ನಶೆ ಹಿಡಿಸುತ್ತದೆ ‘ಪಠಾಣ್’ದ ಬೇಶರಮ್ ರಂಗ್ ಹಾಡಿನ ಈ ಗಝಲ್ ಶೈಲಿ
Besharam Rang : ಸೌಮ್ಯ ಮುಖರ್ಜಿ ಎಂಬ ಕಲಾವಿದ ಇದನ್ನು ಹಾಡಿದ್ಧಾರೆ. ಆಹಾ, ಇದು ಮೂಲ ಹಾಡಿಗಿಂತ ಸೊಗಸಾಗಿದೆ. ಇದು ಬೇಕಿತ್ತು, ಇಡೀ ದಿನ ಇದೇ ಗುಂಗಿನಲ್ಲಿ ತೇಲಬಹುದು ಅಷ್ಟು ಅದ್ಭುತ ಎಂದು ಶ್ಲಾಘಿಸುತ್ತಿದ್ಧಾರೆ.
Viral Video : ತಿಂಗಳಿನಿಂದ ಎಲ್ಲಿ ನೋಡಿದರೂ ಕೇಳಿದರೂ ಪಠಾಣ್ ಹವಾ. ಸೋಶಿಯಲ್ ಮೀಡಿಯಾದ ಇನ್ಫ್ಲ್ಯೂಯೆನ್ಸರ್ಗಳು ಜಗತ್ತಿನ ಮೂಲೆಮೂಲೆಗಳಿಂದ ಹಾಡಿದ್ದೇ ಹಾಡಿದ್ದು, ಕುಣಿದದ್ದೇ ಕುಣಿದದ್ದು, ಲಿಪ್ ಸಿಂಕ್ ಮಾಡಿದ್ದೇ ಮಾಡಿದ್ದು. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಈ ಸಿನೆಮಾ ಸದ್ಯದಲ್ಲೇ ಥಿಯೇಟರುಗಳಲ್ಲಿ ನಿಮ್ಮನ್ನು ಇದಿರುಗೊಳ್ಳುತ್ತದೆ. ಅದಕ್ಕಿಂತ ಮುನ್ನ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬೇಶರಮ್ ರಂಗ್ ಹಾಡನ್ನು ಕಲಾವಿದರೊಬ್ಬರು ಗಝಲ್ ಶೈಲಿಯಲ್ಲಿ ಹಾಡಿದ್ದಾರೆ. ಆಹಾ ಎಂಥ ಇಂಪು ಎಂಥ ತಂಪು ಹೀಗೇ ಕೇಳುತ್ತಲೇ ಇರಬೇಕು ಎಂದು ನೆಟ್ಟಿಗರು ತೇಲಾಡುತ್ತಿದ್ದಾರೆ.
View this post on Instagram
ಹಿಂದೂಸ್ತಾನಿ ಲಘುಸಂಗೀತದ ಶೈಲಿಗಳಲ್ಲಿ ಒಂದು ಪ್ರಕಾರ ಗಝಲ್. ಈ ಶೈಲಿಯಲ್ಲಿ ಬೇಶರಮ್ ರಂಗ್ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾರೆ ಕೊಲ್ಕತ್ತೆಯ ಸೌಮ್ಯ ಮುಖರ್ಜಿ. ಸೋದರ ಪ್ರಸೂನ್ ಡೇ ಅವರೊಂದಿಗೆ ಈ ಹಾಡನ್ನು ಗಝಲ್ ಶೈಲಿಗೆ ಸ್ವರಸಂಯೋಜಿಸಿದ್ದಾರೆ.
ಇದನ್ನೂ ಓದಿ : ‘ಕಲೆ, ಪ್ರತಿಭೆ, ಆತ್ಮವಿಶ್ವಾಸ ಮಣ್ಣಾಂಗಟ್ಟಿ, ಭವ್ಯ ಭಾರತದ ಬಡವರ ನಿತ್ಯದ ಸರ್ಕಸ್ ಇದು’
ಇಂಪಾಗಿರುವ ಈ ಹಾಡಿನ ವಿಡಿಯೋ ಅನ್ನು ಈಗಾಗಲೇ ಸುಮಾರು 25,000 ಜನರು ನೋಡಿದ್ಧಾರೆ. ಅದ್ಭುತವಾದ ಈ ಗಝಲ್ ಶೈಲಿಯ ಹಾಡನ್ನು ಅನೇಕರು ಪ್ರಶಂಸಿಸಿದ್ದಾರೆ. ಇಡೀ ದಿನ ಇದೇ ಹಾಡು ನನ್ನ ಕಿವಿಯಲ್ಲಿ ಗುನಗುನಿಸುತ್ತದೆ. ಬೇಕಿತ್ತು ಇಂಥದ್ದು ಎಂದಿದ್ದಾರೆ ಅನೇಕರು. ಬೇಶರಮ್ ರಂಗ್ ಗೀತೆಯನ್ನು ಬರೆದವರು ಕುಮಾರ್. ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜಿಸಿದ್ದಾರೆ. ಶಿಲ್ಪಾ ರಾವ್ ಮತ್ತು ಕರಾಲಿಸಾ ಮೊಂಟೇರೋ ಧ್ವನಿಯಾಗಿದ್ದಾರೆ.
ಇದನ್ನೂ ಓದಿ : ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್
ಇದನ್ನು ಕೇಳಿದ ಅನೇಕರು, ಖಂಡಿತ ಗಝಲ್ನ ಆವೃತ್ತಿ ನಮ್ಮನ್ನು ನಿರಾಶೆಗೊಳಿಸಿಲ್ಲ. ಬಹಳ ಅದ್ಭುತವಾಗಿದೆ ಮೂಲಕ್ಕಿಂತಲೂ ಎಂದಿದ್ಧಾರೆ. ನೀವು ಮಾಂತ್ರಿಕವಾದ ಧ್ವನಿಯನ್ನು ಹೊಂದಿದ್ದೀರಿ. ಹೀಗೆ ಹಾಡುತ್ತೀರಿ ಎಂದು ಅನೇಕರು ಹಾರೈಸಿದ್ಧಾರೆ. ಹಾಡನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:16 pm, Mon, 9 January 23