ತನ್ನ ಪತಿಗೆ ರಾಖಿ ಕಟ್ಟಿ ಅಣ್ಣ-ತಂಗಿಯ ಬಾಂಧವ್ಯ ಬೆಸೆದ ಪತ್ನಿ; ಏನಿದು ಘಟನೆ?
ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದ ಪತಿಗೆ ತನ್ನ ಮೊದಲ ರಾತ್ರಿಯಂದೇ ಪತ್ನಿ ರಾಖಿ ಕಟ್ಟಿದ್ದಾಳೆ. ಇದಲ್ಲದೇ ತನ್ನನ್ನು ತನ್ನ ಮೊದಲ ಪತಿಯೊಂದಿಗೆ ಜೀವನ ನಡೆಸಲು ಬಿಡಿ ಎಂದು ಬೇಡಿಕೊಂಡಿದ್ದಾಳೆ.
ರಾಜಸ್ಥಾನದ ಜೋಧಪುರದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದ ಪತಿಗೆ ಮೊದಲ ರಾತ್ರಿಯಂದೇ ಪತ್ನಿ ರಾಖಿ ಕಟ್ಟಿದ್ದಾಳೆ. ಇದಲ್ಲದೇ ತನ್ನನ್ನು ತನ್ನ ಮೊದಲ ಪತಿಯೊಂದಿಗೆ ಜೀವನ ನಡೆಸಲು ಬಿಡಿ ಎಂದು ಬೇಡಿಕೊಂಡಿದ್ದಾಳೆ. ಇದೀಗ ಈ ಪ್ರಕರಣ ರಾಜಸ್ಥಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಂಚಲನ ಮೂಡಿಸಿದೆ.
ರಾಜಸ್ಥಾನದ ಬಲೇಸರ್ ಮೂಲದ ತರುಣಾ ಶರ್ಮಾ ಎಂಬ ಯುವತಿ ತನ್ನ ಬಾಲ್ಯದ ಗೆಳೆಯ ಸುರೇಂದ್ರ ಸಂಖ್ಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹುಡುಗಿಯ ಮನೆಯವರು ಹುಡುಗ ಬೇರೆ ಜಾತಿ ಎಂಬ ಕಾರಣಕ್ಕೆ ಮದುವೆಗೆ ನಿರಾಕರಿಸಿದ್ದಾರೆ. ಇದಾದ ಕೆಲವೇ ದಿನಗಳ ಬಳಿಕ ತರುಣಾ ಮನೆಯವರು ಆಕೆಯ ಗಂಡನಿಂದ ಬೇರ್ಪಡಿಸಿ, ಛತ್ತೀಸ್‌ಗಢದ ಜಿತೇಂದ್ರ ಜೋಶಿ ಎಂಬಾತನೊಂದಿಗೆ ಎರಡನೇ ಮದುವೆ ಮಾಡಿಸಿದ್ದಾರೆ. ಬಲವಂತವಾಗಿ ಮದುವೆ ಮಾಡಿಸಿರುವುದರಿಂದ ಮೊದಲ ರಾತ್ರಿಯಂದೇ ತನ್ನ ಎರಡನೇ ಪತಿಯ ಕೈಗೆ ರಾಖಿ ಕಟ್ಟಿ ತನ್ನ ಮೊದಲ ಪತಿಯೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದಾಳೆ.
ಇದನ್ನೂ ಓದಿ: ಫೇಸ್‌ಬುಕ್ ಲವ್ ಸ್ಟೋರಿ ವಿವಾಹಿತ ಮಹಿಳೆಯ ಮತಾಂತರ; ವ್ಯಕ್ತಿಯ ಬಂಧನ
ಆದರೆ, ಇದನ್ನು ಲೆಕ್ಕಿಸದೆ ಜಿತೇಂದ್ರ(ಎರಡನೇ ಪತಿ) ಆಕೆಗೆ ಕಿರುಕುಳ ನೀಡಿದ್ದಾನೆ. ಮೊದಲ ಪತಿಯೊಂದಿಗೆ ಬಾಳಲು ಆರೋಗ್ಯ ಸರಿಯಿಲ್ಲ ಎಂಬ ನೆಪ ಒಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲಿ ಇತರರಿಂದ ಮೊಬೈಲ್ ಪಡೆದು ತನ್ನ ಮೊದಲ ಪತಿಗೆ ಮಾಹಿತಿ ನೀಡಿದ್ದಾಳೆ. ಅಷ್ಟೇ ಅಲ್ಲ.. ತನ್ನ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಲಿವುಡ್ ಸ್ಟಾರ್ ನಟ ಸೋನುಸೂದ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಘಟನೆ ಎಲ್ಲೆಡೆ ಭಾರೀ ವೈರಲ್ ಆಗಿದೆ. ಸದ್ಯ ಮಹಿಳೆಯ ಆರೋಪದ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಕಂಕೇರ್‌ನ ಸಖಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: