Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನಾತಕೋತ್ತರ ಪದವಿ ಓದಿದ ಒಡಿಶಾದ ಈ ವ್ಯಕ್ತಿ ರಾತ್ರಿ ಕೂಲಿಕಾರ, ಹಗಲು ಬಡಮಕ್ಕಳಿಗೆ ಶಿಕ್ಷಕ

Odisha : ‘12 ವರ್ಷಗಳಿಂದ ಹಮಾಲಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸಕ್ಕೆ ಸೇರಿದಾಗ ಎಂಎ ಮುಗಿಸಿದ್ದೆ. ಇದೀಗ ಈ ಎರಡೂ ಕೆಲಸಗಳನ್ನು ಮಾಡುತ್ತ ನಿಂತು ಹೋದ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ.’ ನಾಗೇಶ ಪಾತ್ರೋ

ಸ್ನಾತಕೋತ್ತರ ಪದವಿ ಓದಿದ ಒಡಿಶಾದ ಈ ವ್ಯಕ್ತಿ ರಾತ್ರಿ ಕೂಲಿಕಾರ, ಹಗಲು ಬಡಮಕ್ಕಳಿಗೆ ಶಿಕ್ಷಕ
ನಾಗೇಶ ಪಾತ್ರೋ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 10, 2023 | 6:40 PM

Viral Video : ನಮ್ಮ ನಡುವೆ ಅದೆಷ್ಟೋ ಜನ ಎರಡು ಮೂರು ಕೆಲಸಗಳನ್ನು ಮಾಡಿ ಬದುಕು ಕಟ್ಟಿಕೊಳ್ಳುವವರು ಇದ್ದಾರೆ. ಕೆಲಸ ಮಾಡುವವರಿಗೆ ಹಗಲು ಬೇರೆಯಲ್ಲ ಹಾಗೆ ರಾತ್ರಿಯೂ. ಆದರೆ ದುಡಿಮೆಯನ್ನು ಯಾರಿಗಾಗಿ ಮಾಡುತ್ತೇವೆ, ಯಾಕಾಗಿ ಮಾಡುತ್ತೇವೆ ಮತ್ತು ನಿರ್ದಿಷ್ಟವಾದ ಕೆಲಸವನ್ನೇ ಯಾಕೆ ಮಾಡುತ್ತೇವೆ ಎನ್ನುವುದು ಮುಖ್ಯ. ಇದೀಗ ವೈರಲ್ ಆಗುತ್ತಿರುವ ಈ ಸುದ್ದಿಯನ್ನು ಗಮನಿಸಿ. ಒಡಿಶಾದ ಈ ವ್ಯಕ್ತಿ ರಾತ್ರಿಹೊತ್ತು ರೈಲುನಿಲ್ದಾಣದಲ್ಲಿ ಪೋರ್ಟರ್​ ಆಗಿ ಕೆಲಸ ಮಾಡುತ್ತಾರೆ. ಹಗಲು ಹೊತ್ತು ಬಡಮಕ್ಕಳಿಗೆ ಪಾಠ ಮಾಡುತ್ತಾರೆ.

ಒಡಿಶಾದ ಬೆಹ್ರಾಂಪುರದ ಈ ವ್ಯಕ್ತಿಯ ಹೆಸರು ನಾಗೇಶ ಪಾತ್ರೋ. ವಯಸ್ಸು 31. ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಸುಮಾರು 12 ವರ್ಷಗಳಿಂದ ನಾನು ಹಮಾಲಿಯಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ಹಮಾಲಿ ಕೆಲಸ. ಹಗಲಿನಲ್ಲಿ ಶಿಕ್ಷಕ ವೃತ್ತಿ. ಜೊತೆಗೆ 2006ರಲ್ಲಿ ನಿಂತು ಹೋದ ನನ್ನ ವಿದ್ಯಾಭ್ಯಾಸವನ್ನೂ 2012ರಿಂದ ಮುಂದುವರಿಸುತ್ತಿದ್ದೇನೆ. ಪೋರ್ಟರ್​ ಆಗಿ ಕೆಲಸ ಮಾಡುವ ಹೊತ್ತಿಗೆ ನಾನು ಎಂಎ ಮುಗಿಸಿದ್ದೆ’ ಎಂದಿದ್ಧಾರೆ ನಾಗೇಶ.

ಇದನ್ನೂ ಓದಿ : ‘ಬೀಡಿ ಜಲೈಲೆ ಜಿಗರ್ ಸೆ ಪಿಯಾ’ ಹಾಡಿಗೆ ನರ್ತಿಸಿದ ಪಾಕಿಸ್ತಾನಿ ದಂಪತಿಯ ವಿಡಿಯೋ ವೈರಲ್

ಈ ಪೋಸ್ಟ್​ ಅನ್ನು ಈತನಕ 82,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಬಡಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಮತ್ತು ಮೈಮುರಿದು ದುಡಿಯುವ ಇಂಥ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕು ಎಂದು ನೆಟ್ಟಿಗರು ಇವರನ್ನು ಅಭಿನಂದಿಸಿದ್ಧಾರೆ. ಮಕ್ಕಳಿಗೆ ಬೇಕಾದ ಪಠ್ಯಪುಸ್ತಕ ಮತ್ತು ಇನ್ನಿತರೇ ವಸ್ತುಗಳನ್ನು ಈ ವ್ಯಕ್ತಿಗೆ ಕೊಡಿ. ಆಗ ಪರಿಣಾಮಕಾರಿಯಾಗಿ ಈ ವ್ಯಕ್ತಿ ಪಾಠ ಮಾಡಲು ಅನುಕೂಲವಾಗುತ್ತದೆ ಎಂದಿದ್ದಾರೆ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 6:39 pm, Tue, 10 January 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ