Viral Brain Teaser: ಮರದ ದಿಮ್ಮಿಗಳ ರಾಶಿಯ ನಡುವೆ ಅಡಗಿರುವ ಬೆಕ್ಕನ್ನು ನೀವು ಗುರುತಿಸಬಲ್ಲಿರಾ?
ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸಲು ನೀವು ಬಯಸುವಿರಾ? ಹಾಗಿದ್ದರೆ ಈ ಚಟುವಟಿಕೆಯನ್ನು ನೀವು ಕೂಡಾ ಪ್ರಯತ್ನಿಸಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಮೆದುಳಿನ ಚುರುಕುತನವನ್ನು ಪರೀಕ್ಷಿಸುವ ಚಿತ್ರದಲ್ಲಿ ಮರದ ತುಂಡುಗಳ ರಾಶಿಗಳ ಮಧ್ಯೆ ಮಲಗಿರುವ ಬೆಕ್ಕನ್ನು ತಕ್ಷಣ ಗುರುತಿಸಿ.
ಬ್ರೈನ್ ಟೀಸರ್, ನಮ್ಮ ವೀಕ್ಷಣಾ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಇರುವ ಜನಪ್ರಿಯ ಒಗಟಿನ ಚಟುವಟಿಕೆಯಾಗಿದೆ. ಈ ರೀತಿಯ ಒಗಟುಗಳು ಸಮಯದ ಮಿತಿಯೊಳಗೆ ಚಿತ್ರದಲ್ಲಿ ಮರೆ ಮಾಡಿದ ವಸ್ತುಗಳನ್ನು ಕಂಡುಹಿಡಿಯುವ ಪ್ರಮೇಯವನ್ನು ಆಧರಿಸಿದೆ. ಈ ಒಗಟುಗಳನ್ನು ಪರಿಹರಿಸಲು ಗಮನ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ.ಇಂತಹ ಚಟುವಟಿಕೆಗಳು ವೀಕ್ಷಣಾ ಕೌಶಲ್ಯವನ್ನು ಸುಧಾರಿಸುವಲ್ಲಿ ಹಾಗೂ ಮೆದುಳಿನ ಚುರುಕುತನದ ಸಾಮಾರ್ಥ್ಯವನ್ನು ಹೆಚ್ಚಿಸಲು ಅಪಾರ ಪ್ರಯೋಜನಕಾರಿಯಾಗಿದೆ. ಇಂತಹ ಮೆದುಳನ್ನು ಚುರುಕುಗೊಳಿಸುವ ಚಟುವಟಿಕೆಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ ಮತ್ತು ತಕ್ಷಣ ಎಲ್ಲರ ಗಮನವನ್ನು ಸೆಳೆಯುತ್ತದೆ ಏಕೆಂದರೆ ಅವುಗಳು ವಿನೋದಮಯವಾದ ಚಟುವಟಿಕೆಯಾಗಿದೆ. ಇದೇ ರೀತಿಯ ಮೆದುಳು ಹಾಗೂ ಕಣ್ಣಿನ ತೀಕ್ಷಣತೆಯ ಸಾಮಾರ್ಥ್ಯವನ್ನು ಪರೀಕ್ಷಿಸಿಸುವ ಬ್ರೈನ್ ಟೀಸರ್ ಚಿತ್ರವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮರದ ದಿಮ್ಮಿಗಳ ಮಧ್ಯೆ ಮಲಗಿರುವ ಬೆಕ್ಕನ್ನು ಗುರುತಿಸಲು ಜನರಿಗೆ ಸವಾಲು ಹಾಕುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಕೆಲವರು ಅದನ್ನು ಸುಲಭವಾಗಿ ಗುರುತಿಸಲು ಶಕ್ತರಾದರೆ, ಇನ್ನೂ ಕೆಲವರು ದೀರ್ಘಕಾಲದ ವರೆಗೆ ತಲೆಕೆಡಿಸಿಕೊಂಡು ನಂತರ ಬೆಕ್ಕನ್ನು ಗುರುತಿಸಿದ್ದಾರೆ.
— WholesomeMemes (@WholesomeMeme) June 2, 2023
ಈ ಚಿತ್ರವನ್ನು ಹೋಲ್ಸಮ್ ಮೀಮ್ಸ್ (@WholesomeMeme) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮತ್ತು ಆ ಚಿತ್ರದ ಮೇಲೆ ‘ಬೆಕ್ಕನ್ನು ಹುಡುಕಿ’ ಎಂಬ ಶೀರ್ಷಿಕೆಯನ್ನು ಕೂಡಾ ಬರೆಯಲಾಗಿದೆ. ಈ ಚಿತ್ರ ಮರದ ತುಂಡುಗಳ ರಾಶಿಗಳ ಮಧ್ಯೆ ಮಲಗರುವ ಬೆಕ್ಕನ್ನು ಹುಡುಕಲು ನೋಡುಗರಿಗೆ ಸವಾಲು ನೀಡಿದೆ.
ಇದನ್ನೂ ಓದಿ:Viral Brain Teaser: ಹುಳ ಇಲ್ಲದೇ ಇರುವ ಚೆರ್ರಿ ಹಣ್ಣನ್ನು ಹುಡುಕಬಲ್ಲಿರಾ?
ಜೂನ್ 2ರಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವೈರಲ್ ಪೋಸ್ಟ್ 898.3 ಸಾವಿರ ವೀಕ್ಷಣೆಗಳನ್ನು ಹಾಗೂ 11.4 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವರು ಕಮೆಂಟ್ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರು ‘ಬೆಕ್ಕನ್ನು ಕಂಡುಹಿಡಿಯಲು ಒಂದು ನಿಮಿಷವನ್ನು ತೆಗೆದುಕೊಂಡೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಚಿತ್ರದಲ್ಲಿ ಬೆಕ್ಕು ಇಲ್ಲ’ ಎಂದು ವಾದಿಸಿದ್ದಾರೆ. ಇನ್ನೂ ಅನೇಕ ಬಳಕೆದಾರು ಮರದ ತುಂಡುಗಳ ನಡುವೆ ಅಡಗಿರುವ ಬೆಕ್ಕಿನ ಚಿತ್ರವನ್ನು ಸ್ಕ್ರೀನ್ ಶಾಟ್ ತೆಗೆದು ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ