ಗುರಿ ಸೇರಲು ಅಂಕ ಮುಖ್ಯವಲ್ಲ, ಛಲ ಮುಖ್ಯ : ತನ್ನ ಸಾಧನೆ ಹಾದಿಯನ್ನು ವಿವರಿಸಿದ ಬೆಂಗಳೂರು ಮೂಲದ ಸಿಎ
ಪ್ರತಿಯೊಬ್ಬ ಹೆತ್ತವರು ಕೂಡ ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಲಿ ಎಂದು ಬಯಸುತ್ತಾರೆ. ಅಂಕಗಳ ಆಧಾರದ ಮೇಲೆ ಒಬ್ಬ ವಿದ್ಯಾರ್ಥಿಯ ಬುದ್ಧಿವಂತಿಕೆ ಹಾಗೂ ಶಿಕ್ಷಣವನ್ನು ಅಳೆಯಲಾಗುತ್ತದೆ. ಆದರೆ ಇದೀಗ ಬೆಂಗಳೂರಿನ ಸಿಎಯೊಬ್ಬರು ಸಿಬಿಎಸ್ಇ 10 ನೇ ಹತ್ತನೇ ತರಗತಿ ಅಂಕಪಟ್ಟಿಯನ್ನು ಹಂಚಿಕೊಂಡಿದ್ದು, ಹಲವು ಬಾರಿ ಸೋತಿದ್ದರೂ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬದುಕಿನಲ್ಲಿ ಗೆದಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆ ಕಾಲೇಜಿನಲ್ಲಿ ಪಡೆದ ಅಂಕ (Marks) ಗಳು ಬಹಳ ಮುಖ್ಯ. ಈ ಅಂಕಗಳೇ ಜೀವನದುದ್ದಕ್ಕೂ ಉಪಯೋಗಕ್ಕೆ ಬರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಈ ಅಂಕಗಳಿಗೆ ಯಾವುದೇ ಬೆಲೆ ಇಲ್ಲ ಎನ್ನುವ ಸತ್ಯ ನಂತರದ ದಿನಗಳಲ್ಲಿ ಅರಿವಿಗೆ ಬರುತ್ತದೆ. ನಮ್ಮಲ್ಲಿ ಸಾಧಿಸುವ ಛಲವಿದ್ದರೆ, ಕಡಿಮೆ ಅಂಕ ಗಳಿಸಿದ್ದರೂ ಕೂಡ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು. ಇದಕ್ಕೆ ಉದಾಹರಣೆಯೇ ಬೆಂಗಳೂರು ಮೂಲದ ಸಿಎ ಪಾರ್ಥ ವರ್ಮಾ (Partha Verma). ಸಿಬಿಎಸ್ಇ ಹತ್ತನೇಯ ತರಗತಿ ಅಂಕ ಪಟ್ಟಿ (CBSE 10 th Mark Card) ಯನ್ನು ಲಿಂಕ್ಡ್ ಇನ್ ನಲ್ಲಿ ಶೇರ್ ಮಾಡಿಕೊಂಡಿರುವ ಇವರು ತಮ್ಮ ಪಿಯುಸಿ ಹಾಗೂ ಸಿಎ ಪರೀಕ್ಷೆಯಲ್ಲಿ ಪಾಸ್ ಮಾಡಲು ಎಷ್ಟು ಕಷ್ಟ ಪಟ್ಟೆ ಎಂದು ಬರೆದುಕೊಂಡಿದ್ದಾರೆ. ಇವರ ಛಲಬಿಡದ ನಿರಂತರ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
Partha Verma ಹೆಸರಿನ ಲಿಂಕ್ಡ್ ಇನ್ ಖಾತೆಯಲ್ಲಿ ತಮ್ಮ ಸಿಬಿಎಸ್ಇ ಹತ್ತನೇಯ ತರಗತಿ ಅಂಕ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ಪಿಯುಸಿ ಪೂರ್ಣ ಗೊಳಿಸಲು ಮೂರು ವರ್ಷ ಬೇಕಾಯಿತು. ಅದಲ್ಲದೇ ಸಿಎ ಆಗುವ ಹಾದಿ ಕಠಿಣವಾಗಿತ್ತು. ಸಿಎ ಫೈನಲ್ ನಲ್ಲಿ ಹಲವು ಬಾರಿ ವಿಫಲನಾದೆ. ಐದನೇಯ ಪ್ರಯತ್ನದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಪ್ರತಿ ಬಾರಿ ಸೋತಾಗಲು ಅಳುತ್ತಿದ್ದೆ. ತನ್ನಿಂದ ಇದು ಸಾಧ್ಯನಾ ಎಂದು ತನ್ನ ಬಗ್ಗೆಯೇ ಸಂದೇಹ ಪಟ್ಟುಕೊಳ್ಳುತ್ತಿದ್ದೆ. ಆದರೆ ಅದನ್ನು ಈಗ ಎನಿಸಿಕೊಳ್ಳುವಾಗ ಮೂರ್ಖತನ ಎಂದೆನಿಸುತ್ತದೆ.
ನಾನು ಪಡೆದ ಈ ಅಂಕಗಳು ಸಾಧನೆಗೆ ಖಂಡಿತ ಮುಖ್ಯವಲ್ಲ. ನಾನು ಸಿಎ ಆಗಲು ಎಷ್ಟು ವರ್ಷ ತೆಗೆದುಕೊಂಡೆ ಎನ್ನುವ ಬಗ್ಗೆ ಯಾರು ಕಾಳಜಿ ವಹಿಸಲಿಲ್ಲ. ನೀನು ಯಾಕೆ ವಿಫಲವಾದೆ ಎಂದು ನನ್ನ ಬಳಿ ಯಾರು ಕೂಡ ಕೇಳಿಲ್ಲ. ಆದರೆ ನಾನು ಮಾತ್ರ ನನ್ನ ನಿರಂತರ ಪ್ರಯತ್ನವನ್ನು ಬಿಡಲಿಲ್ಲ. ನಾನು ಸೋತಾಗಲು ಮತ್ತೆ ಪ್ರಯತ್ನ ಪಟ್ಟೆ. ಕಷ್ಟಕರವಾಗಿದ್ದರೂ, ಅವಮಾನವಾದಾಗಲು ಚಿಂತಿಸಲಿಲ್ಲ. ಆದರೆ ನನ್ನ ಪ್ರಯತ್ನ ಹಾಗೂ ಸಾಧನೆಯ ಹಾದಿ ಇಂದು ಹೆಮ್ಮೆ ಪಡುವ ಭಾಗವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ :ಚಲಿಸುತ್ತಿದ್ದ ಬಸ್ಸಿನ ಕಿಟಕಿ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ
ಬೆಂಗಳೂರು ಮೂಲದ ಸಿಎ ಪಾರ್ಥ ವರ್ಮಾರವರು ಶೇರ್ ಮಾಡಿಕೊಂಡಿರುವ ಅಂಕಪಟ್ಟಿಯನ್ನು ನೋಡಿದರೆ ಅವರು ಪಡೆದಿರುವ ಅಂಕಗಳು ಎಷ್ಟು ಕಡಿಮೆಯಿದೆ ಎನ್ನುವುದನ್ನು ನೋಡಬಹುದು. ಸಂಸ್ಕೃತದಲ್ಲಿ 53, ಇಂಗ್ಲೀಷ್ ನಲ್ಲಿ 54, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ 64, ಗಣಿತದಲ್ಲಿ 68 ಹಾಗೂ ಸಮಾಜ ವಿಜ್ಞಾನದಲ್ಲಿ 71 ಅಂಕ ಗಳಿಸಿರುವುದನ್ನು ನೋಡಿರಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಈ ಪೋಸ್ಟ್ ವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಆರುನೂರಕ್ಕೂ ಅಧಿಕ ಕಾಮೆಂಟ್ ಗಳು ಹರಿದು ಬಂದಿದೆ. ಬಳಕೆದಾರರೊಬ್ಬರು, ಈ ಸ್ಟೋರಿಯ ಕೊನೆಯಲ್ಲಿ ಯಶಸ್ಸು ಹಾಗೂ ನಿಮ್ಮ ಅನುಭವವು ನನ್ನನ್ನು ಪ್ರಭಾವಿತನಾಗಿಸಿತು. ನಿಮ್ಮ ಸಾಧನೆಯ ಹಾದಿ ಅದ್ಭುತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ನಿಮ್ಮ ಸಾಧನೆಯ ಹಾದಿ ಎಲ್ಲರಿಗೂ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಂಕ ಮುಖ್ಯವಲ್ಲ, ಛಲವಿದ್ದರೆ ಎಲ್ಲವೂ ಸಾಧ್ಯ ಎಂದು ಸಾಭೀತು ಪಡಿಸಿದ್ದೀರಿ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ