AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

Beer Side Effects: ನಿಯಮಿತವಾದ ಬಿಯರ್ ಸೇವನೆಯು ತೂಕ ಹೆಚ್ಚಾಗುವುದರ ಜೊತೆಗೆ ಮಧುಮೇಹ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಸುಕ್ಕುಗಳಂತಹ ಅನೇಕ ಚರ್ಮದ ಸಮಸ್ಯೆಗಳಿಗೂ ಕಾರಣವಾಗುತ್ತದೆ.

TV9 Web
| Edited By: |

Updated on:Mar 15, 2022 | 5:03 PM

Share
ಜಗತ್ತಿನಾದ್ಯಂತ ಬಿಯರ್ ಪ್ರಿಯರ ಸಂಖ್ಯೆ ಕಡಿಮೆಯೇನಲ್ಲ. ಚಹಾ ಮತ್ತು ಕಾಫಿಯ ನಂತರ ಬಿಯರ್ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಸುದೀರ್ಘ ಕೆಲಸದ ನಂತರ ಅಥವಾ ವಾರಾಂತ್ಯದಲ್ಲಿ ಆಯಾಸವನ್ನು ನಿವಾರಿಸಲು ಬಿಯರ್ ಉತ್ತಮ ಸ್ನೇಹಿತ ಎಂದು ಹಲವರು ಭಾವಿಸುತ್ತಾರೆ. ದಿನನಿತ್ಯದ ಆಹಾರದಲ್ಲಿ ಒಂದು ಗ್ಲಾಸ್ ಬಿಯರ್ ಸೇವಿಸುವವರೂ ಇದ್ದಾರೆ. ಬಿಯರ್ ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಚರ್ಮ ಮತ್ತು ಕೂದಲ ರಕ್ಷಣೆಯಲ್ಲಿಯೂ ಬಿಯರ್ ಬಳಕೆ ಇದೆ. ಆದರೆ ಪ್ರತಿದಿನ ಬಿಯರ್ ಸೇವನೆ ದೇಹಕ್ಕೆ ಒಳ್ಳೆಯದಲ್ಲ.

1 / 6
ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ವೃದ್ಧಾಪ್ಯವು ಹೆಚ್ಚು ವೇಗವಾಗಿ ಬರುತ್ತದೆ. ಏಕೆಂದರೆ ಬಿಯರ್‌ನಲ್ಲಿ  ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವ ಕೆಲವು ಸಂಯುಕ್ತಗಳಿವೆ. ಅಲ್ಲದೆ ವೃದ್ಧಾಪ್ಯದಿಂದ ನಾನಾ ರೋಗಗಳು ಬೇಗ ಬರುತ್ತವೆ.

2 / 6
Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

ರೋಸ್ ಬಿಯರ್ ಕುಡಿದರೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಹೆಚ್ಚಾಗಬಹುದು. ಹೃದ್ರೋಗದಿಂದ ಮತ್ತಷ್ಟು ಅಪಾಯ ಬರಬಹುದು. ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ.

3 / 6
Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

ಗ್ಲುಟನ್ ಸಮಸ್ಯೆ ಇರುವವರಿಗೆ ಬಿಯರ್ ಒಳ್ಳೆಯದಲ್ಲ. ಏಕೆಂದರೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಯರ್ ಕುಡಿಯುವುದರಿಂದ ಕಣ್ಣುಗಳು ಕಿರಿಕಿರಿಗೊಳ್ಳುತ್ತವೆ.

4 / 6
Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

ಬಿಯರ್ ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪರಿಣಾಮವಾಗಿ, ನೀವು ಪ್ರತಿದಿನ ಬಿಯರ್ ಕುಡಿಯುತ್ತಿದ್ದರೆ, ನಿಮ್ಮ ತೂಕ ಹೆಚ್ಚಾಗುತ್ತದೆ. ಒಂದು ಬಾಟಲ್ ಬಿಯರ್ 200ನಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ.

5 / 6
Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

ಬಿಯರ್ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯ ಗ್ಲೂಕೋಸ್ ಅನ್ನು ಒಡೆಯುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ತಡೆಯುತ್ತದೆ. ಇದು ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರೊಂದಿಗೆ ಹೆಚ್ಚುವರಿ ಗ್ಲುಕೋಸ್ ಹೊಟ್ಟೆಯಲ್ಲಿ ಕೊಬ್ಬಿನಂತೆ ಶೇಖರಣೆಯಾಗುತ್ತದೆ. ಬಹು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

6 / 6

Published On - 4:50 pm, Tue, 15 March 22