Viral Video: ರೈಲಿನ ಬಾಗಿಲು, ಕಿಟಕಿಗಳನ್ನು ಹಿಡಿದು ನೇತಾಡುತ್ತಿದ್ದ ಯುವಕರು, ವಿದ್ಯುತ್ ಕಂಬ ತಾಗಿ ಮುಂದೇನಾಯ್ತು ನೋಡಿ
ರೈಲಿನಲ್ಲಿ ಎಂದೂ ಸಾಹಸ ಮಾಡಕೂಡದು, ಅಂತಹ ಸಾಹಸ ಮಾಡಿದವರ ಜೀವಕ್ಕೆ ಅಪಾಯ ತಂದಿರುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು.
ರೈಲಿನಲ್ಲಿ ಎಂದೂ ಸಾಹಸ ಮಾಡಕೂಡದು, ಅಂತಹ ಸಾಹಸ ಮಾಡಿದವರ ಜೀವಕ್ಕೆ ಅಪಾಯ ತಂದಿರುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಹಾಗೆಯೇ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ರೈಲು ಹತ್ತುವಾಗ ಅಥವಾ ರೈಲು ಇಳಿಯುವಾಗ ಕಾಲು ಜಾರಿ ಅಪಘಾತಗಳು ಸಂಭವಿಸುತ್ತವೆ. ಒಂದೊಮ್ಮೆ ರೈಲು ರಷ್ ಇದ್ದರೆ ಬಾಗಿಲಿನಲ್ಲಿ ನಿಂತು ಹೋಗುವ ಸಾಹಸಕ್ಕಂತೂ ಕೈ ಹಾಕಲೇಬಾರದು.
ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಹಲವು ವಿಡಿಯೋಗಳು ಹರಿದಾಡುತ್ತಿದ್ದು, ಇದನ್ನು ನೋಡಿ ಯಾರಿಗಾದರೂ ಭಯ ಆಗೇ ಆಗುತ್ತದೆ, ಆಗಾಗ ಈ ಬಗ್ಗೆ ರೈಲ್ವೆ ವತಿಯಿಂದ ಜಾಗೃತಿ ಅಭಿಯಾನವೂ ನಡೆಯುತ್ತಿದ್ದರೂ ಜನರು ಅದರ ಬಗ್ಗೆ ಗಂಭೀರತೆ ತೋರುತ್ತಿಲ್ಲ.
ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ವೇಗವಾಗಿ ಚಲಿಸುತ್ತಿರುವ ರೈಲಿನ ಬಾಗಿಲನ್ನು ಹಿಡಿದು ನಿಂತಿದ್ದಾನೆ. ಏಕಾಏಕಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ.
ಮತ್ತಷ್ಟು ಓದಿ: Video: ಒಡಿಶಾ ರೈಲು ದುರಂತ: ಎದೆ ಝಲ್ ಎನಿಸುತ್ತೆ ಏರಿಯಾಲ್ ವೀವ್ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಲವು ಪ್ರಯಾಣಿಕರು ಲೋಕಲ್ ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದಾರೆ ಆಗ ಓರ್ವನಿಗೆ ವಿದ್ಯುತ್ ಕಂಬವೊಂದು ಡಿಕ್ಕಿ ಹೊಡೆದಿದ್ದು ಆತ ಅಲ್ಲಿಯೇ ನೆಲಕ್ಕೆ ಬಿದ್ದಿದ್ದಾನೆ.
ರೈಲಿನ ಬಾಗಿಲ ಹಿಡಿದು ಜೀವ ಕೈಯಲ್ಲಿ ಹಿಡಿದು ನೇತಾಡಿಕೊಂಡು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಲೋಕಲ್ ರೈಲುಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿವೆ. ಅಡಿ ಜಾಗ ಸಿಕ್ಕರೂ ಜನರು ನಿಂತುಕೊಳ್ಳುತ್ತಾರೆ. ಇದುವರೆಗೆ ಈ ವಿಡಿಯೋವನ್ನು 4.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Tue, 27 June 23