AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ

How To Get Unclaimed Deposit Amount: 10 ವರ್ಷಕ್ಕಿಂತ ಹೆಚ್ಚು ಕಾಲ ಬ್ಯಾಂಕ್ ಖಾತೆ ನಿರ್ವಹಣೆ ಆಗದೇ ನಿಷ್ಕ್ರಿಯವಾಗಿದ್ದರೆ, ಹಾಗು ನಿಶ್ಚಿತ ಠೇವಣಿಗಳ ಕಾಲಾವಧಿ ಮುಗಿದು 10 ವರ್ಷವಾದರೂ ಕ್ಲೈಮ್ ಆಗದೇ ಉಳಿದಿದ್ದರೆ ಅದರಲ್ಲಿರುವ ಠೇವಣಿಯನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ.

Unclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 1:10 PM

Share

ನವದೆಹಲಿ: ವಿವಿಧ ಕಾರಣಗಳಿಗೆ ಬ್ಯಾಂಕುಗಳಲ್ಲಿ ಇಡಲಾಗುವ ಕೆಲ ಠೇವಣಿಗಳು ಕ್ಲೈಮ್ ಆಗದೇ ಉಳಿದುಬಿಡುತ್ತವೆ. ಇಂಥ ಹಣದ ಮೊತ್ತ ಆರ್​ಬಿಐ ಲೆಕ್ಕಾಚಾರ ಪ್ರಕಾರ ಬರೋಬ್ಬರಿ 48,262 ಕೋಟಿ ರೂನಷ್ಟು ಇದೆ. ಖಾತೆದಾರ ಅಸುನೀಗಿರುವುದು ಇತ್ಯಾದಿ ಕಾರಣಗಳಿಂದ ಇವು ಕ್ಲೈಮ್ ಆಗದೆ ಉಳಿದಿವೆ. ಈಗ ಈ ಅನ್​ಕ್ಲೈಮ್ಡ್ ಹಣವನ್ನು ಖಾತೆದಾರರಿಗೆ (Account Holders) ಅಥವಾ ಅವರ ವಾರಸುದಾರರಿಗೆ (Nominees or Heirs) ಮರಳಿಸಲು ಆರ್​ಬಿಐ ಯೋಜಿಸಿದ್ದು, ಅದರಂತೆ ‘100 ದಿನ 100 ಪಾವತಿ’ (100 Days 100 Pays) ಎಂಬ ಅಭಿಯಾನ ಹಮ್ಮಿಕೊಂಡಿದೆ. ಇದರಂತೆ ಪ್ರತಿಯೊಂದು ಬ್ಯಾಂಕು ಪ್ರತಿಯೊಂದು ಜಿಲ್ಲೆಯಲ್ಲೂ ಕ್ಲೈಮ್ ಆಗದೇ ಉಳಿದಿರುವ ಅತಿದೊಡ್ಡ 100 ಠೇವಣಿಗಳನ್ನು ಗುರುತಿಸಿ ಅದನ್ನು ಇತ್ಯರ್ಥಗೊಳಿಸುವುದು ಈ ಅಭಿಯಾನದ ಉದ್ದೇಶ. 100 ದಿನದೊಳಗೆ ಇದು ಆಗಬೇಕೆಂದಿದ್ದು ಅಭಿಯಾನ ಜೂನ್ 1ರಂದು ಆರಂಭವಾಗುತ್ತದೆ.

ಕ್ಲೈಮ್ ಆಗದ ಠೇವಣಿಗಳೆಂದರೇನು?

ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ 10 ವರ್ಷಕ್ಕಿಂತ ಹೆಚ್ಚು ಕಾಲ ನಿರ್ವಹಣೆ ಆಗದೇ ನಿಷ್ಕ್ರಿಯವಾಗಿದ್ದರೆ ಅದರಲ್ಲಿರುವ ಠೇವಣಿಯನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ನಿಶ್ಚಿತ ಠೇವಣಿಗಳು ಕಾಲಾವಧಿ ಮುಗಿದು 10 ವರ್ಷವಾದರೂ ಕ್ಲೈಮ್ ಆಗದೇ ಉಳಿದಿದ್ದರೆ ಅದೂ ಕೂಡ ಅನ್​ಕ್ಲೈಮ್ಡ್ ಡೆಪಾಸಿಟ್ ಎನಿಸುತ್ತದೆ. ಈ ಹಣ ಬ್ಯಾಂಕ್​ನಲ್ಲೇ ಉಳಿದುಹೋಗುತ್ತವೆ. ಈಗ ಇವುಗಳನ್ನು ಕಟ್ಟುನಿಟ್ಟಾಗಿ ವಿಲೇವಾರಿ ಮಾಡಲು ರಿಸರ್ವ್ ಬ್ಯಾಂಕ್ ಮುಂದಾಗಿದೆ.

ಇದನ್ನೂ ಓದಿRBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್​ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು

ಖಾತೆದಾರರ ಬದುಕಿದ್ದರೆ ಅನ್​ಕ್ಲೈಮ್ಡ್ ಹಣವನ್ನು ಹೇಗೆ ಪಡೆಯುವುದು?

ಕೆಲವೊಮ್ಮೆ ಕಾರಣಾಂತರಗಳಿಂದ ಖಾತೆದಾರರ ತನ್ನ ಎಸ್​ಬಿ ಖಾತೆಯನ್ನು ನಿರ್ವಹಿಸದೇ ಹಾಗೇ ಬಿಟ್ಟುಬಿಟ್ಟಿರುವುದುಂಟು. ಬಹುಖಾತೆಗಳಿದ್ದಾಗ ಇಂಥದ್ದು ಆಗುವ ಸಾಧ್ಯತೆ ಉಂಟು. ಈ ರೀತಿ 10 ವರ್ಷ ನಿಷ್ಕ್ರಿಯವಾಗಿರುವ ಖಾತೆದಾರರು ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯುವುದು ಸುಲಭ. ಅವರು ತಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಗೆ ಹೋಗಿ ಕ್ಲೈಮ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ಜೊತೆಗೆ, ಕೆವೈಸಿ ದಾಖಲೆಗಳಾದ ಐಡಿ, ವಿಳಾಸ ಪ್ರೂಫ್​ಗಳನ್ನು ಒದಗಿಸಬೇಕು. ಪಾಸ್​ಬುಕ್, ಎಫ್​ಡಿ ರಸೀದಿ, ಇತ್ತೀಚಿನ ಫೋಟೋ ಇತ್ಯಾದಿಯನ್ನೂ ಒದಗಿಸಬೇಕಾಗುತ್ತದೆ. ಇವು ಸಮರ್ಪಕವಾಗಿದ್ದರೆ ಬ್ಯಾಂಕುಗಳು ನಿಮ್ಮ ಹಣವನ್ನು ಮರಳಿಸುತ್ತವೆ.

ಇದನ್ನೂ ಓದಿTravel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಕ್ಲೈಮ್ ಆಗದ ಹಣವನ್ನು ಖಾತೆದಾರರ ವಾರಸುದಾರರು ಪಡೆಯುವುದು ಹೇಗೆ?

ಒಂದು ವೇಳೆ ಖಾತೆದಾರರು ಮೃತಪಟ್ಟ ಕಾರಣಕ್ಕೆ ಠೇವಣಿ ಹಣ ಕ್ಲೈಮ್ ಆಗದೇ ಉಳಿದಿದ್ದರೆ, ಅದನ್ನು ಪಡೆಯುವ ಹಕ್ಕು ನಾಮಿನಿ ಅಥವಾ ವಾರಸುದಾರರಿಗೆ ಇರುತ್ತದೆ. ಈ ವಾರಸುದಾರರು ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ಐಡಿ ಪ್ರೂಫ್, ಖಾತೆದಾರರ ಡೆತ್ ಸರ್ಟಿಫಿಕೇಟ್, ಎಫ್​ಡಿ ರಸೀದಿ, ಪಾಸ್​ಬುಕ್ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್