Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ

Wedding Anniversary : ರವೀಂದ್ರನಾಥ ಟ್ಯಾಗೋರರ ''ಏಕ್ಲಾ ಚಲೋ ರೇ''  ಕವಿತೆಯ ಸಾಲನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಮೊದಲ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ ಕ್ಷಮಾ ಬಿಂದು.

Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ
ಸ್ವವಿವಾಹ ಮಾಡಿಕೊಂಡ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ
Follow us
|

Updated on:Jun 10, 2023 | 3:13 PM

Wedding Anniversary : 2022ರ ಜೂನ್​ 9ರಂದು ಇಡೀ ದೇಶವೇ ಕುತೂಹಲದಿಂದ ಈ ಮದುಮಗಳನ್ನು ನೋಡಿತ್ತು. ಮದುವೆ ಮತ್ತು ಮದುವೆಯ ನಂತರದ ಎಲ್ಲಾ ಪ್ರಕ್ರಿಯೆಗಳ ಬಗ್ಗೆಯೂ ಅಚ್ಚರಿಯಿಂದ ಗಮನಿಸಿತ್ತು. ಏಕೆಂದರೆ ಈಕೆ ಭಾರತದ ಮೊದಲ ಸೋಲೋಗಾಮಿ (Sologamy); ತನ್ನೊಂದಿಗೆ ತಾನು ವಿವಾಹಬಂಧಕ್ಕೆ ಒಳಗಾದ ಮೊದಲ ಯುವತಿ. ಗುಜರಾತ್​ ಮೂಲದ ಈ ಕ್ಷಮಾ ಬಿಂದು (Kshama Bindu) ಇದೀಗ ಮದುವೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್​ಸ್ಟಾಗ್ರಾಂನ ಅವರ ಖಾತೆಯಲ್ಲಿ ಈ ಕುರಿತು ರೀಲ್​ ಅಪ್​ಲೋಡ್ ಮಾಡಿದ್ದು ನೆಟ್ಟಿಗರ ಕಣ್ಣೆಲ್ಲ ಇಲ್ಲಿಯೇ ಇದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kshama Bindu (@kshamachy)

ಹಿಂದೂ ವಿವಾಹ ಪದ್ಧತಿಯಲ್ಲಿ ತಾನೊಬ್ಬಳೇ ಸಪ್ತಪದಿ ತುಳಿದು, ತನ್ನ ಹಣೆಗೆ ತಾನೇ ಸಿಂಧೂರ ಧರಿಸಿ, ಮಧುಚಂದ್ರವನ್ನೂ ಏಕಾಂಗಿಯಾಗಿ ವಿಹರಿಸಿದ್ದಳು. ಇದು ಇಡೀ ದೇಶದ ಜನತೆಯಲ್ಲಿ ಸಂಚಲನ ಮೂಡಿಸಿತ್ತು. ಅನೇಕರು ಇದನ್ನು ಅತಿರೇಕವೆಂದು ಹೀಗಳೆದರು. ಕೆಲವರು ಆಕೆಯ ಆಯ್ಕೆಯನ್ನು ಗೌರವಿಸಿದರು. ಇದೀಗ ಕ್ಷಮಾ ರವೀಂದ್ರನಾಥ ಟ್ಯಾಗೋರರ ”ಏಕ್ಲಾ ಚಲೋ ರೇ”  (Ravindranath Tagore- Ekla Chalo Re) ಬಂಗಾಳಿ ಕವಿತೆಯ ಸಾಲನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.

View this post on Instagram

A post shared by Kshama Bindu (@kshamachy)

ಕ್ಷಮಾ ಅವರ ಏಕಾಂಗಿ ಪಯಣಕ್ಕೀಗ ಒಂದು ವರ್ಷದ ಸಂಭ್ರಮ ಸಂದ ಹಿನ್ನೆಲೆಯಲ್ಲಿ ಅನೇಕರು ಶುಭಹಾರೈಸಿದ್ದಾರೆ; ನಿಮ್ಮ ದೃಢಮನಸ್ಸನ್ನು ಕಂಡು ಖುಷಿಯಾಯಿತು, ಧೈರ್ಯವಂತಿಕೆಯನ್ನು ಮೆಚ್ಚಿದೆ, ನಿಮ್ಮ ನಿರ್ಧಾರದಂತೆ ನೀವು ಮುನ್ನಡೆಯಿರಿ, ಅಂದುಕೊಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ. ನೀವು ನನ್ನ ಪ್ರೇರಣೆ. ಹೆಣ್ಣುಮಕ್ಕಳು ಹೀಗೆ ಗಟ್ಟಿತನ ಬೆಳೆಸಿಕೊಳ್ಳಬೇಕು, ಪಿತೃಪ್ರಧಾನ ಸಂಸ್ಕೃತಿಯು ತಪ್ಪು ಎನ್ನುವುದನ್ನು ಸಾಬೀತುಪಡಿಸುವಂತಾಗಬೇಕು… ಅಂತೆಲ್ಲ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ”ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್”; ಗಾಯಕಿ ಅಂಕಿತಾ ಕುಂಡು ಹೊಸ ರೀಲ್​ಗೆ ನೆಟ್ಟಿಗರ ಬೇಸರ

ಸ್ವಾತಂತ್ರ್ಯ ಮತ್ತು ಆಯ್ಕೆ ಎಂಬ ನೆಪದಲ್ಲಿ ಇಂಥವರು ಮನಬಂದಂತೆ ಓಡಾಡಿಕೊಂಡಿರುತ್ತಾರೆ. ಮದುವೆಯಾಗಿಯೂ ತಮ್ಮಿಚ್ಛೆಯಂತೆ ಬದುಕಲು ಸಾಧ್ಯವಿದೆಯಲ್ಲವೆ? ಎಂದು ಕೆಲವರು ತಕರಾರೆತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕೆಲವರು ಉತ್ತರಗಳನ್ನು ನೀಡಿದ್ಧಾರೆ; ಯಾರು ಯಾರನ್ನು ಮದುವೆಯಾಗಬೇಕು ಎನ್ನುವುದು ಅವರವರ ಆಯ್ಕೆ. ಕುಟುಂಬ ಕಟ್ಟಿಕೊಳ್ಳುವ ಭರದಲ್ಲಿ ನಿಮ್ಮನ್ನು ನೀವು ಯಾಕೆ ಕಳೆದುಕೊಳ್ಳಬೇಕು, ಮಗುವಿಗೆ ಜನ್ಮ ಕೊಟ್ಟು ಯಾಕೆ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬೇಕು? ಮಗು ಬೇಕೆಂದರೆ ದತ್ತು ಪಡೆದುಕೊಳ್ಳಬಹುದಲ್ಲವೆ? ಕುಟುಂಬ ಬೇಕೇಬೇಕೆಂಬ ಅನಿವಾರ್ಯತೆ ಏನಿದೆ? ಇದೆಲ್ಲದಕ್ಕೂ ಒಂದೇ ಉತ್ತರ ”ಆಯ್ಕೆ”. ನೀವೂ ಬದುಕಿ ಮತ್ತು ಇತರರನ್ನು ಬದುಕಲು ಬಿಡಿ. ಇದರಾಚೆಗೆ ನಿಮ್ಮನ್ನು ಇನ್ನೂ ಏನಾದರೂ ಕಾಡುತ್ತಿದ್ದರೆ ನೀವು ನಿಮ್ಮ ”ಆಯ್ಕೆ”ಯನ್ನು ಕಡೆಗಣಿಸಿದ್ದೀರಿ ಎಂದರ್ಥ. ದುಃಖಿಸದೆ ನಿಮ್ಮಿಚ್ಛೆಯಂತೆ ಬದುಕಲು ಪ್ರಯತ್ನಿಸಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:11 pm, Sat, 10 June 23