Viral Video: ಸಂಚಾರಿ ನಿಯಮ ಮುರಿದ ಜೋಡಿ; ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು
Traffic Police : 'ಸಂಚಾರ ನಿಯಮವನ್ನು ಉಲ್ಲಂಘಿಸಿದ ಈ ವಿಡಿಯೋವನ್ನು ಟ್ರಾಫಿಕ್ ಪೊಲೀಸ್ ಸೆಂಟಿನೆಲ್ ಅಪ್ಲಿಕೇಷನ್ನಲ್ಲಿ ರಿಪೋರ್ಟ್ ಮಾಡಬೇಕೆಂಬ ವಿನಂತಿ' ಎಂದು ಈ ಟ್ವೀಟ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
Delhi : ಸಾರ್ವಜನಿಕ ವಲಯಗಳಲ್ಲಿ ಯಾರೇ ಆಗಲಿ ಮನಬಂದಂತೆ ವರ್ತಿಸಿದರೆ ಅದಕ್ಕೆ ಪ್ರತಿಯಾಗಿ ದಂಡ ತೆರಬೇಕಾಗುತ್ತದೆ ಅಥವಾ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ನಾಗರಿಕ ಪ್ರಜ್ಞೆಯುಳ್ಳ ಎಲ್ಲರಿಗೂ ಇದು ತಿಳಿದಿರುವ ವಿಷಯ. ಆದರೆ ಕೆಲವರು ಬೇಕೆಂದೇ ನಿಯಮಗಳ ಉಲ್ಲಂಘನೆ ಮಾಡುತ್ತಿರುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿರು ಈ ಜೋಡಿ ಇದಕ್ಕೆ ಉದಾಹರಣೆ. ಅವನು ಬೈಕ್ ಓಡಿಸುತ್ತಿದ್ದಾನೆ. ಆಕೆ ಅವನನ್ನು ತಬ್ಬಿ ಕುಳಿತಿದ್ದಾಳೆ. ದೆಹಲಿಯ ಮಂಗೋಲ್ಪುರಿ (Mangolpuri) ಹೊರವರ್ತುಲ ರಸ್ತೆಯಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಗಾಝಿಯಾಬಾದ್ನ ಪೊಲೀಸರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
Idiot’s of Delhi Time – 7:15pm Day – Sunday 16-July Outer Ring Road flyover, Near Mangolpuri@dtptraffic pic.twitter.com/d0t6GKuZS5
ಇದನ್ನೂ ಓದಿ— ????? ????? ?️? (@Buntea) July 16, 2023
@Buntea ಎಂಬ ಟ್ವಿಟರ್ ಖಾತೆದಾರರು ಈಡಿಯಟ್ಸ್ ಆಫ್ ದೆಹಲಿ ಎಂಬ ಒಕ್ಕಣೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಬೈಕ್ ಓಡಿಸುತ್ತಿರುವವನು ಹೆಲ್ಮೆಟ್ ಹಾಕಿಕೊಂಡಿದ್ಧಾನೆ ಆದರೆ ಆಕೆ ಹಾಕಿಕೊಂಡಿಲ್ಲ. ಎರಡು ದಿನಗಳ ಹಿಂದೆ ಮಾಡಿದ ಈ ಪೋಸ್ಟ್ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ಧಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋದಲ್ಲಿರುವ ಜೋಡಿಗೆ ಬೈದಿದ್ದಾರೆ.
ಇದನ್ನೂ ಓದಿ : Viral Video: ಟೊಮ್ಯಾಟೋ ಬೆಲೆ ದುಬಾರಿಯಾಗಲು ಕಾರಣರಾದವರ ವಿಡಿಯೋ ವೈರಲ್
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ದೆಹಲಿ ಸಂಚಾರಿ ಪೊಲೀಸರು, ‘ಧನ್ಯವಾದಗಳು, ಸಂಚಾರ ನಿಯಮವನ್ನು ಉಲ್ಲಂಘಿಸಿದ ವಿಡಿಯೋವನ್ನು ಟ್ರಾಫಿಕ್ ಪೊಲೀಸ್ ಸೆಂಟಿನೆಲ್ ಅಪ್ಲಿಕೇಷನ್ನಲ್ಲಿ ರಿಪೋರ್ಟ್ ಮಾಡಬೇಕೆಂಬ ವಿನಂತಿ’ ಎಂದಿದ್ದಾರೆ. ಜೊತೆಗೆ ಈ ಆ್ಯಪ್ನ ಲಿಂಕ್ನ್ನೂ ಅವರು ಹಂಚಿಕೊಂಡಿದ್ದಾರೆ. ಸಿನೆಮಾಗಳನ್ನು ನೋಡಿಯೇ ಈ ಯುವಜನತೆ ಹೀಗೆ ವರ್ತಿಸುತ್ತಿದೆ ಎಂದಿದ್ದಾರೆ ಒಬ್ಬರು. ಇದು ತುಂಬಾ ಅಪಾಯಕಾರಿಯಾಗಿದೆ, ಇಂಥ ಹುಚ್ಚುಸಾಹಸಗಳು ಬೇಡ ಎಂದಿದ್ಧಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:24 am, Wed, 19 July 23