಕುಡಿಯುವುದರಿಂದ ಕಣ್ಣುಗಳು ಕಿರಿಕಿರಿಗೊಳ್ಳುತ್ತವೆ.
ಬಿಯರ್ ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪರಿಣಾಮವಾಗಿ, ನೀವು ಪ್ರತಿದಿನ ಬಿಯರ್ ಕುಡಿಯುತ್ತಿದ್ದರೆ, ನಿಮ್ಮ ತೂಕ ಹೆಚ್ಚಾಗುತ್ತದೆ. ಒಂದು ಬಾಟಲ್ ಬಿಯರ್ 200ನಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಬಿಯರ್ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯ ಗ್ಲೂಕೋಸ್ ಅನ್ನು ಒಡೆಯುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ತಡೆಯುತ್ತದೆ. ಇದು ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರೊಂದಿಗೆ ಹೆಚ್ಚುವರಿ ಗ್ಲುಕೋಸ್ ಹೊಟ್ಟೆಯಲ್ಲಿ ಕೊಬ್ಬಿನಂತೆ ಶೇಖರಣೆಯಾಗುತ್ತದೆ. ಬಹು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Published On - 4:50 pm, Tue, 15 March 22