AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್​ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು

RBI Governor Shaktikanta Das Statement: 2,000 ರೂ ನೋಟುಗಳ ವಿನಿಮಯಕ್ಕೆ 4 ತಿಂಗಳು ಕಾಲಾವಕಾಶ ಇದೆ. ಆತುರ ಬೇಡ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಾಗೆಯೆ, ಆರ್​ಬಿಐ ಇಂದು ಬ್ಯಾಂಕುಗಳಿಗೆ ಮಾರ್ಗಸೂಚಿ ಕೂಡ ನೀಡಿದೆ.

RBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್​ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 12:01 PM

Share

ನವದೆಹಲಿ: 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್​ಬಿಐ (Reserve Bank of India) ಹಿಂಪಡೆದುಕೊಂಡಿದ್ದು, ಮೇ 23ರಿಂದ ಇವುಗಳನ್ನು ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿನಿಮಯದ ಬಾಗಿಲು ಸೆಪ್ಟಂಬರ್ 30ರವರೆಗೂ ಇರಲಿದೆ. ಇದೀಗ ಒಂದು ದಿನ ಮುನ್ನ ಆರ್​ಬಿಐ 2,000 ರೂ ನೋಟುಗಳ ವಿನಿಮಯ ವಿಚಾರದಲ್ಲಿ ಎಲ್ಲಾ ಬ್ಯಾಂಕುಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಾರ್ವಜನಿಕರಿಗೆ ಕಿವಿಮಾತು ಕೂಡ ಹೇಳಿದ್ದಾರೆ.

‘ನೀವು ಬ್ಯಾಂಕುಗಳಿಗೆ ಮುಗಿಬಿದ್ದು ಹೋಗುವ ಅವಶ್ಯಕತೆ ಇಲ್ಲ. ಸೆಪ್ಟಂಬರ್ 30ರವರೆಗೆ, 4 ತಿಂಗಳು ನಿಮಗೆ ಕಾಲಾವಕಾಶ ಇದೆ. ಸೆಪ್ಟಂಬರ್ 30ರ ಬಳಿಕವೂ ಈ 2,000 ರೂ ನೋಟು ಮಾನ್ಯವಾಗಿಯೇ ಇರುತ್ತದೆ’ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹಾಗಾದರೆ, 2,000 ರೂ ನೋಟು ವಿನಿಮಯಕ್ಕೆ ಸಾರ್ವಜನಿಕರಿಗೆ ಸೆಪ್ಟಂಬರ್ 30ಕ್ಕೆ ಡೆಡ್​ಲೈನ್ ಕೊಟ್ಟಿರುವುದು ಯಾಕೆ? ಇದಕ್ಕೆ ಆರ್​ಬಿಐ ಗವರ್ನರ್ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ, ಡೆಡ್​ಲೈನ್ ನಿಗದಿ ಮಾಡಿದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಿ ತಮ್ಮಲ್ಲಿ 2,000 ರೂ ನೋಟಿದ್ದರೆ ಅದನ್ನು ಹಿಂದಿರುಗಿಸಲು ಯತ್ನಿಸುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿRBI: 2,000 ರೂ ನೋಟು ಹಿಂಪಡೆದದ್ದರಿಂದ ಯಾರಿಗೆ ಲಾಭ? ಇಲ್ಲಿದೆ ಒಂದು ರಿಪೋರ್ಟ್

2,000 ರೂ ನೋಟು ವಿನಿಮಯಕ್ಕೆ ಆರ್​ಬಿಐನಿಂದ ಬ್ಯಾಂಕುಗಳಿಗೆ ಮಾರ್ಗಸೂಚಿ ಬಿಡುಗಡೆ

2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದರಿಂದ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟಂಬರ್ 30ರವರೆಗೆ ಕಾಲಾವಕಾಶ ಇದೆ. ಯಾವುದೇ ಬ್ಯಾಂಕಿನಲ್ಲೂ ವಿನಿಮಯಕ್ಕೆ ಅವಕಾಶ ಇರುತ್ತದೆ. ಮೇ 23ರಿಂದಲೇ ಈ ಕಾರ್ಯ ಆರಂಭವಾಗುತ್ತದೆ. ಇಂದು ಆರ್​ಬಿಐ ಎಲ್ಲಾ ಬ್ಯಾಂಕುಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

  • ಈಗ ಬೇಸಿಗೆ ಇರುವುದರಿಂದ ಬ್ಯಾಂಕುಗಳಲ್ಲಿ 2,000 ರೂ ವಿನಿಮಯಕ್ಕೆ ಬರುವ ಸಾರ್ವಜನಿಕರಿಗಾಗಿ ನೆರಳಿನ ಸ್ಥಳ ಇರಬೇಕು. ಕುಡಿಯುವ ನೀರಿನ ಸೌಲಭ್ಯ ಇರಬೇಕು
  • ಬ್ಯಾಂಕಿನಲ್ಲಿ 2,000 ರೂ ನೋಟುಗಳ ಠೇವಣಿ ಮತ್ತು ವಿನಿಮಯ ಎಷ್ಟಾಗಿದೆ ಎಂಬುದನ್ನು ಆರ್​ಬಿಐ ನೀಡಿದ ಮಾದರಿಯಲ್ಲಿ ದಿನವೂ ಮಾಹಿತಿ ದಾಖಲಿಸಬೇಕು. ಆರ್​ಬಿಐ ಕೇಳಿದಾಗ ಬ್ಯಾಂಕುಗಳು ಈ ಮಾಹಿತಿ ಒದಗಿಸಬೇಕು.
  • ಎಲ್ಲಾ ಬ್ಯಾಂಕುಗಳು ತತ್​ಕ್ಷಣದಿಂದಲೇ 2,000 ರೂ ನೋಟು ನೀಡುವುದನ್ನು ನಿಲ್ಲಿಸಬೇಕು.

ಈ ಮೇಲಿನ ಎರಡು ಮಾರ್ಗಸೂಚಿಯನ್ನು ಮೇ 22ರಂದು ಆರ್​ಬಿಐ ಬಿಡುಗಡೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್