AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಹಣ್ಣಿನಂತೆ ಸುಲೀತೀನಿ, ಟೊಮ್ಯಾಟೋನಂತೆ ಹೆಚ್ತೀನಿ, ಬ್ರೆಡ್​ನಂತೆ ಪೀಸ್​ಪೀಸ್ ಮಾಡ್ತೀನಿ

Body Art: ಇವು ಈಕೆಯ ಜೀವಂತ ಕಾಲುಗಳು. ಟೊಮ್ಯಾಟೋ ತಿಂದಾಗ ಟೊಮ್ಯಾಟೋನಂತೆ, ಬಾಳೆಹಣ್ಣು ತಿಂದಾಗ ಬಾಳೆಹಣ್ಣಿನಂತೆ, ಬ್ರೆಡ್​ ತಿಂದಾಗ ಬ್ರೆಡ್​ನಂತೆ ಆಗುತ್ತವಾ? ಏನಿದು ಮ್ಯಾಜಿಕ್, ನೋಡಿ ವಿಡಿಯೋ.

ಬಾಳೆಹಣ್ಣಿನಂತೆ ಸುಲೀತೀನಿ, ಟೊಮ್ಯಾಟೋನಂತೆ ಹೆಚ್ತೀನಿ, ಬ್ರೆಡ್​ನಂತೆ ಪೀಸ್​ಪೀಸ್ ಮಾಡ್ತೀನಿ
ತನ್ನ ಕಾಲುಗಳ ಮೇಲೆ ಚಿತ್ರಿಸಿಕೊಂಡ ಕೆನಡಿಯನ್ ಕಲಾವಿದೆ
TV9 Web
| Edited By: |

Updated on: Jan 11, 2023 | 1:19 PM

Share

Viral Video: ಜಾಸ್ತಿ ಆಡಿದೆಯೋ ಚರ್ಮಾ ಸುಲಿದುಬಿಡ್ತೀನಿ ನೋಡು ಮತ್ತೆ! ಏನಾದರೂ ತಂಟೆ ಮಾಡಿದಾಗೆಲ್ಲ ಹೀಗೆ ಮನೆಯಲ್ಲಿ ದೊಡ್ಡವರು ಗದರುತ್ತಿದ್ದರು. ಆಗೆಲ್ಲಾ ಅದನ್ನು ಕಲ್ಪಿಸಿಕೊಂಡೇ ಬೇಡಪ್ಪಾ ಎಂದು ತೆಪ್ಪಗೆ ಇರುತ್ತಿದ್ದ ಮುಗ್ಧ ಕಾಲ ಅದಾಗಿತ್ತು. ಆದರೆ ಈಗ? ಹೀಗೇನಾದರೂ ಹೇಳಿದಿರೋ, ಈಗಿನ ಮಕ್ಕಳು ಹೇಗೆ? ಎಂದು ಗೂಗಲ್ ಸರ್ಚ್​ ಎಂಜಿನ್​ನಲ್ಲಿ ಹುಡುಕಿ, ಹೀಗಾ? ಎಂದು ತೋರಿಸಿಬಿಡುತ್ತಾರೆ. ಹಾಗಾಗಿ ಒಂದೊಂದು ಪದವನ್ನು ಮಾತನಾಡುವಾಗಲೂ ಬಹಳ ಹುಷಾರಾಗಿರಬೇಕು. ಇದೆಲ್ಲ ಈಗೇಕೆ ಎಂದು ಯೋಚಿಸುತ್ತಿದ್ದೀರಾ? ಹೌದು, ಈ ವಿಡಿಯೋ ನೋಡಿದರೆ ವಿಷಯದ ಬಗ್ಗೆ ನಿಮಗೊಂದು ಅಂದಾಜು ಬರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by MIMI CHOI (@mimles)

ವೈರಲ್ ಆಗಿರುವ ಈ ವಿಡಿಯೋದಲ್ಲಿ ಈಕೆ ತನ್ನ ಕಾಲುಗಳನ್ನು ಟೊಮ್ಯಾಟೋನಂತೆ ಕತ್ತರಿಸಿಕೊಳ್ಳುತ್ತಾರೆ. ಬ್ರೆಡ್​ನಂತೆ ಪೀಸ್​ ಪೀಸ್ ಮಾಡಿಕೊಳ್ಳುತ್ತಾರೆ. ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಿದುಕೊಳ್ಳುತ್ತಾರೆ. ಜೋಳದ ತೆನೆಯಂತೆ ಸುಲಿದುಕೊಳ್ಳುತ್ತಾರೆ. ಏನೂ ಆಗುವುದೇ ಇಲ್ಲವಾ? ಈಕೆಗೆ ಯಾರು ಇಂಥ ಶಿಕ್ಷೆ ವಿಧಿಸಿದ್ದು, ಏನಾಗಿದೆ? ಎಂದು ಊಹಿಸಿಕೊಳ್ಳುತ್ತಿದ್ದೀರಾ?

ಏನೂ ಆಗಿಲ್ಲ, ಕಲೆಯ ಹುಚ್ಚು ಹಿಡಿದುಕೊಂಡಿದೆ. ಈಕೆ ಕೆನಡಾ ಮೂಲದ ಮೇಕಪ್​ ಕಲಾವಿದೆ ಮಿಮಿ ಚೋಯ್​ . ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸುವ ಖಯಾಲಿ ಈಕೆಯದು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾತ್ರ ರಿಯಲಿಸ್ಟಿಕ್​ ಚಿತ್ರಗಳನ್ನು ತನ್ನ ಕಾಲುಗಳ ಮೇಲೆ ಸೃಷ್ಟಿಸಿಕೊಂಡಿದ್ದಾರೆ. ಈ ಕಲೆ ಹೀಗೆ ಪಕ್ಕಾಗಿ ಕೈಹಿಡಿಯಬೇಕೆಂದರೆ ಇದರ ಹಿಂದೆ ಅದೆಷ್ಟು ಶ್ರಮವಿರಬೇಡ?

ಇವರ ಇನ್​ಸ್ಟಾಗ್ರಾಂ ಪುಟದಲ್ಲಿ ಮುಖದ ಮೇಲೆ ವಿವಿಧ ರೀತಿಯ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಪ್ರಸ್ತುತ ವಿಡಿಯೋ ಅನ್ನು ಡಿಸೆಂಬರ್ 15ರಂದು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 94 ಲಕ್ಷ ಜನರು ಇಷ್ಟಪಟ್ಟಿದ್ಧಾರೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಈ ಕಲೆಯು ತುಂಬಾ ಪರಿಣಾಮಕಾರಿಯಾಗಿದೆ ಎಂದಿದ್ದಾರೆ ಅನೇಕರು. ಅತ್ಯಂತ ಕಲಾತ್ಮಕವಾಗಿ, ನೈಜವಾಗಿ ಚಿತ್ರಿಸಲಾಗಿದೆ ಎಂದಿದ್ಧಾರೆ ಹಲವರು. ತನ್ನ ಕಲ್ಪನಾ ಸಾಮರ್ಥ್ಯದಿಂದ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ಕಲೆ ಎಂದರೆ ಏನು? ಫೋಕಸ್​. ಗಮನ ಕೊಟ್ಟರೆ ಅದು ನೀವಂದುಕೊಂಡಿದ್ದಕ್ಕಿಂತ ದೂರ ನಿಮ್ಮನ್ನು ಕೊಂಡೊಯ್ಯುತ್ತದೆ.

ಮಿಮಿ ಚೋಯ್​ ಥರ ಕಾಲು ಕತ್ತರಿಸಬಿಡ್ತೀನಿ ಅಂತೀರಾ ನಿಮ್ಮ ಮಕ್ಕಳಿಗೆ ಗದರುವಾಗ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ