ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಗಳ ಬಂಧನ!
ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ಗೆ ನುಗ್ಗಿ ಹೋಟೆಲ್ ಮಾಲೀಕ ಸೇರಿದಂತೆ ಸಿಬ್ಬಂದಿಗಳ ಮೇಲೆ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಇದೇ ಹೋಟೆಲ್ನಲ್ಲಿ ಗಲಾಟೆ ಮಾಡಿದ್ದರು ಎಂದು ಹೋಟೆಲ್ ಮಾಲೀಕ ಹೇಳಿದ್ದಾರೆ.
ಬೆಳಗಾವಿ: ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪುಡಿ ರೌಡಿಗಳನ್ನು ಇಂದು ಬಂಧನ ಮಾಡಲಾಗಿದೆ. ಕಳೆದ ರಾತ್ರಿ ಬೈಲಹೊಂಗಲ ಪಟ್ಟಣದ ಗ್ರೀನ್ ಗಾರ್ಡನ್ ಹೋಟೆಲ್ನ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರಾಜು ಕಡಕೋಳ, ರಾಜು ತಟ್ಟಿಮನಿ, ಶಶಿಕುಮಾರ್ ಇಳಿಗೇರ, ವೆಂಕಟೇಶ ದಾಸೋಗ, ಬಸವರಾಜ ಅಂಬಾಜಿ ರೌಡಿಗಳನ್ನು ಬೈಲಹೊಂಗಲ ಪೊಲೀಸರು ಬಂಧನ ಮಾಡಿದ್ದಾರೆ.
ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್‌ಗೆ ನುಗ್ಗಿ ಹೋಟೆಲ್ ಮಾಲೀಕ ಸೇರಿದಂತೆ ಸಿಬ್ಬಂದಿಗಳ ಮೇಲೆ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಇದೇ ಹೋಟೆಲ್ನಲ್ಲಿ ಗಲಾಟೆ ಮಾಡಿದ್ದರು ಎಂದು ಹೋಟೆಲ್ ಮಾಲೀಕ ಹೇಳಿದ್ದಾರೆ. ಇದೀಗ ದುಷ್ಕರ್ಮಿಗಳ ವಿರುದ್ಧ ಕೇಸ್ ಕೊಟ್ಟಿದ್ದಕ್ಕೆ ಮತ್ತೆ ಹಲ್ಲೆ ಮಾಡಿದ್ದಾರೆ.
ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಘಟನೆ ನಡೆದ ಎರಡೇ ಗಂಟೆಯಲ್ಲಿ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ.
Published On - 1:43 pm, Tue, 2 August 22