Andhra Pradesh: ಬಿಯರ್ ಬಾಟಲಿಗಳಿದ್ದ ಟ್ರಕ್ ಪಲ್ಟಿ, ನಾ ಮುಂದು ತಾ ಮುಂದು ಎಂದು ಹೊತ್ತೊಯ್ದ ಸ್ಥಳೀಯರು, ಮಾಲೀಕನಿಗೆ ಫಜೀತಿ
ಬಿಯರ್ ಬಾಟಲಿಗಳಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ನಾ ಮುಂದು ತಾ ಮುಂದು ಎಂದು ಮುತ್ತಿಗೆ ಹಾಕಿ ಕೊಂಡೊಯ್ದಿದ್ದಾರೆ. ಇದರಿಂದ ಮಾಲೀಕನಿಗೆ ಭಾರಿ ಫಜೀತಿ ಉಂಟಾಗಿತ್ತು.
ಬಿಯರ್ ಬಾಟಲಿಗಳಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ನಾ ಮುಂದು ತಾ ಮುಂದು ಎಂದು ಮುತ್ತಿಗೆ ಹಾಕಿ ಕೊಂಡೊಯ್ದಿದ್ದಾರೆ. ಇದರಿಂದ ಮಾಲೀಕನಿಗೆ ಭಾರಿ ಫಜೀತಿ ಉಂಟಾಗಿತ್ತು. ಆಂಧ್ರಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ, ಅನೇಕ ಬಾಟಲಿಗಳು ಒಡೆದಿದ್ದವು, ಇನ್ನೂ ಕೆಲವು ಬಾಟಲಿಗಳು ಸುರಕ್ಷಿತವಾಗಿದ್ದವು. ಈ ಸುದ್ದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಗವಾಗಿ ಹರಡಿತು.
ತಕ್ಷಣ ರಸ್ತೆಗೆ ಆಗಮಿಸಿದ ಸ್ಥಳೀಯರು ತಮ್ಮ ಕೈಲಾದಷ್ಟು ಬಾಟಲಿಗಳನ್ನು ತೆಗೆದುಕೊಂಡು ಹೋದರು, ಸುಮಾರು 200 ಬಿಯರ್ ಕೇಸ್ ತುಂಬಿದ್ದ ಟ್ರಕ್ ಟ್ರಕ್ ಇದಾಗಿತ್ತು.
ಮತ್ತಷ್ಟು ಓದಿ: Beer Record: ಬೇಸಿಗೆ ಎಫೆಕ್ಟ್; ತಂಪು ತಂಪು ಬಿಯರ್ ಬಿಯರ್; ತೆಲಂಗಾಣದಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗೆ?
ಇದು ಬಯಾವರಂ ಹೆದ್ದಾರಿಯಲ್ಲಿ ನಡೆದಿದ್ದು, ಟ್ರಕ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿತ್ತು, ಚಾಲಕ ನಿಲ್ಲಿಸಲು ಯತ್ನಿಸಿದಾಗ ಮಾರ್ಗಮಧ್ಯೆ ಟ್ರಕ್ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ತಕ್ಷಣ 200ಕ್ಕೂ ಹೆಚ್ಚು ಬಿಯರ್ ಕೇಸ್ ರಸ್ತೆಗೆ ಬಿದ್ದಿದೆ.
VIDEO | A vehicle carrying 200 cartons of beer overturned in Andhra Pradesh’s Anakapalli on Tuesday, following which people rushed to grab the beer bottles. pic.twitter.com/nIYHQCF9U8
— Press Trust of India (@PTI_News) June 6, 2023
ಸ್ಥಳೀಯರು ಇದರ ಸಂಪೂರ್ಣ ಪ್ರಯೋಜನ ಪಡೆದಿದ್ದಾರೆ. ತಕ್ಷಣ ಸ್ಥಳೀಯರು ಅಪಘಾತದ ಸ್ಥಳಕ್ಕೆ ದಾಳಿ ನಡೆಸಿ ತಮ್ಮ ಕೈಲಾದಷ್ಟು ಬಾಟಲಿಗಳನ್ನು ಎತ್ತಿಕೊಂಡು ಓಡಿ ಹೋಗಿರುವ ವಿಡಿಯೋ ಈಗ ವೈರಲ್ ಆಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ