Viral: ಐಕಿಯಾ; ‘ಪರಭಾಷೆಗಳ ಹೇರಿಕೆ ನಿಲ್ಲಲಿ, ಕರ್ನಾಟಕದಲ್ಲಿ ಕನ್ನಡವೇ ಇರಲಿ’
Kannada : 'ಜರ್ಮನ್, ಸ್ವೀಡನ್ನಲ್ಲಿರುವ ಐಕಿಯಾ ಸ್ಟೋರ್ಗಳಲ್ಲಿಯಂತೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆ, ಉತ್ಪನ್ನದ ವಿವರಗಳು ಕರ್ನಾಟಕದಲ್ಲಿ ಏಕಿಲ್ಲ? ಐಕಿಯಾಗೆ ನಾಚಿಕೆಯಾಗಬೇಕು' ಕಣಾದ ಮೇಟಿಕುರ್ಕೆ
IKEA : ‘ಇಂದು ನಾನು ನನ್ನ ತಾಯಿಯೊಂದಿಗೆ ಬೆಂಗಳೂರಿನ ಐಕಿಯಾಗೆ ಭೇಟಿ ಕೊಟ್ಟಿದ್ದೆ. ಜರ್ಮನಿಯ ಐಕಿಯಾದಲ್ಲಿ ಸಿಗುವ ಆಲೂಗಡ್ಡೆ ಚಿಪ್ಸ್ ಭಾರತದಲ್ಲಿ ಲಭ್ಯವೇ? ಎಂದು ರೆಸ್ಟೋರೆಂಟ್ನ ಮ್ಯಾನೇಜರ್‌ಗೆ ಕೇಳಿದೆ. ಆಗ ಆಕೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಲು ತೊಡಗಿದರು. ನಾವು ಕನ್ನಡ ನಾಡಿನಲ್ಲಿದ್ದೇವೆ ಎನ್ನುವುದನ್ನು ಅವರಿಗೆ ನೆನಪಿಸಿ, ಕನ್ನಡವನ್ನು (Kannada) ಅರ್ಥ ಮಾಡಿಕೊಳ್ಳಲು ಬಯಸುವ ಸಿಬ್ಬಂದಿ ಅಥವಾ ಭಾಷಾಂತರಕಾರರು ಇದ್ದರೆ ಒಳ್ಳೆಯದು ಎಂದು ವಿನಂತಿಸಿಕೊಂಡೆ. ಆರಂಭದಲ್ಲಿ ನನ್ನ ಮನವಿಯನ್ನು ನಿರಾಕರಿಸಿದ ಆಕೆ ಒಂದಿಷ್ಟು ಭಾಷಣ ಮಾಡಲು ಮುಂದಾದರು’ ಕಣಾದ ಮೇಟಿಕುರ್ಕೆ ಎಂಬುವವರು ಬೆಂಗಳೂರಿನ ಐಕಿಯಾ ರೆಸ್ಟೋರೆಂಟ್ನಲ್ಲಿ ತಮಗಾದ ಅನುಭವವನ್ನು ಟ್ವೀಟ್ ಮಾಡಿದ್ದಾರೆ. ಮುಂದಿನದನ್ನು ಅವರ ಮಾತುಗಳಲ್ಲಿಯೇ ಓದಿಕೊಳ್ಳಿ.
Thread on IKEA’s Unwelcoming Attitude towards Kannadigas, and their indifference towards the interests of Kannada, Kannadiga and Karnataka@IKEA @IKEAUSA @IKEAUK @IKEAUSAHelp @IKEAIndia#IKEA #KannadaNadu #ServeInMyLanguage #RespectLocalLanguages
ಇದನ್ನೂ ಓದಿ— ಕಣಾದ (@Metikurke) July 15, 2023
ಸ್ವೀಡನ್‌ನಲ್ಲಿ ಸ್ವೀಡಿಷ್ ಮಾತನಾಡುತ್ತಾರೆ, ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ಜರ್ಮನಿಯಲ್ಲಿ ಜರ್ಮನ್ ಮಾತನಾಡುತ್ತಾರೆ ಎಂದು ನಾನು ಮ್ಯಾನೇಜರ್‌ಗೆ ವಿವರಿಸುತ್ತ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಎಂದು ನಿರೀಕ್ಷಿಸುತ್ತೇನೆ ಎಂದೆ. ಸ್ಥಳೀಯ ಕಾನೂನುಗಳ ಬಗ್ಗೆ ತಿಳಿವಳಿಕೆ ಇಲ್ಲದ ಆಕೆ ಬೆಂಗಳೂರಿನ IKEA ದಲ್ಲಿ ಪ್ರಾದೇಶಿಕ ಭಾಷೆಗಳ ಅಗತ್ಯವನ್ನು ಪ್ರಶ್ನಿಸಿದ್ದಲ್ಲದೆ, ಇಲ್ಲಿ ಇಂಗ್ಲಿಷ್ ಅಷ್ಟೇ ಸಾಕು ಎಂದು ವಾದಿಸಿದರು.
ಇದನ್ನೂ ಓದಿ : Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ
ನಾನು ಆಕೆಯೊಂದಿಗೆ ಇಂಗ್ಲಿಷ್ ಮಾತನಾಡಲು ನಿರಾಕರಿಸಿದೆ ಎಂದು ಆರೋಪಿಸಿ ನನ್ನ ಮೇಲೆಯೇ ಕೂಗಾಡಲು ಪ್ರಾರಂಭಿಸಿದರು. ಆಗ ಜರ್ಮನಿಯಲ್ಲಿ IKEA ಗೆ ಹೋದಾಗ ನಿರರ್ಗಳವಾಗಿ ನಾನು ಆ ಜರ್ಮನ್ ಭಾಷೆಯಲ್ಲಿಯೇ ಮಾತನಾಡಿದೆ. ಇನ್ನು ನಾನು ಸ್ಥಳೀಯ, ಅದಕ್ಕಾಗಿ ಕನ್ನಡ ಮಾತನಾಡಿದೆ ಎಂದೆ. ಅದಕ್ಕೆ ಆಕೆ ಭಾರತೀಯರು ಇಂಗ್ಲಿಷ್ ಮತ್ತು ಹಿಂದಿಯೊಂದಿಗೆ ಸಂಭಾಷಿಸಬಹುದು ಎಂದರು. ನಾನೊಬ್ಬ ಕನ್ನಡಿಗ ಎಂದೆ. ಆಕೆ ಮತ್ತೆ ನಾವೆಲ್ಲರೂ ಭಾರತೀಯರು ಎಂದರು. ಆಕೆಯ ಧ್ವನಿ ತಾರಕಕ್ಕೇರಿತು. ಆ ಹೊತ್ತಿಗೆ ಫ್ಲೋರ್ ಮ್ಯಾನೇಜರ್ ಒಬ್ಬರು ಮಧ್ಯೆ ಪ್ರವೇಶಿಸಿ ಕನ್ನಡದಲ್ಲಿ ಮಾತನಾಡಿ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಇದನ್ನೂ ಓದಿ : Viral Video: ಬಸ್ಸಿಗೆ ಹಾಯ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಿಡಿಯೋ ವೈರಲ್
ನಾನು ನನ್ನ ತಾಯಿಯೊಂದಿಗೆ ಶಾಪಿಂಗ್ ಹೋದಾಗೆಲ್ಲ ನಾವಿಬ್ಬರೂ ಮೊದಲು ಕನ್ನಡಕ್ಕೆ ಆದ್ಯತೆ ನೀಡುತ್ತೇವೆ. ಬೇರೆ ಕಡೆ ಪರರಾಜ್ಯದ ಸಿಬ್ಬಂದಿ ಇದ್ದರೂ ಶಾಂತ ರೀತಿಯಲ್ಲಿ ಇಂಥದನ್ನೆಲ್ಲ ನಿಭಾಯಿಸುತ್ತಾರೆ. ಆದರೆ ಐಕಿಯಾ ಮ್ಯಾನೇಜರ್ ಕೋಪದಿಂದ ಕೂಗಾಡಿದುದು ಬೇಸರ ತಂದಿತು. ನಾವು ಸ್ಟಾಕ್ಹೋಮ್, ಪ್ಯಾರೀಸ್ ಅಥವಾ ಲಂಡನ್ನಲ್ಲಿ ಇಲ್ಲ, ಕರ್ನಾಟಕದಲ್ಲಿದ್ದೇವೆ. ಇಂಥ ಸಿಬ್ಬಂದಿ ಮತ್ತು ವಾತಾವರಣವನ್ನು ಪೋಷಿಸುತ್ತಿರುವ ಐಕಿಯಾಗೆ ನಾಚಿಕೆಯಾಗಬೇಕು. ನಮಗೆ ಕನ್ನಡ ಮಾತನಾಡುವ ಸಿಬ್ಬಂದಿ ಬೇಕು. ಜರ್ಮನಿ, ಸ್ವೀಡನ್ ಮತ್ತು ಇಂಗ್ಲೆಂಡ್ನಲ್ಲಿರುವ ಐಕಿಯಾ ಸ್ಟೋರ್ಗಳಲ್ಲಿಯಂತೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆ, ಅಥವಾ ಉತ್ಪನ್ನದ ವಿವರಗಳು ಕರ್ನಾಟಕದಲ್ಲಿ ಏಕಿಲ್ಲ?
ಇದನ್ನೂ ಓದಿ : Viral: ಮೈಲ್ಯಾಂಗ್ ಆಡಿಯೋ ಸ್ಟೋರಿ ಚಾಲೇಂಜ್ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ
ಸ್ವಿಡನ್ನ ಐಕಿಯಾ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಕರ್ನಾಟಕದ ಅಧಿಕೃತ ಭಾಷೆ ಕನ್ನಡ. ಐಕಿಯಾ ಈ ನಿಯಮವನ್ನು ಪಾಲಿಸಬೇಕು. ಪರದೇಶಗಳ ಭಾಷಾ ಹೇರಿಕೆಯನ್ನು ನಿಲ್ಲಿಸಬೇಕು. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:13 pm, Tue, 18 July 23