Viral Video: ಬಿಯರ್ ಬಾಟಲಿಗಳ ಕದ್ದು ಓಡಿಹೋಗುವ ಕಳ್ಳನ ಪ್ಲ್ಯಾನ್ ಏನೋ ಚೆನ್ನಾಗಿತ್ತು, ಆದರೆ ಫೇಲ್ ಆಗ್ಬಿಡ್ತು ನೋಡಿ
ಕಳ್ಳತನದ ಕಸುಬಿನಲ್ಲಿ ಈತ ಹೊಸಬ ಅನ್ಸುತ್ತೆ, ಬಿಯರ್ ಬಾಟಲಿಗಳನ್ನು ಕದ್ದು ಪರಾರಿಯಾಗಲು ಹೋಗಿ ಪೇಚಿಗೆ ಸಿಲುಕಿರುವ ಕಳ್ಳನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳ್ಳತನದ ಕಸುಬಿನಲ್ಲಿ ಈತ ಹೊಸಬ ಅನ್ಸುತ್ತೆ, ಬಿಯರ್ ಬಾಟಲಿಗಳನ್ನು ಕದ್ದು ಪರಾರಿಯಾಗಲು ಹೋಗಿ ಪೇಚಿಗೆ ಸಿಲುಕಿರುವ ಕಳ್ಳನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆಸ್ಟ್ರೇಲಿಯಾದ್ದಾಗಿದ್ದು, ಕಳ್ಳತನ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಕಳ್ಳ ಇಲ್ಲಿದ್ದಾನೆ. ಜೂನ್ 6 ರಂದು ಈ ಘಟನೆ ನಡೆದಿದೆ. ಬಾಟಲ್ ಓ ಬೀಚ್ಬೋರೊ ಒಂದು ಲಿಕ್ಕರ್ ಶಾಪ್ಗೆ ಕಳ್ಳನೊಬ್ಬ ನುಗ್ಗಿದ್ದಾನೆ, ಆತ ನಿಜವಾಗಿ ಕಳ್ಳನೋ ಅಥವಾ ಆ ಶಾಪ್ಗೆ ನುಗ್ಗಿದ ಮೇಲೆ ಕಣ್ಣತನ ಮಾಡುವ ಮನಸ್ಸಾಯಿತೋ ತಿಳಿದಿಲ್ಲ.
ಎಲ್ಲರಂತೆ ಯಾವ ಮದ್ಯ ಬೇಕು ಎಂದು ಹುಡುಕಾಡಿದ್ದಾರೆ. ಆಮೇಲೆ ಎಣ್ಣೆಯ ಬಾಟಲಿಗಳಿರುವ ಒಂದು ಬಾಕ್ಸ್ನ್ನು ತೆಗೆದುಕೊಂಡು ಕ್ಯಾಶ್ ಕೌಂಟರ್ವರೆಗೆ ಬಂದಿದ್ದಾನೆ, ಆಗಲೇ ಅವನ ಮನಸ್ಸು ಇಲ್ಲಿಂದ ಓಡು ಎಂದು ಹೇಳಿರಬೇಕು ತಕ್ಷಣ ಕೌಂಟರ್ನಿಂದ ಬಾಗಿಲಿನತ್ತ ಓಡಿದ್ದಾನೆ. ಆದರೆ ಬಾಗಿಲು ತೆಗಿಬೇಕಲ್ಲ ಅದು ಲಾಕ್ ಆಗಿದೆ.
ಈ ರೀತಿಯ ಭಯದಿಂದಲೇ ಶಾಪ್ನ ಮಾಲೀಕರು ಲಾಕಿಂಗ್ ಸಿಸ್ಟಂ ಜಾರಿಗೆ ತಂದಿದ್ದಾರೆ. ಪ್ರತಿಯೊಬ್ಬರು ಒಳಗೆ ಬಂದ ಕೂಡಲೇ ಬಾಗಿಲು ಲಾಕ್ ಆಗುತ್ತದೆ, ಆಮೇಲೆ ಬಿಲ್ಲಿಂಗ್ ಎಲ್ಲವೂ ಮುಗಿದ ಬಳಿಕವೇ ಮತ್ತೆ ಬಾಗಿಲು ತೆರೆಯುತ್ತದೆ.
ಮತ್ತಷ್ಟು ಓದಿ:ಉಬ್ಬಿದ ಕೆನ್ನೆ ಇಷ್ಟವಿಲ್ಲ ತೆಳ್ಳಗಾಗು ಎಂದು ಪತಿಯ ಚಿತ್ರಹಿಂಸೆ, 17 ಕೆಜಿ ಕಡಿಮೆಯಾಗಿ ಅಸ್ಥಿಪಂಜರದಂತಾದ್ಲು ಆದರೂ ಬಿಟ್ಟು ಹೋದ
ಆತ ಕದ್ದು ಓಡುವಾಗಲೂ ಹಾಗೆಯೇ ಆಗಿದೆ ಬಾಗಿಲುಗಳು ಲಾಕ್ ಆಗಿವೆ, ಎಲ್ಲಾ ಕಡೆಯಿಂದಲೂ ಬಾಗಿಲುಗಳನ್ನು ತೆರೆಯಲು ಟ್ರೈ ಮಾಡಿದ್ದಾನೆ, ಆತನಿಂದ ಸಾಧ್ಯವಾಗಿಲ್ಲ, ಕೌಂಟರ್ನಲ್ಲಿ ಕುಳಿತವಳು ಓರ್ವ ಲೇಡಿ, ಆಕೆ ಶಾಂತವಾಗಿದ್ದಾಳೆ, ಆತನನ್ನು ಹಿಡಿಯುವ ಪ್ರಯತ್ನವನ್ನೂ ಮಾಡಿಲ್ಲ, ಬಳಿಕ ಆತ ಬಿಯರ್ ಬಾಟಲಿಗಳಿದ್ದ ಬಾಕ್ಸ್ನ್ನು ಕೋಪದಿಂದ ಕೌಂಟರ್ ಬಳಿ ಇಟ್ಟು ಹೋಗುತ್ತಾನೆ, ಆಗ ಬಾಗಿಲು ತೆರೆಯುತ್ತದೆ.
A man attempts to run from a shop without paying for a box of drinks, but the locked door stops him in his tracks.
Find more: https://t.co/8xyWy2cBPY pic.twitter.com/Oroi4Shhbk
— Sky News (@SkyNews) June 7, 2023
ಹಲವು ಮಂದಿ ಈ ವಿಡಿಯೋವನ್ನು ನೋಡಿ ಕಮೆಂಟ್ ಮಾಡಿದ್ದಾರೆ, ಆಕೆ ಧೈರ್ಯವಂತೆ ಎಂದು ಅಲ್ಲಿದ್ದ ಮಹಿಳೆಯನ್ನು ಕೆಲವರು ಹೊಗಳಿದರೆ ಇನ್ನೂ ಕೆಲವರು ಆ ಬಾಕ್ಸ್ ಅನ್ನು ಎಲ್ಲೇ ಇಟ್ಟುಬಿಡು ಇಲ್ಲವಾದರೆ ಬಾಗಿಲು ತೆರೆಯುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಅಲ್ಲಿರುವ ಮಹಿಳೆಗೆ ಆತ ಏನಾದರೂ ಮಾಡಿದ್ದರೆ, ಜಾಗ್ರತೆಯಿಂದಿರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ