ಹೆಂಡತಿ ಕೋಪಗೊಂಡಿದ್ದಾಳೆ; ರಜೆ ಕೇಳುವಲ್ಲಿ ಪ್ರಮಾಣಿಕತೆ ಮೆರೆದ ನವವಿವಾಹಿತ ಕಾನ್ಸ್ಟೇಬಲ್
Leave Letter : ಕಳೆದ ತಿಂಗಳು ಮದುವೆಯಾದ ಉತ್ತರ ಪ್ರದೇಶದ ಕಾನ್ಸ್ಟೇಬಲ್ ಬರೆದ ರಜಾ ಚೀಟಿ ವೈರಲ್ ಆಗಿದೆ.; ‘ಫೋನ್ ಮಾಡಿದರೂ ನನ್ನ ಹೆಂಡತಿ ಮಾತನಾಡುತ್ತಿಲ್ಲ, ತನ್ನ ತಾಯಿಗೆ ಕೊಡುತ್ತಿದ್ದಾಳೆ. ಹಾಗಾಗಿ ರಜೆ ಬೇಕು.’
Viral Post : ರಜೆ ಕೇಳುವಾಗ ತೀರಾ ಹೇಳಲಾರದ ಸಂದರ್ಭವಿದ್ದಾಗ ಸಾಮಾನ್ಯವಾಗಿ ವೈಯಕ್ತಿಕ ಕಾರಣಕ್ಕಾಗಿ ಎಂದು ಹೇಳುವುದುಂಟು. ಆದರೆ ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಕಾರಣವನ್ನು ನೇರವಾಗಿ ಹೇಳಿದಾಗ ಅದು ನಗು ಉಕ್ಕಿಸುವುದುಂಟು. ಏನು ಮಾಡುವುದು ಮುಗ್ಧತೆಗೆ ಪ್ರಾಮಾಣಿಕತೆಗೆ ಬೆಲೆ ಯಾವಾಗಲೂ ಇಷ್ಟೇ. ಆಗಾಗ ಇಂಥ ರಜಾ ಚೀಟಿಗಳು ವೈರಲ್ ಆಗುವುದುಂಟು. ಇದೇ ತಾಣದಲ್ಲಿ ಹಿಂದೆ ಓದಿದ್ದೀರಿ. ಇದೀಗ ಮತ್ತೊಂದು ರಜಾ ಚೀಟಿ ವೈರಲ್ ಆಗಿದೆ. ತನ್ನ ಪತ್ನಿ ಕೋಪಿಸಿಕೊಂಡಿದ್ದಾಳೆಂದೂ, ಅದಕ್ಕಾಗಿ ರಜೆ ಮಂಜೂರು ಮಾಡಬೇಕೆಂದು ತನ್ನ ಮೇಲಧಿಕಾರಿಗೆ ಕೋರಿಕೊಂಡಿದ್ದಾನೆ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್.
ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು
ಮಹಾರಾಜ್ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗೌರವ ಚೌಧರಿ ನವವಿವಾಹಿತ. ಕಳೆದ ತಿಂಗಳು ಮದುವೆಯಾಗಿದೆ. ರಜಾ ಚೀಟಿಯ ಸಾರಾಂಶ:
‘ಬಹಳ ದಿನಗಳಿಂದ ರಜೆ ತೆಗೆದುಕೊಂಡಿಲ್ಲ ಎಂದು ನನ್ನ ಹೆಂಡತಿ ಕೋಪಗೊಂಡಿದ್ದಾಳೆ. ಫೋನ್ ಮಾಡಿದರೂ ತನ್ನೊಂದಿಗೆ ಮಾತನಾಡುತ್ತಿಲ್ಲ. ಫೋನ್ ಮಾಡಿದಾಗೆಲ್ಲ ತನ್ನ ತಾಯಿಗೆ ಫೋನ್ ಕೊಡುತ್ತಾಳೆ. ಸೋದರಳಿಯನ ಹುಟ್ಟುಹಬ್ಬಕ್ಕೆ ಖಂಡಿತ ಬರುತ್ತೇನೆ ಎಂದು ಹೇಳಿದ್ದೇನೆ. ಆದರೆ ರಜೆ ತೆಗೆದುಕೊಳ್ಳದೆ ಹೋಗುವುದು ಹೇಗೆ? ಹಾಗಾಗಿ ಹೆಂಡತಿಯೊಂದಿಗೆ ಸಮಯ ಕಳೆಯಲು ನನಗೆ ಏಳು ದಿನಗಳ ಕಾಲ ರಜೆ ಮಂಜೂರು ಮಾಡಬೇಕಾಗಿ ವಿನಂತಿ. ನನ್ನ ಹೆಂಡತಿ ಭಾರತ-ನೇಪಾಳದ ಗಡಿ ಪ್ರದೇಶದಲ್ಲಿರುವ ಮಾವೂ ಜಿಲ್ಲೆಯಲ್ಲಿ ವಾಸಿಸುತ್ತಾಳೆ’.
ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್
ರಜೆಯ ಅರ್ಜಿಯನ್ನು ಸ್ವೀಕರಿಸಿದ ಎಎಎಸ್ಪಿ, ಜನವರಿ 10 ರಿಂದ ಗೌರವ ಚೌಧರಿಗೆ ಐದು ದಿನಗಳ ಕಾಲ ರಜೆ ಮಂಜೂರು ಮಾಡಿದ್ದಾರೆ.
ನೀವು ಎಂದಾದರೂ ಇಷ್ಟು ಪ್ರಾಮಾಣಿಕತೆಯಿಂದ ಅದರಲ್ಲೂ ಭಾವನಾತ್ಮಕ ಕಾರಣಗಳಿಗಾಗಿ ರಜೆ ಚೀಟಿ ಬರೆದಿದ್ದು ಇದೆಯೆ? ನೆನಪಿಸಿಕೊಳ್ಳಿ. ಬರೆದರೆ ವೈರಲ್ ಆಗುವುದು ಗ್ಯಾರಂಟಿ! ಎಂಬ ಭಯವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ