AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Go First: ಗೋಫಸ್ಟ್ ಸಂಸ್ಥೆ ನಿರಾಳ: ಇನ್ಸಾಲ್ವೆನ್ಸಿ ಅವಕಾಶ ಎತ್ತಿಹಿಡಿದ ಎನ್​ಸಿಎಲ್​ಎಟಿ; ನ್ಯಾಯಮಂಡಳಿ ಬಳಿ ಬೇರೆ ಅರ್ಜಿ ಸಲ್ಲಿಸಲು ವಿಮಾನ ಮಾಲೀಕರಿಗೆ ಸೂಚನೆ

NCLAT Upholds NCLT Order On Go First: ಗೋಫಸ್ಟ್ ಸಂಸ್ಥೆಗೆ ವಿಮಾನ ಗುತ್ತಿಗೆ ನೀಡಿರುವ ಮಾಲೀಕರು (ಲೆಸ್ಸರ್ಸ್) ಬೇಕಾದರೆ ಎನ್​ಸಿಎಲ್​ಟಿಗೆ ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ಮೇಲ್ಮನವಿ ನ್ಯಾಯಮಂಡಳಿ (ಎನ್​ಸಿಎಲ್​ಎಟಿ) ಸೂಚಿಸಿದೆ. ಇದರಿಂದ ಗೋಫಸ್ಟ್ ಸಂಸ್ಥೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ.

Go First: ಗೋಫಸ್ಟ್ ಸಂಸ್ಥೆ ನಿರಾಳ: ಇನ್ಸಾಲ್ವೆನ್ಸಿ ಅವಕಾಶ ಎತ್ತಿಹಿಡಿದ ಎನ್​ಸಿಎಲ್​ಎಟಿ; ನ್ಯಾಯಮಂಡಳಿ ಬಳಿ ಬೇರೆ ಅರ್ಜಿ ಸಲ್ಲಿಸಲು ವಿಮಾನ ಮಾಲೀಕರಿಗೆ ಸೂಚನೆ
ಗೋಫಸ್ಟ್ ಏರ್​ಲೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 4:37 PM

Share

ನವದೆಹಲಿ: ಗೋಫಸ್ಟ್ ಏರ್​ಲೈನ್ ಸಂಸ್ಥೆ ಹಣಕಾಸು ಬಿಕ್ಕಟ್ಟು ಪರಿಹಾರಕ್ಕೆ ಸಲ್ಲಿಸಿರುವ ಇನ್ಸಾಲ್ವೆನ್ಸಿ (Insolvency) ಅರ್ಜಿಯನ್ನು ಸ್ವೀಕರಿಸಿದ ಎನ್​ಸಿಎಲ್​ಟಿ (NCLT) ಆದೇಶವನ್ನು ಎನ್​ಸಿಎಲ್​ಎಟಿ (NCLAT) ಎತ್ತಿಹಿಡಿದಿದೆ. ಗೋಫಸ್ಟ್ ಸಂಸ್ಥೆಗೆ ವಿಮಾನ ಗುತ್ತಿಗೆ ನೀಡಿರುವ ಮಾಲೀಕರು (Lessors) ಬೇಕಾದರೆ ಎನ್​ಸಿಎಲ್​ಟಿಗೆ ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ಮೇಲ್ಮನವಿ ನ್ಯಾಯಮಂಡಳಿ ಸೂಚಿಸಿದೆ. ಈ ಬೆಳವಣಿಗೆಯು ಗೋ ಫಸ್ಟ್ ಸಂಸ್ಥೆಗೆ ನಿರಾಳತೆ ತಂದಿದೆ. ಗೋಫಸ್ಟ್ ಏರ್​ಲೈನ್ಸ್​ಗೆ ವಿಮಾನಗಳನ್ನು ಗುತ್ತಿಗೆಯಾಗಿ ನೀಡಿರುವ ಎಸ್​ಎಂಬಿಸಿ ಏವಿಯೇಶನ್ ಕ್ಯಾಪಿಟಲ್, ಎಸ್​ಎಫ್​ವಿ ಏರ್​ಕ್ರಾಫ್ಟ್ ಹೋಲ್ಡಿಂಗ್ಸ್, ಜಿವೈ ಏವಿಯೇಶನ್ ಲೀಸ್ ಮೊದಲಾದ ಕಂಪನಿಗಳು ಎನ್​ಸಿಎಲ್​ಟಿ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್​ಸಿಎಲ್​ಎಟಿ) ಮೆಟ್ಟಿಲೇರಿದ್ದವು.

ಇನ್ಸಾಲ್ವೆನ್ಸಿ ಪ್ರಕ್ರಿಯೆ ಮೂಲಕ ಗೋಫಸ್ಟ್ ಸಂಸ್ಥೆ ತನ್ನದಲ್ಲದ ವಿಮಾನಗಳನ್ನು ಇಟ್ಟುಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂಬುದು ಈ ವಿಮಾನ ಮಾಲೀಕರ ಆರೋಪವಾಗಿತ್ತು. 26 ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದರೂ ಮತ್ತು ಮುಂಗಡವಾಗಿ ವಿಮಾನದ ಟಿಕೆಟ್​ಗಳನ್ನು ಕಾಯ್ದಿರಿಸಿದರೂ ಗೋ ಫಸ್ಟ್ ಸ್ವಯಂಪ್ರೇರಿತವಾಗಿ ಇನ್ಸಾಲ್ವೆನ್ಸಿ ಅರ್ಜಿಯನ್ನು ಹಾಕುವ ಔಚಿತ್ಯವೇನು ಎಂಬುದು ಎಸ್​ಎಂಬಿಸಿ ಏವಿಯೇಶನ್​ನ ಪ್ರಶ್ನೆಯಾಗಿತ್ತು.

ಗೋಫಸ್ಟ್ ಏರ್​ಲೈನ್ಸ್ ಸಂಸ್ಥೆ ತನಗೆ 700-800 ಕೋಟಿ ರೂ ಬಾಕಿ ಹಣ ಉಳಿಸಿಕೊಂಡಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ತಮ್ಮ ವಾದವನ್ನು ಸರಿಯಾಗಿ ಆಲಿಸದೆಯೇ, ಒಟ್ಟಾರೆ ಪರಿಸ್ಥಿತಿ ಅಂದಾಜಿಸದೆಯೇ, ಗೋಫಸ್ಟ್​ನ ಇನ್ಸಾಲ್ವೆನ್ಸಿ ಅರ್ಜಿಯನ್ನು ಒಪ್ಪಿಕೊಂಡಿತು ಎಂದು ಎಸ್​ಎಂಬಿಸಿ ಏವಿಯೇಶನ್ ಸಂಸ್ಥೆ ದೂರಿದೆ.

ಇದನ್ನೂ ಓದಿUnclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಗೋಫಸ್ಟ್ ಸಲ್ಲಿಸಿದ ಇನ್ಸಾಲ್ವೆನ್ಸಿ ಅರ್ಜಿಯನ್ನು ಸ್ವೀಕರಿಲು ನಿರ್ಧರಿಸಿದ ಎನ್​ಸಿಎಲ್​ಟಿ ಮೇ 10ರಂದು ನೀಡಿದ ಆದೇಶದಲ್ಲಿ, ಗೋಫಸ್ಟ್​ನ ವಿಮಾನಗಳ ಮಾಲೀಕರು 6 ತಿಂಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿತ್ತು. ಗೋಫಸ್ಟ್ ಆಪರೇಟ್ ಮಾಡುತ್ತಿದ್ದ 55 ವಿಮಾನಗಳಲ್ಲಿ 45 ವಿಮಾನಗಳನ್ನು ಅವುಗಳ ಮಾಲೀಕರು ಸುಪರ್ದಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಗೋಫಸ್ಟ್ ಮನವಿ ಮೇರೆಗೆ ಎನ್​ಸಿಎಲ್​ಟಿ ಆ ಆದೇಶ ನೀಡಿತ್ತು.

ಗೋಫಸ್ಟ್​ಗೆ ಅತಿಹೆಚ್ಚು ವಿಮಾನಗಳನ್ನು ಲೀಸ್​ಗೆ ನೀಡಿರುವ ಐರ್ಲೆಂಡ್ ಮೂಲದ ಎಸ್​ಎಂಬಿಸಿ ಏವಿಯೇಷನ್ ಕ್ಯಾಪಿಟಲ್ ವಿಶ್ವದ ಅತಿದೊಡ್ಡ ವಿಮಾನ ಗುತ್ತಿಗೆದಾರ ಸಂಸ್ಥೆಯಾಗಿದೆ. ಎನ್​ಸಿಎಲ್​ಟಿ ಆದೇಶ ಬರುವ ಮುನ್ನವೇ ತಾವು ಗೋಫಸ್ಟ್​ಗೆ ನೀಡಿದ್ದ ಲೀಸ್ ಒಪ್ಪಂದವನ್ನು ಕಡಿತಗೊಳಿಸಿದ್ದೇವೆ. ಹೀಗಾಗಿ, ವಿಮಾನವನ್ನು ಇಟ್ಟುಕೊಳ್ಳಲು ಗೋಫಸ್ಟ್​ಗೆ ಆಗುವುದಿಲ್ಲ. ಲೀಸ್ ಮುಗಿದ ಬಳಿಕ ವಿಮಾನ ಹಾರಾಟ ನಡೆಸುವಂತಿಲ್ಲ ಎಂಬುದು ಎಸ್​ಎಂಬಿಸಿ ಏವಿಯೇನ್ ಕ್ಯಾಪಿಟಲ್ ಸಂಸ್ಥೆಯ ವಾದ.

ಇದನ್ನೂ ಓದಿTravel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಇದೀಗ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಲಿಯು (ಎನ್​ಸಿಎಲ್​ಎಟಿ) ವಿಮಾನ ಮಾಲೀಕ ಸಂಸ್ಥೆಗಳಿಗೆ ಎನ್​ಸಿಎಲ್​ಟಿ ಬಳಿಕ ಬೇರೊಂದು ಸೂಕ್ತ ಅರ್ಜಿ ಸಲ್ಲಿಸಿ ತಮ್ಮ ದೂರು ದಾಖಲಿಸುವಂತೆ ತಿಳಿಸಿದೆ. ಈಗ ಮುಂದಿನ ಬೆಳವಣಿಗೆ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದು ಅಂಶವೆಂದರೆ, ಮೇ 10ರ ಆದೇಶದ ವೇಳೆ ಎನ್​ಸಿಎಲ್​ಟಿ ನ್ಯಾಯಮಂಡಳಿಯು ಗೋಫಸ್ಟ್​ನ ಇನ್ಸಾಲ್ವೆನ್ಸಿ ಅರ್ಜಿ ಇತ್ಯರ್ಥಪಡಿಸಲು ಐಆರ್​ಪಿಯೊಬ್ಬರನ್ನು ನೇಮಿಸಿತ್ತು. ಇವರ ಪ್ರಕಾರ ಗೋಫಸ್ಟ್ ಸಂಸ್ಥೆ ತನ್ನ ವಿಮಾನ ಸರಬರಾಜುದಾರರಿಗೆ 1,000 ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಸಾಲದ ಮರುಪಾವತಿ ಮಾಡಲು ಇನ್ಸಾಲ್ವೆನ್ಸಿ ಪ್ರಕ್ರಿಯೆ ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು