ಸೂರತ್ ನಗರದಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಬಾಲಕಿಯ ಮೇಲೆ ನಾಯಿ ಆಕ್ರಮಣ! ಭೀಕರ ವಿಡಿಯೋ ವೈರಲ್!!

ನಾಯಿಯ ಆಕ್ರಮಣ ಶುರುವಾದ ಒಂದೆರಡು ನಿಮಿಷಗಳ ಬಳಿಕ ಮಗುವಿನ ತಾಯಿ ತನ್ನ ಮಗುವಿನ ಆರ್ತನಾದ ಕೇಳಿ ಅಲ್ಲಿಗೆ ಧಾವಿಸಿ ನಾಯಿಯನ್ನು ಓಡಿಸುತ್ತಾರೆ.

ಸೂರತ್ ನಗರದಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಬಾಲಕಿಯ ಮೇಲೆ ನಾಯಿ ಆಕ್ರಮಣ! ಭೀಕರ ವಿಡಿಯೋ ವೈರಲ್!!
ಬಾಲಕಿಯ ಮೇಲೆ ನಾಯಿ ಹಲ್ಲೆImage Credit source: Gujarat Tak
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2023 | 12:58 PM

ಸೂರತ್:  ಬೀದಿನಾಯಿಗಳ ಕಾಟ ಎಲ್ಲೆಡೆ ಹೆಚ್ಚುತ್ತಿದೆ. ನಮ್ಮ ಬೆಂಗಳೂರಲ್ಲಿ ಅವುಗಳ ಹಾವಳಿ ಬಗ್ಗೆ ನಿಮ್ಮ ಗಮನಕ್ಕೆ ಆಗಾಗ ತರುತ್ತಿರುತ್ತೇವೆ. ಗುಜರಾತ್ ರಾಜ್ಯ ಸೂರತ್ ನಗರದ ಸೊಸೈಟಿಯೊಂದರ ಬಳಿ ಬೀದಿ ನಾಯಿಯೊಂದು ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ದ ಹೆಣ್ಣುಮಗುವೊಂದರ (little girl) ಮೇಲೆ ಭಯಾನಕವಾಗಿ ಹಲ್ಲೆ ನಡೆಸಿ ಮಗುವನ್ನು ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿರುವ ದೃಶ್ಯ ಸೊಸೈಟಿ ಮುಂದೆ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ (CCTV camera) ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೆಂದು ವೈದ್ಯರು ಹೇಳಿದ್ದಾರೆ. ನಾಯಿಯ ಭೀಕರ ಆಕ್ರಮಣ ಮತ್ತು ಮಗುವಿನ ಆರ್ತನಾದ ಹಾಗೂ ಚೀರಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಭಯಾನಕ ಸ್ವರೂಪದ್ದಾಗಿರುವುದರಿಂದ ವೀಕ್ಷಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು

ವಿಡಿಯೋದಲ್ಲಿ ನೀವು ನೋಡುವ ಹಾಗೆ ಮಗು ಮನೆಯೊಂದರ ಮುಂದೆ ಆಟವಾಡುತ್ತಿದೆ. ಮತ್ತೊಂದು ಕಡೆಯಿಂದ ನಾಯಿ ಓಡಿಬರುತ್ತಿರುವುದನ್ನು ನೋಡುವ ಬಾಲಕಿ ಅದರೆಡೆ ಓಡುತ್ತಾಳೆ. ಆದರೆ, ಆವಳ ಪ್ರೀತಿಯನ್ನು ಅರ್ಥಮಾಡಿಕೊಳ್ಳದ ನಾಯಿ ಅವಳ ಮೇಲೆ ಎರಗುತ್ತದೆ. ಬಾಲಕಿಗೆ ಚೇತರಿಸಿಕೊಳ್ಳಲು ಬಿಡದೆ ನಾಯಿ ಒಂದೇ ಸಮನೆ ಅವಳನ್ನು ಪರಚುತ್ತದೆ ಮತ್ತು ಕಚ್ಚುತ್ತದೆ. ಬಾಲಕಿಯ ಮುಖದ ಮೇಲೆಲ್ಲ ನಾಯಿ ಕಚ್ಚಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

ನಾಯಿಯ ಆಕ್ರಮಣ ಶುರುವಾದ ಒಂದೆರಡು ನಿಮಿಷಗಳ ಬಳಿಕ ಮಗುವಿನ ತಾಯಿ ತನ್ನ ಮಗುವಿನ ಆರ್ತನಾದ ಕೇಳಿ ಅಲ್ಲಿಗೆ ಧಾವಿಸಿ ನಾಯಿಯನ್ನು ಓಡಿಸುತ್ತಾರೆ.

ಸೂರತ್ ನಗರದ ಫುಲ್ಪಾಡದ ಪ್ರದೇಶದಲ್ಲಿರುವ ವರಚ್ಚಾ ವಲಯದ ಸ್ವ್ಯಾನ್ ಸೊಸೈಟಿ ಬಳಿ ಈ ಭಯಾನಕ ಘಟನೆ ನಡೆದಿದೆ. ಮಗುವಿನ ತಾಯಿ ಸರಿಯಾದ ಸಮಯಕ್ಕೆ ಬಂದು ನಾಯಿಯನ್ನು ಓಡಿಸದೆ ಹೋಗಿದ್ದರೆ ಅದರ ಜೀವಕ್ಕೆ ಅಪಾಯ ಎದುರಾಗುತ್ತಿತ್ತು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ