ಡಯೆಟ್ ಅಂತೆ ಡಯೆಟ್​! ಪಕೋಡಾ ತಿನ್ನು ವರ್ಕೌಟ್​ ಮಾಡು; ರೈಟ್​ ರೈಟ್​ ಆಂಟೀ ಎಂದ ನೆಟ್ಟಿಗರು

No Diet : ಮಯೋನೈಸ್ ಸಾಸ್​ ನಿನ್ನ ಗರ್ಲ್​ಫ್ರೆಂಡ್​ ಏನು? ಪಕೋಡಾ ಜೊತೆಗೆ ಪುದೀನಾ ಚಟ್ನಿನೇ ತಿನ್ನು. ಭಜ್ಜಿ ತಿನ್ನು ವರ್ಕೌಟ್ ಮಾಡು. ನಿಮ್ಮಪ್ಪನ ಮುಂದೆ ಮಾತ್ರ ಈ ತಟ್ಟೆ ಇಡಬೇಡ ಮತ್ತೆ! ಕೇಳಿ ಅಮ್ಮಮಗನ ಈ ಸಂಭಾಷಣೆ.

ಡಯೆಟ್ ಅಂತೆ ಡಯೆಟ್​! ಪಕೋಡಾ ತಿನ್ನು ವರ್ಕೌಟ್​ ಮಾಡು; ರೈಟ್​ ರೈಟ್​ ಆಂಟೀ ಎಂದ ನೆಟ್ಟಿಗರು
ಪಕೋಡಾ ತಿನ್ನು ವರ್ಕೌಟ್ ಮಾಡು ಎಂದು ಮಗನಿಗೆ ಹೇಳುತ್ತಿರುವ ನೀನಾ ಕಪೂರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 11, 2023 | 11:53 AM

Viral Video : ಬಿಸಿಬಿಸಿ ಪಕೋಡಾ ಮಾಡುತ್ತಿದ್ದೇನೆ ತಿನ್ನು ಎನ್ನುತ್ತಾಳೆ ತಾಯಿ. ನನಗೆ ಬೇಡ ನಾನು ಡಯೆಟ್ ಮಾಡುತ್ತಿದ್ದೇನೆ ಮತ್ತೀಗ ವರ್ಕೌಟ್ ಮಾಡೋದಕ್ಕೆ ಹೋಗಬೇಕು ಎನ್ನುತ್ತಾನೆ ಮಗ. ತಾಯಿ ಒತ್ತಾಯಿಸಿದಾಗ ಆಯ್ತು ತಿನ್ನುತ್ತೇನೆ ಆದರೆ ಮಯೋನೈಸ್​ ಸಾಸ್​ ಜೊತೆ ಮಾತ್ರ ಎನ್ನುತ್ತಾನೆ. ತಾಯಿಗೆ ಪಿತ್ಥ ನೆತ್ತಿಗೇರುತ್ತದೆ, ಮಯೋನೈಸ್​ ಸಾಸ್​ ನಿನ್ನ ಗರ್ಲ್​ಫ್ರೆಂಡ್​ ಏನು? ಯಾವಾಗಲೂ ಮಯೋನೈಸ್​! ಇಲ್ಲ ಪುದೀನಾ ಚಟ್ನಿ ಹಚ್ಚಿಕೊಂಡೇ ಪಕೋಡಾ ತಿನ್ನು. ತಿಂದು ವರ್ಕೌಟ್ ಮಾಡು ಎಂದು ಹುಸಿಗದರುತ್ತಾಳೆ ತಾಯಿ. ಆದರೆ ಈ ತಟ್ಟೆಯನ್ನು ನಿನ್ನ ತಂದೆಯ ಮುಂದೆ ಮಾತ್ರ ಇಡಬೇಡ ಎಂಬ ತಾಕೀತನ್ನೂ ಮಾಡುತ್ತಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Neena Kapoor (@kapoorss2)

ನೀನಾ ಕಪೂರ್​ ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ‘ಮಮ್ಮಿ ನಿಮಗೆ ಗೊತ್ತಲ್ಲ, ನಾನು ವರ್ಕೌಟ್ ಮಾಡ್ತೀನಿ. ನಾನು ಜಿಮ್​ಗೆ ಹೋಗುತ್ತಿದ್ದಂತೆ ನೀವು ಹೀಗೆ ಒಳ್ಳೊಳ್ಳೆ ಸ್ನ್ಯಾಕ್ಸ್​ ಮಾಡೋದಕ್ಕೆ ಶುರು ಮಾಡಿದ್ದೀರಿ. ಬೇಡ ನಾನು ಡಯೆಟ್ ಮಾಡಬೇಕು ಎನ್ನುತ್ತಾನೆ ಮಗ.’ ನಾನು ಯಾವಾಗಲೂ ಚೆನ್ನಾಗಿಯೇ ಅಡುಗೆ ಮಾಡುತ್ತೇನೆ ಎಂದು ಸಮರ್ಥಿಸಿಕೊಳ್ಳುತ್ತಾಳೆ ತಾಯಿ. ಜೊತೆಗೆ, ‘ನಾಳೆ ನನ್ನಷ್ಟು ವಯಸ್ಸಾದಾಗ ನೀನು ಇಂಥದೆಲ್ಲ ತಿನ್ನಲು ಸಾಧ್ಯವಿಲ್ಲ. ಆದರೆ ಈಗ ಕೂಡ ನೀ ತಿನ್ನುವುದಿಲ್ಲ ಎನ್ನುತ್ತಿದ್ದೀ. ಸುಮ್ಮನೇ ತಿನ್ನು’ ಎನ್ನುತ್ತಾಳೆ.

ಇದನ್ನೂ ಓದಿ : ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್

ಕೊನೆಗೆ ತಟ್ಟೆ ತುಂಬಿದ ಪಕೋಡಾಗಳನ್ನು ಅವನಿಗೆ ಕೊಡುತ್ತ, ತಂದೆಗೆ ಮಾತ್ರ ಖಂಡಿತ ಕೊಡಬಾರದು ಎನ್ನುತ್ತಾಳೆ. ಆಯ್ತು ಮಯೋನೈಸ್ ಸಾಸ್​ ಕೊಟ್ಟರೆ ಮಾತ್ರ ತಿನ್ನುತ್ತೇನೆ ಎನ್ನುತ್ತಾನೆ. ಪುದೀನಾ ಚಟ್ನಿ ಜೊತೆನೇ ತಿನ್ನಬೇಕು ಎನ್ನುತ್ತಾಳೆ. ಅವ ಒಪ್ಪದೇ ಇದ್ಧಾಗ, ಮಯೋನೈಸ್​ ನಿನ್ನ ಗರ್ಲ್​ಫ್ರೆಂಡ್​ ಏನು? ಎಂದು ಕೇಳುತ್ತಾಳೆ. ಚೆನ್ನಾಗಿ ತಿನ್ನು ವ್ಯಾಯಾಮ ಮಾಡು ನಡಿ ಎಂದು ಮುದ್ದಿನಿಂದ ಗದರುತ್ತಾಳೆ.

ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು

ಡಿಸೆಂಬರ್ 26ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 6 ಲಕ್ಷ ಜನರು ನೋಡಿದ್ದಾರೆ. 18,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕ ನೆಟ್ಟಿಗರು, ನೀವು ಹೇಳಿದ್ದು ಸರಿ ಇದೆ ಆಂಟೀ ಎಂದು ಹೊಗಳಿದ್ದಾರೆ. ಇದು ಬಹಳ ಉಲ್ಲಾಸದಿಂದ ಕೂಡಿದೆ ಈ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ನಮ್ಮ ಮನೆಯಲ್ಲೂ ಹೀಗೆಯೇ ಆಗುತ್ತಿರುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ರಾಮೆನ್​ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್​ ವಿಡಿಯೊ ವೈರಲ್

ಈ ಚಳಿಯಲ್ಲಿ ಈ ವಿಡಿಯೋ ನೋಡುತ್ತ ನಿಮಗೂ ಈಗ ಪಕೋಡಾ ತಿನ್ನಬೇಕು ಅನ್ನೋ ಆಸೆ ಉಂಟಾಗುತ್ತಿದೆಯಾ? ತಿನ್ನಿ ಆದರೆ ವರ್ಕೌಟ್ ಮಾಡಿ ಎಂದು ಆಂಟಿ ಹೇಳಿರುವ ಮಾತನ್ನು ಮಾತ್ರ ಮರೆಯಬೇಡಿ. ಮತ್ತೆ ಮಯೋನೈಸ್ ಸಾಸ್​ ಜಂಕ್, ಆದ್ದರಿಂದ ಚಟ್ನಿಯನ್ನೇ ತಿನ್ನಿ. ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:50 am, Wed, 11 January 23

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು