ಸಿಇಒ ರಾಧಿಕಾ ಗುಪ್ತಾ ತಾಯ್ತನದೊಂದಿಗೆ ಕಚೇರಿ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ಧಾರೆ?

Motherhood : ಮೇಡಮ್, ಉನ್ನತ ಹುದ್ದೆಯಲ್ಲಿರುವವರಿಗೆ ಇದೆಲ್ಲವೂ ಸುಲಭ. ಆದರೆ ನಿತ್ಯವೂ ಕಚೇರಿಗೆ ಓಡಾಡಿಕೊಂಡು ಕೆಲಸ ಮಾಡುವ ದಂಪತಿಗೆ ಇದು ಕಷ್ಟಕರ ಎನ್ನುತ್ತಿದ್ದಾರೆ ನೆಟ್ಟಿಗರು.

ಸಿಇಒ ರಾಧಿಕಾ ಗುಪ್ತಾ ತಾಯ್ತನದೊಂದಿಗೆ ಕಚೇರಿ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ಧಾರೆ?
ರಾಧಿಕಾ ಗುಪ್ತಾ ಅವರ ಮಗು
Follow us
| Updated By: ಶ್ರೀದೇವಿ ಕಳಸದ

Updated on:Jan 09, 2023 | 2:02 PM

Viral : ತಾಯ್ತನ ಮತ್ತು ಕಚೇರಿ ನಿರ್ವಹಣೆ ಹೆಣ್ಣುಮಕ್ಕಳ ಬದುಕಿನಲ್ಲಿ ಅತ್ಯಂತ ದೊಡ್ಡ ತಿರುವು ಮತ್ತು ಸವಾಲು. ಈ ಸಂದರ್ಭದಲ್ಲಿ ಈ ಎರಡನ್ನೂ ನಿಭಾಯಿಸುವುದು ಸಣ್ಣ ಮಾತಲ್ಲ. ಅನೇಕರು ಈ ಸಂದರ್ಭದಲ್ಲಿ ಕೆಲಸವನ್ನೇ ಬಿಡುತ್ತಾರೆ. ಇನ್ನೂ ಕೆಲವರು ಎರಡನ್ನೂ ನಿರ್ವಹಿಸುತ್ತಾರೆ. ಮತ್ತೂ ಕೆಲವರು ಬ್ರೇಕ್​ ತೆಗೆದುಕೊಂಡು ಮತ್ತೆ ವಾಪಸ್​ ಕೆಲಸಕ್ಕೆ ಸೇರುತ್ತಾರೆ. ಆದರೆ ಸ್ವಂತ ಕಂಪೆನಿ ಹೊಂದಿದವರು ಈ ಹಂತವನ್ನು ಹೇಗೆ ನಿಭಾಯಿಸುತ್ತಾರೆ? ಇದೀಗ ವೈರಲ್ ಆಗಿರುವ  ಎಡೆಲ್ವೀಸ್​ ಮ್ಯೂಚುವಲ್​ ಫಂಡ್​ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ (Radhika Guptha) ಅವರ ಈ ಪೋಸ್ಟ್ ನೋಡಿ.

ಚಾಪೆಯ ಮೇಲೆ ಮಲಗಿದ ತಮ್ಮ ಮಗುವಿನ ಫೋಟೋ ಟ್ವೀಟ್ ಮಾಡಿದ ರಾಧಿಕಾ, ತಾಯ್ತನ ಮತ್ತು ಕಚೇರಿ ಕೆಲಸವನ್ನು ಒಟ್ಟಿಗೆ ತಾವು ಸಂತುಲನಗೊಳಿಸಿಕೊಂಡು ಹೋಗುವ ಬಗ್ಗೆ ಹೇಳಿಕೊಂಡಿದ್ದಾರೆ. ಪೋಷಕರಿಬ್ಬರೂ ಕೆಲಸ ಮಾಡಲೇಬೇಕಾದಾಗ ಮತ್ತು ಆ ದಿನ ಸಹಾಯಕ್ಕೆ ಯಾರೂ ಇಲ್ಲದೇ ಇದ್ಧಾಗ ನೋಡಿ ಯಾರು ಬಂದಿದ್ದಾರೆ ಸಹಾಯಕ್ಕೆ! ಹೀಗಿದ್ಧಾಗ ಮೊದಲು ಆ ದಿನವನ್ನು ಚೆನ್ನಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ಜೊತೆಗೆ ಸಾಕಷ್ಟು ತಾಳ್ಮೆ, ಸಮಸ್ಯೆಯನ್ನು ಪರಿಹರಿಸುವ ಆ್ಯಟಿಟ್ಯೂಡ್​ ಬೇಕಾಗುತ್ತದೆ. ಉಳಿದೆಲ್ಲವನ್ನೂ ಮಗುವಿನ ನಗುವೇ ನಿರ್ವಹಿಸುತ್ತದೆ.

ಇದನ್ನೂ ಓದಿ : ‘ಕಲೆ, ಪ್ರತಿಭೆ, ಆತ್ಮವಿಶ್ವಾಸ ಮಣ್ಣಾಂಗಟ್ಟಿ, ಭವ್ಯ ಭಾರತದ ಬಡವರ ನಿತ್ಯದ ಸರ್ಕಸ್​ ಇದು’

3 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್​ ನೋಡಿದ್ದಾರೆ. 3,000 ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ಧಾರೆ. 68 ಜನ ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಷಯಗಳು ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುವ ದಂಪತಿಗೆ ಮಾತ್ರ ಸುಲಭ ಮೇಡಮ್. ಎಲ್ಲ ಹಂತಗಳನ್ನೂ ಪರಸ್ಪರ ಸ್ವೀಕರಿಸಬೇಕಾಗುತ್ತದೆ. ಆದರೆ ನಿತ್ಯವೂ ಕಚೇರಿಗೆ ಹೋಗಿ ಕೆಲಸ ಮಾಡುವ ದಂಪತಿಗಳಲ್ಲಿ ಇದು ಅಸಾಧ್ಯ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ನಶೆ ಹಿಡಿಸುತ್ತದೆ ‘ಪಠಾಣ್’ದ ಬೇಶರಮ್​ ರಂಗ್​ ಹಾಡಿನ ಈ ಗಝಲ್​ ಶೈಲಿ

ಇದು ಅದ್ಭುತ. ಆದರೆ ಎಲ್ಲ ಮಹಿಳೆಯರಿಗೂ ಕಚೇರಿಗಳಿಗೆ ಮಗುವನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ. ಹಾಗೆಯೇ ಎಷ್ಟೋ ಕಚೇರಿಗಳಲ್ಲಿ ಬೇಬಿ ಸಿಟಿಂಗ್​ಗಳಿಲ್ಲ. ಹಾಗಾಗಿ ಸಾಮಾನ್ಯರಿಗೆ ಇದು ದೊಡ್ಡ ಸವಾಲೇ ಎಂದಿದ್ಧಾರೆ ಮತ್ತೊಬ್ಬರು.

ಆದರೆ ಜನಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ದಂಪತಿಗಳು ಪರಂಪರಾಗತ ನಂಬಿಕೆಗಳನ್ನು ಹಿಂದೂಡಿ, ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ, ಪರಸ್ಪರ ಅರ್ಥ ಮಾಡಿಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಮತ್ತು ತಾತ್ಕಾಲಿಕವಾಗಿಯಾದರೂ ಇತರರ ಸಹಾಯ ತೆಗೆದುಕೊಂಡು ನಿಭಾಯಿಸುವಲ್ಲಿ ಈ ದ್ವಂದ್ವಕ್ಕೆ ಪರಿಹಾರವಿದೆ. ಹಾಗೆಯೇ ಕಂಪೆನಿಗಳು ಶಿಶುವಿಹಾರಗಳನ್ನು ಸ್ಥಾಪಿಸಿದಲ್ಲಿ ಇನ್ನೂ ಅನುಕೂಲ!

ಈ ಪೋಸ್ಟ್ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:48 pm, Mon, 9 January 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ