AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲೆ, ಪ್ರತಿಭೆ, ಆತ್ಮವಿಶ್ವಾಸ ಮಣ್ಣಾಂಗಟ್ಟಿ, ಭವ್ಯ ಭಾರತದ ಬಡವರ ನಿತ್ಯದ ಸರ್ಕಸ್​ ಇದು’

Coolie : ಕೊಲ್ಕತ್ತೆಯ ಜನನಿಬಿಡ ರಸ್ತೆಯಲ್ಲಿ ಎರಡೂ ಕೈಗಳನ್ನು ಬಿಟ್ಟು ಸೈಕಲ್​ ಓಡಿಸುತ್ತಿದ್ದಾರೆ ಇವರು. ಜೀವನದಲ್ಲಿ ಏನು ಸಿಗುತ್ತೋ ಇಲ್ವೋ, ಇಷ್ಟು ಆತ್ಮವಿಶ್ವಾಸ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ ಐಪಿಎಸ್​ ಅಧಿಕಾರಿ ಆರೀಫ್​ ಶೇಖ್​. ಆದರೆ ನೆಟ್ಟಿಗರು?

‘ಕಲೆ, ಪ್ರತಿಭೆ, ಆತ್ಮವಿಶ್ವಾಸ ಮಣ್ಣಾಂಗಟ್ಟಿ, ಭವ್ಯ ಭಾರತದ ಬಡವರ ನಿತ್ಯದ ಸರ್ಕಸ್​ ಇದು’
ಇದು ನಿತ್ಯ ಸೈಕಲ್ ಸವಾರಿ ಹೊಟ್ಟೆಪಾಡಿಗಾಗಿ
TV9 Web
| Edited By: |

Updated on:Jan 09, 2023 | 10:51 AM

Share

Viral Video : ಇಷ್ಟೇ ಇಷ್ಟು ಹೊಟ್ಟೆಗೆ ದಿನವಿಡೀ ಮೈಮುರಿದು ದುಡಿಯಬೇಕಲ್ಲ? ಹೌದು, ದುಡಿಯಲೇಬೇಕು. ಹೀಗೆ ದುಡಿದರೆ ಮಾತ್ರ ತನ್ನದೂ ಹೊಟ್ಟೆ ತುಂಬುತ್ತದೆ ಮನೆಯವರದೂ. ಸುಸ್ತಾಯಿತು ಎಂದೋ ಮನಸ್ಸಿಲ್ಲವೆಂದೋ ಸುಮ್ಮನಾಗುವಂತಿಲ್ಲ. ರಟ್ಟೆ ಗಟ್ಟಿಯಾಗಿಸಿಕೊಂಡು ದುಡಿಯಬೇಕು. ದವಡೆಕಚ್ಚಿ ದುಡಿಯಬೇಕು. ಉಸಿರು ಬಿಗಿಹಿಡಿದು ದುಡಿಯಬೇಕು. ಎಡವಿ ಬಿದ್ದರೂ ಎದ್ದು ದುಡಿಯಬೇಕು. ಇನ್ನೊಬ್ಬರನ್ನು ತಡವದಂತೆ ದುಡಿಯಬೇಕು. ದುಡಿಯುವುದು ಅನಿವಾರ್ಯ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ವ್ಯಕ್ತಿ ಹಲಗೆಗಳನ್ನು, ರಾಡ್​ಗಳನ್ನು ತಲೆಯ ಮೇಲೆ ಹೊತ್ತು ಹ್ಯಾಂಡಲ್​ ಹಿಡಿದುಕೊಳ್ಳದೆ ಸೈಕಲ್​ ತುಳಿಯುತ್ತಿದ್ದಾರೆ.

ಕೊಲ್ಕತ್ತೆಯ ಬೀದಿಯಲ್ಲಿ ಈ ವ್ಯಕ್ತಿ ಹೀಗೆ ತನ್ನ ಕೆಲಸದಲ್ಲಿ ಮುಳುಗಿರುವಾಗ ಬೈಕ್​ ಸವಾರರೊಬ್ಬರು ಈ ವಿಡಿಯೋ ಮಾಡಿದ್ದಾರೆ. ಜೀವನದಲ್ಲಿ ಏನು ಸಿಗುತ್ತೋ ಇಲ್ವೋ, ಇಷ್ಟು ಆತ್ಮವಿಶ್ವಾಸ ಸಿಕ್ಕರೆ ಸಾಕು ಎಂದು ಐಪಿಎಸ್​ ಅಧಿಕಾರಿ ಆರೀಫ್​ ಶೇಖ್​ ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 1.4 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿನೋ ನೋಡಿದ್ದಾರೆ. 45,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. 6,000ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಸ್ಫೂರ್ತಿಗೊಂಡು ಕೊಂಡಾಡಿದ್ಧಾರೆ ಕೆಲವರು ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ. ಹಲವರು ವಾಸ್ತವವನ್ನು ಚರ್ಚಿಸಿದ್ಧಾರೆ.

ಇದನ್ನೂ ಓದಿ : ಪಾರ್ಕಿನ್ಸನ್ಸ್​ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್

ಇಲ್ಲ, ವ್ಯಕ್ತಿಯ ಮುಖದಲ್ಲಿ ಸಂಕಟವಿದೆ ಆತ್ಮವಿಶ್ವಾಸವಿಲ್ಲ. ಹೀಗೆ ಕೆಲಸ ಮಾಡಬೇಕಾಗಿರುವುದು ಅನಿವಾರ್ಯ, ಅದಕ್ಕೆ ಒಗ್ಗಿಕೊಂಡಿದ್ದಾರೆ. ಏಕೆಂದರೆ ಸರಕು ಸಾಗಣೆ ವಾಹನಕ್ಕೆ ಹಣ ವ್ಯಯಿಸುವುದು ಅವರಿಂದ ಸಾಧ್ಯವಾಗದು. ಜೊತೆಗೆ ನಿತ್ಯದ ಇಂಥ ಸರ್ಕಸ್​ಗಳಿಗೆ ಯಾರೂ ಸಹಾಯ ಮಾಡಲಾರರು. ಆದರೆ ಹೀಗೆ ಸಾಗುವುದರಿಂದ ಒಂದು ದಿನ ಅವರಿಗೆ ಅಥವಾ ಇತರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಛೆ, ಎಂಥ ಅಸಹಾಯಕತೆ ಮತ್ತು ಅವಮಾನ ಇದೆಲ್ಲ ಎಂದಿದ್ಧಾರೆ ಒಬ್ಬರು.

ಇದನ್ನೂ ಓದಿ : ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್

ಜೀವನದಲ್ಲಿ ಅವರವರ ಹಿನ್ನೆಲೆಗೆ ಅನುಗುಣವಾಗಿ ಹೀಗೆ ತೂಗಿಸುವುದು ಬಹಳಷ್ಟಿದೆ ಎಂದಿದ್ದಾರೆ ಅನೇಕರು. ಸಾಕಷ್ಟು ಜನ ಇದೊಂದು ಪ್ರತಿಭೆ ಎಂದು ಶ್ಲಾಘಿಸಿದ್ಧಾರೆ ಇನ್ನೂ ಕೆಲವರು. ಅದಕ್ಕೆ ಪ್ರತಿಯಾಗಿ, ಪ್ರತಿಭೆ ಎನ್ನುವುದನ್ನು ಒಪ್ಪೋಣ ಆದರೆ ಇಂಥ ಅನಿವಾರ್ಯ ಸಾಹಸಗಳಲ್ಲಿ ಅಪಾಯವೂ ಇದೆ ಎಂದಿದ್ದಾರೆ ಕೆಲವರು. ಆತ್ಮವಿಶ್ವಾಸ ಸಾಕಷ್ಟಿದೆ. ಆದರೆ ಇನ್ನೊಬ್ಬರಿಗೆ ಇದರಿಂದ ಅಪಾಯವಿದೆ ಎಂದಿದ್ದಾರೆ ಸಾಕಷ್ಟು ಜನ. ಹಾಗಿದ್ದರೆ ಇದಕ್ಕೆ ಕೊನೆಯೇ ಇಲ್ಲವೇ?

ಇದನ್ನೂ ಓದಿ : ‘ನಿಮ್ಮಂಥ ಕರುಣಾಮಯಿಗಳು ಈ ಜಗತ್ತಿಗೆ ಬೇಕು’ ; ಈ ವೈರಲ್ ವಿಡಿಯೋ ನೋಡಿ

ಬಡವರಿಗೆ ಇದು ಅನಿವಾರ್ಯ, ಇದರಲ್ಲಿ ಆತ್ಮವಿಶ್ವಾಸವೇನು ಬಂತು ಎಂದು ಕೇಳಿದ್ದಾರೆ ಮತ್ತೊಬ್ಬರು. ಬಡವರು ಬಡವರಾಗಿಯೇ ಇರಬೇಕು ಎಲ್ಲ ಅವಮಾನಗಳನ್ನೂ ನುಂಗಿಕೊಂಡು. ಇದನ್ನು ನೀವು ಪ್ರತಿಭೆ ಎನ್ನುತ್ತೀರಿ, ಕಲೆ ಎನ್ನುತ್ತೀರಿ ಅಲ್ಲವೇ? ಎಂದು ಕೇಳಿದ್ದಾರೆ ಮಗದೊಬ್ಬರು. ಈ ವ್ಯಕ್ತಿ ಬ್ರೇಕ್​ ಹೇಗೆ ಹಾಕುತ್ತಾರೆ ಎಂದು ಅನೇಕರು ಕುತೂಹಲ ವ್ಯಕ್ತಪಡಿಸಿದ್ಧಾರೆ. ಇದು ಆತ್ಮವಿಶ್ವಾಸವಲ್ಲ, ಕುಟುಂಬದ ಜವಾಬ್ದಾರಿ ಎಂದಿದ್ದಾರೆ ಮಗದೊಬ್ಬರು. ಯಾಕೆ ಈ ವ್ಯಕ್ತಿಯನ್ನು ಎಲ್ಲರೂ ಅಭಿನಂದಿಸುತ್ತಿದ್ಧಾರೆ? ನಮ್ಮ ಮಹಾನ್​ ದೇಶದಲ್ಲಿ ನಿತ್ಯದ ರೊಟ್ಟಿಗಾಗಿ ಅಪಾಯಕ್ಕೆ ಒಡ್ಡಿಕೊಳ್ಳುವ ಅನಿವಾರ್ಯ ಕೆಲಸವಿದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

ದುಡಿಯುತ್ತಿರುವವರು ದುಡಿಯುತ್ತಲೇ ಇರಬೇಕು. ಉಳಿದವರು ಇದೊಂದು ಕಲೆ, ಇದೊಂದು ಪ್ರತಿಭೆ, ಇದೊಂದು ಸಾಹಸ, ಇದೊಂದು ವರದಾನ ಎನ್ನುತ್ತ ಪ್ರೋತ್ಸಾಹಿಸುತ್ತಾರೆ, ಅಭಿನಂದಿಸುತ್ತಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಇರುವೆಯ ಭಾರ ಇರುವೆಗೆ, ಆನೆಯ ಭಾರ ಆನೆಗೆ. ಹೀಗೆ ಹೇಳುತ್ತ ಈ ಚಳಿಯಲ್ಲಿ ಚಹಾ ಹೀರುತ್ತ ಕುಳಿತುಕೊಳ್ಳುವಿರೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:45 am, Mon, 9 January 23

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ