Gold: ಚಿನ್ನದ ಒಡವೆ ಕೊಳ್ಳುವ ಅಥವಾ ಮಾರುವ ಮುನ್ನ ಹಾಲ್ಮಾರ್ಕ್ ವಿಚಾರ ತಿಳಿದಿರಲಿ

Hallmark Rules For Jewellery: ಹೊಸ ಹಾಲ್ಮಾರ್ಕ್ ನಂಬರ್ ಇಲ್ಲದ ಯಾವುದೇ ಚಿನ್ನವನ್ನು ಮಾರುವಂತಿಲ್ಲ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಯಲ್ಲಿದೆ. ನಿಮ್ಮಲ್ಲಿ ಇರುವ ಹಳೆಯ ಚಿನ್ನವನ್ನು ಮಾರಬೇಕೆಂದರೆ ಅದಕ್ಕೆ ಎಚ್​ಯುಐಡಿ ನಂಬರ್ ಪಡೆದೇ ಮುಂದುವರಿಯಬೇಕು.

Gold: ಚಿನ್ನದ ಒಡವೆ ಕೊಳ್ಳುವ ಅಥವಾ ಮಾರುವ ಮುನ್ನ ಹಾಲ್ಮಾರ್ಕ್ ವಿಚಾರ ತಿಳಿದಿರಲಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 3:22 PM

ಸರ್ಕಾರ ಇತ್ತೀಚೆಗೆ ಚಿನ್ನ ಹಾಗೂ ಚಿನ್ನದ ಆಭರಣಗಳ ಮಾರಾಟ ವಿಚಾರದಲ್ಲಿ ಪ್ರಮುಖ ನಿಯಮಗಳನ್ನು ರೂಪಿಸಿದೆ. ಚಿನ್ನದ ಗುಣಮಟ್ಟದಲ್ಲಿ ಏಕರೂಪ ತರುವ ನಿಟ್ಟಿನಲ್ಲಿ ಮತ್ತು ಗ್ರಾಹಕರಿಗೆ ವಂಚನೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಲ್ಮಾರ್ಕ್ ಯೂನಿಕ್ ಐಡಿ ಅಥವಾ ಎಚ್​ಯುಐಡಿ ನಂಬರ್ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಈ ಹೊಸ ಹಾಲ್ಮಾರ್ಕ್ ನಂಬರ್ ಇಲ್ಲದ ಯಾವುದೇ ಚಿನ್ನವನ್ನು ಮಾರುವಂತಿಲ್ಲ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಯಲ್ಲಿದೆ. ನಿಮ್ಮಲ್ಲಿ ಇರುವ ಹಳೆಯ ಚಿನ್ನವನ್ನು ಮಾರಬೇಕೆಂದರೆ ಅದಕ್ಕೆ ಎಚ್​ಯುಐಡಿ ನಂಬರ್ ಪಡೆದೇ ಮುಂದುವರಿಯಬೇಕು.

ಚಿನ್ನಕ್ಕೆ ಏನಿದು ಎಚ್​ಯುಐಡಿ ನಂಬರ್?

ಚಿನ್ನದ ಶುದ್ಧತೆಯ ಪ್ರಮಾಣವನ್ನು ಈ ಎಚ್​ಯುಐಡಿ ನಂಬರ್ ತೋರಿಸುತ್ತದೆ. ಇದರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಲೋಗೋ ಇರುತ್ತದೆ. ಎಷ್ಟು ಕ್ಯಾರಟ್​ನ ಚಿನ್ನ ಎಂಬುದನ್ನು ಈ ಎಚ್​ಯುಐಡಿ ನಂಬರ್​ನಿಂದ ತಿಳಿಯಬಹುದು.

ನಿಮ್ಮಲ್ಲಿ ಹಳೆಯ ಹಾಲ್ಮಾರ್ಕ್ ಚಿನ್ನ ಇದ್ದರೆ ಏನು ಮಾಡುವುದು?

ಎಚ್​ಯುಐಡಿ ನಂಬರ್ ಕೊಡುವ ಮುನ್ನ, ಚಿನ್ನಕ್ಕೆ ಕೆಡಿಎಂ ಅಥವಾ ಹಾಲ್ಮಾರ್ಕ್ ಹಾಕಲಾಗುತ್ತಿತ್ತು. ಬಹಳ ಮಂದಿಯ ಬಳಿ ಇರುವ ಬಹುತೇಕ ಒಡವೆಗಳು ಹಳೆಯ ಹಾಲ್ಮಾರ್ಕ್ ಗುರುತಿ ಇರುವಂಥವೇ. ಇವರೆಲ್ಲರೂ ಏನು ಮಾಡಬೇಕು ಎಂಬ ಪ್ರಶ್ನೆ ಬರಬಹುದು. ಇಂಥವರು ಚಿನ್ನವನ್ನು ಮಾರಲು ಅಡ್ಡಿ ಇಲ್ಲ.

ಇದನ್ನೂ ಓದಿUnclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಹಳೆಯ ಹಾಲ್ಮಾರ್ಕ್ ಇರುವ ಚಿನ್ನವನ್ನು ಗ್ರಾಹಕರಿಂದ ಖರೀದಿಸುವ ಜ್ಯುವಲರಿ ಅಂಗಡಿಯವರು, ಆ ಚಿನ್ನವನ್ನು ಕರಗಿಸಿ ಅದಕ್ಕೆ ಎಚ್​ಯುಐಡಿ ಗುರುತು ಹಾಕಿಸಿಬೇಕು. ಒಡವೆ ಅಂಗಡಿಯವರು ಎಚ್​ಯುಐಡಿ ಗುರುತು ಇಲ್ಲದ ಒಡವೆಯನ್ನು ಯಾವುದೇ ಕಾರಣಕ್ಕೂ ಮಾರುವಂತಿಲ್ಲ.

ಹಾಲ್ಮಾರ್ಕ್ ಅಗತ್ಯ ಇಲ್ಲದ ಪ್ರಕರಣಗಳಿವು

ಎರಡಕ್ಕಿಂತ ಕಡಿಮೆ ಗ್ರಾಮ್​ನ ಚಿನ್ನ, ಅಂತಾರಾಷ್ಟ್ರೀಯ ಪ್ರದರ್ಶನಕ್ಕೆಂದು ತಯಾರಾದ ಆಭರಣ, ವಿದೇಶೀ ಗ್ರಾಹಕರ ನಿರ್ದಿಷ್ಟ ಅವಶ್ಯಕತೆಗೆ ತಕ್ಕಂತೆ ರೂಪಿಸಿ ರಫ್ತು ಮಾಡಲು ಇಟ್ಟಿರುವ ಆಭರಣಗಳಿಗೆ ಹಾಲ್ಮಾರ್ಕ್ ಅಥವಾ ಎಚ್​ಯುಐಡಿ ಗುರುತು ಹಾಕಿಸುವ ಅಗತ್ಯ ಇಲ್ಲ. ಹಾಗೆಯೇ, ಫೌಂಟೇನ್ ಪೆನ್, ವಾಚು ಮತ್ತಿತರ ವಸ್ತುಗಳಿಗೆ ಬಳಸುವ ಚಿನ್ನಕ್ಕೂ ಹಾಲ್ಮಾರ್ಕ್ ಬೇಕಾಗುವುದಿಲ್ಲ. ಇನ್ನು, ವರ್ಷಕ್ಕೆ 40 ಲಕ್ಷ ರೂಗಿಂತ ಕಡಿಮೆ ಟರ್ನೋವರ್ ಇರುವ ಜ್ಯುವೆಲರಿ ಅಂಗಡಿಯವರಿಗೂ ಕಡ್ಡಾಯ ಹಾಲ್ಮಾರ್ಕ್​ನಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿTravel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಹಳೆಯ ಚಿನ್ನದ ಆಭರಣಕ್ಕೆ ಹಾಲ್ಮಾರ್ಕ್ ಹಾಕಿಸುವುದು ಹೇಗೆ?

ಹಾಲ್ಮಾರ್ಕ್ ಸರ್ಟಿಫಿಕೇಶನ್ ನೀಡಲು ಬಿಐಎಸ್ ಪ್ರಮಾಣಿತ ಕೇಂದ್ರಗಳಿವೆ. ಬಹುತೇಕ ಎಲ್ಲಾ ನಗರ, ಪಟ್ಟಣಗಳಲ್ಲೂ ಇಂಥ ಕೇಂದ್ರಗಳಿರುತ್ತವೆ. ಇಲ್ಲಿ ಒಂದು ಒಡವೆ ವಸ್ತುವಿಗೆ ಹಾಲ್ಮಾರ್ಕ್ ಪರೀಕ್ಷೆ ನಡೆಸಿ ಗುರುತು ಹಾಕಲು ನಿರ್ದಿಷ್ಟ ಶುಲ್ಕ ಕೊಡಬೇಕಾಗುತ್ತದೆ.

ಬಿಐಎಸ್​ಗೆ ನೊಂದಾಯಿತವಾದ ಆಭರಣ ವ್ಯಾಪಾರಿ ಮೂಲಕವೂ ಹಾಲ್ಮಾರ್ಕ್ ಹಾಕಿಸಬಹುದು. ಇವರು ನಿಮ್ಮ ಒಡವೆಯನ್ನು ಬಿಐಎಸ್ ಮಾನ್ಯತೆ ಪಡೆದ ಹಾಲ್ಮಾರ್ಕ್ ಕೇಂದ್ರಕ್ಕೆ ಹೋಗಿ ಪರೀಕ್ಷಿಸಿಕೊಂಡು ಬರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ