AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beer Record: ಬೇಸಿಗೆ ಎಫೆಕ್ಟ್; ತಂಪು ತಂಪು ಬಿಯರ್ ಬಿಯರ್; ತೆಲಂಗಾಣದಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗೆ?

Telangana Sees Record Beer Sales In May: ಸುಡು ಬೇಸಿಗೆ ಉಚ್ಛ್ರಾಯ ಸ್ಥಿತಿಯಲ್ಲಿರುವ ಮೇ ತಿಂಗಳಲ್ಲಿ ತೆಲಂಗಾಣ ಜನರು ಬಿಯರ್ ಮೊರೆ ಹೋಗುತ್ತಿದ್ದಾರೆ. ಮೇ 1ರಿಂದ 18ರವರೆಗೆ ಅಲ್ಲಿ 583 ಕೋಟಿ ರೂ ಮೌಲ್ಯದ ಬಿಯರ್ ಮಾರಾಟವಾಗಿದೆ.

Beer Record: ಬೇಸಿಗೆ ಎಫೆಕ್ಟ್; ತಂಪು ತಂಪು ಬಿಯರ್ ಬಿಯರ್; ತೆಲಂಗಾಣದಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗೆ?
ಮದ್ಯದಂಗಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 5:22 PM

ಹೈದರಾಬಾದ್: ಈ ಬಾರಿ ಬೇಸಿಗೆ ಸಿಕ್ಕಾಪಟ್ಟೆ ಸುಡುಸುಡುತ್ತಿದ್ದು ಜನರು ಸಹಜವಾಗಿಯೇ ತಂಪು ಪಾನೀಯಗಳತ್ತ ಮುಗಿಬೀಳುತ್ತಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಜನರು ಬಿಯರ್ (Beer) ಮೊರೆ ಹೋಗಿದ್ದಂತಿದೆ. ಬೇಸಿಗೆ ಸೀಸನ್ ಉಚ್ಛ ಸ್ಥಿತಿಯಲ್ಲಿರುವ ಮೇ ತಿಂಗಳಲ್ಲಿ ತೆಲಂಗಾಣದಲ್ಲಿ ದಾಖಲೆ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿರುವುದು ತಿಳಿದುಬಂದಿದೆ. ಟಿವಿ9 ತೆಲುಗು ವಾಹಿನಿಯ ವರದಿ ಪ್ರಕಾರ ತೆಲಂಗಾಣದಲ್ಲಿ ಮೇ ತಿಂಗಳಲ್ಲಿ ಬಿಯರ್ ಸೇಲ್ಸ್ ಭರ್ಜರಿಯಾಗಿದೆ. ಮೇ 1ರಿಂದ 18ರವರೆಗೆ ರಾಜ್ಯಾದ್ಯಂತ 583 ಕೋಟಿ ರೂ ಮೌಲ್ಯದ ಬಿಯರ್ ಮಾರಾಟವಾಗಿದೆಯಂತೆ. ಹಾಗಂತ ತೆಲಂಗಾಣ ಅಬಕಾರಿ ಇಲಾಖೆ ಮಾಹಿತಿ ನೀಡಿದ್ದಾಗಿ ಟಿವಿ9 ತೆಲುಗು ವರದಿ ಮಾಡಿದೆ. ಮೇ ತಿಂಗಳು ಪೂರ್ಣಗೊಳ್ಳಲು ಇನ್ನೂ ಸಮಯ ಇದೆ. ಈ ಒಂದು ತಿಂಗಳಲ್ಲಿ 1,000 ಕೋಟಿ ರೂ ಮೌಲ್ಯದ ಬಿಯರ್ ತೆಲಂಗಾಣದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಅಂದರೆ ಬಿಯರ್​ವೊಂದರಿಂದಲೇ ಸರ್ಕಾರಕ್ಕೆ ಒಂದು ತಿಂಗಳಲ್ಲಿ 1,000ಕೋಟಿ ಆದಾಯ ಬರಲಿದೆ.

ಅಬಕಾರಿ ಇಲಾಖೆ ದತ್ತಾಂಶದ ಪ್ರಕಾರ ಮೇ 1ರಿಂದ 18ರವರೆಗೂ ತೆಲಂಗಾಣದ ವಿವಿಧೆಡೆ 35,25,247 ಕ್ಯಾನ್​ಗಳಷ್ಟು ಬಿಯರ್ ಮಾರಾಟವಾಗಿದೆ. ನಲಗೊಂಡ ಜಿಲ್ಲೆಯಲ್ಲಿ ಅತಿಹೆಚ್ಚು ಬಿಯರ್ ಮಾರಾಟವಾಗಿದೆ. ಇಲ್ಲಿ 48.14 ಕೋಟಿ ರೂ ಮೌಲ್ಯದ ಬಿಯರ್ ಸೇಲ್ ಆಗಿದೆ. ನಲಗೊಂಡ ಜಿಲ್ಲೆಯ ನಂತರದ ಸ್ಥಾನ ಕರೀಮ್​ನಗರದ್ದು.

ಇದನ್ನೂ ಓದಿGo First: ಗೋಫಸ್ಟ್ ಸಂಸ್ಥೆ ನಿರಾಳ: ಇನ್ಸಾಲ್ವೆನ್ಸಿ ಅವಕಾಶ ಎತ್ತಿಹಿಡಿದ ಎನ್​ಸಿಎಲ್​ಎಟಿ; ನ್ಯಾಯಮಂಡಳಿ ಬಳಿ ಬೇರೆ ಅರ್ಜಿ ಸಲ್ಲಿಸಲು ವಿಮಾನ ಮಾಲೀಕರಿಗೆ ಸೂಚನೆ

ಕುತೂಹಲ ಎಂದರೆ ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇವಲ 3 ದಿನದ ಅವಧಿಯಲ್ಲಿ 450 ಕೋಟಿ ರೂಗೂ ಹೆಚ್ಚು ಮೌಲ್ಯದ ಬಿಯರ್ ಮಾರಾಟ ತೆಲಂಗಾಣದಲ್ಲಿ ಆಗಿತ್ತು. ಮದ್ಯ ಮಾರಾಟ ಯಾವುದೇ ಸರ್ಕಾರಕ್ಕೂ ಪ್ರಮುಖ ಆದಾಯ ಮೂಲವಾಗಿದೆ. ಬಿಯರ್ ಮೇಲಿನ ಎಂಪಿಅರ್ ದರಕ್ಕೆ ರಾಜ್ಯ ಸರ್ಕಾರ ಶೇ. 50ರಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಬೇರೆ ಮದ್ಯಗಳಿಗೆ ಎಕ್ಸೈಸ್ ಡ್ಯೂಟಿ ಶೇ. 80-85 ಇದೆ. ಬಿಯರ್ ಸೇರಿದಂತೆ ಒಟ್ಟಾರೆ ಮದ್ಯ ಮಾರಾಟದಿದ ತೆಲಂಗಾಣ ಸರ್ಕಾರಕ್ಕೆ 40,000 ಕೋಟಿ ರೂ ಆದಾಯ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿUnclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಕರ್ನಾಟಕದಲ್ಲಿ ಮದ್ಯ ಮಾರಾಟ ಎಷ್ಟು?

ಇನ್ನು ಕರ್ನಾಟಕದಲ್ಲೂ ಮದ್ಯ ಮಾರಾಟ ಪ್ರಮಾಣ ಕಡಿಮೆ ಏನಿಲ್ಲ. ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಬರುವ ಆದಾಯ ವರ್ಷಕ್ಕೆ 25,000 ಕೋಟಿಗಿಂತಲೂ ಹೆಚ್ಚು. ಈ ಹಣಕಾಸು ವರ್ಷದಲ್ಲಿ 35,000 ಕೋಟಿ ರೂ ಆದಾಯ ಗಳಿಸುವ ಗುರಿ ಇಟ್ಟುಕೊಂಡಿದೆ.

(ಗಮನಿಸಿ: ಬಿಯರ್ ಸೇರಿದಂತೆ ಯಾವುದೇ ಮದ್ಯದಲ್ಲಿ ಆಲ್ಕೋಹಾಲ್ ಅಂಶಗಳಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಮಾರಕ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿರುವ ಸಂಗತಿ. ಯಾವುದೇ ರೀತಿಯ ಮದ್ಯದ ಸೇವನೆ ಮಾಡದಿರಿ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು