Viral Video: ದೂಧಸಾಗರ; ರೈಲ್ವೆ ಹಳಿ ದಾಟಿದ್ದಕ್ಕೆ ಚಾರಣಿಗರಿಂದ ಬಸ್ಕಿ ಹೊಡೆಸಿದ ಪೊಲೀಸರು
Punishment : 1,017 ಅಡಿಯಿಂದ ಧುಮುಕುವ ಈ ಹಾಲಿನ ಸಮುದ್ರವನ್ನು ಮಳೆಗಾಲದಲ್ಲಿ ನೋಡುವುದೇ ಛಂದ. ಆದರೆ ಇತ್ತೀಚೆಗೆ ಸಂಭವಿಸಿದ ಅಪಘಾತದಿಂದಾಗಿ ಗೋವಾ ಸರ್ಕಾರ ಇಲ್ಲಿ ಚಾರಣವನ್ನು ನಿಷೇಧಿಸಿದೆ. ಆದರೂ ಈ ತಂಡ...
Dudhsagar : ಗೋವಾ-ಕರ್ನಾಟಕ ಗಡಿಯಲ್ಲಿರುವ ದೂಧಸಾಗರ್ ಜಲಪಾತದ ಮನೋಹರ ದೃಶ್ಯವನ್ನು ನೋಡಲು ಮಳೆಗಾಲದ ಈ ಸಮಯ ಅತ್ಯಂತ ಪ್ರಶಸ್ತ. ಹಾಗಾಗಿ ಇಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಇದೀಗ ಇಂಥದೊಂದು ಚಾರಣಿಗರ ಗುಂಪಿಗೆ (Trekking Group) ಪೊಲೀಸರು ದಂಡಿಸಿದ ವಿಡಿಯೋ ವೈರಲ್ ಆಗಿದೆ. ಜಲಪಾತವನ್ನು ನೋಡಲು ಈ ಚಾರಣಿಗರು ನಿಗದಿತ ಸ್ಥಳಕ್ಕಿಂತ ಮೊದಲೇ ರೈಲಿನಿಂದ ಇಳಿದಿದ್ದಕ್ಕಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಚಾರಣಿಗರು ಮಾಡಿದ ತಪ್ಪಿಗೆ ಸಾಲಾಗಿ ನಿಂತು ಬಸ್ಕಿ ಹೊಡೆಯುತ್ತಿರುವ ಈ ವಿಡಿಯೋ ಇಲ್ಲಿದೆ.
Railway Police Punish Trekkers at Dudhsagar Waterfall. #Dudhsagar #travel pic.twitter.com/hM94awOmcy
— Naveen Navi (@IamNavinaveen) July 16, 2023
ಬೆಂಗಳೂರು, ಮಂಗಳೂರು, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಿಂದ ಚಾರಣಿಗರ ದಂಡು ಈ ಜಲಪಾತವನ್ನು ನೋಡಲು ಬರುತ್ತದೆ. ಸಾಮಾನ್ಯವಾಗಿ ಚಾರಣಿಗರು ಗೋವಾದ ಕೊಲ್ಲಮ್ ನಿಲ್ದಾಣದಲ್ಲಿ ಇಳಿದು ನೈಋತ್ಯ ರೈಲ್ವೆ ಹಳಿಗುಂಟ ನಡೆದುಕೊಂಡು ದೂಧಸಾಗರವನ್ನು ತಲುಪುವುದು ವಾಡಿಕೆ.
ಇದನ್ನೂ ಓದಿ : Viral Video: ಬಸ್ಸಿಗೆ ಹಾಯ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಿಡಿಯೋ ವೈರಲ್
ಆದರೆ ಇತ್ತೀಚೆಗೆ ಸಂಗೂಯೆಮ್ ತಾಲೂಕಿನ ಮೈನಾಪಿ ಜಲಪಾತದಲ್ಲಿ ಇತ್ತೀಚೆಗೆ ಇಬ್ಬರು ಮುಳುಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯು ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾರಣಿಗರನ್ನು ರೈಲ್ವೆ ಹಳಿ ಬಳಿ ಪೊಲೀಸರು ತಡೆದು, ಪರಿಣಾಮದ ಬಗ್ಗೆ ವಿವರಿಸಿ, ದಂಡಿಸಿ ವಾಪಾಸು ಕಳಿಸಿದ್ದಾರೆ.
We urge you to savour the beauty of Dudhsagar Falls from WITHIN your coach. Walking on/along tracks not only endangers your own safety but is also an offence under Section 147, 159 of Railway Act. It can also endanger safety of trains. (1/2) pic.twitter.com/Puj7hKh5JF
— South Western Railway (@SWRRLY) July 16, 2023
ಹಾಗಾಗಿ ಪ್ರವಾಸಿಗರು ದೂಧಸಾಗರ್ ಜಲಪಾತದ ಸೌಂದರ್ಯವನ್ನು ರೈಲಿನೊಳಗೇ ಕುಳಿತು ಆಸ್ವಾದಿಸಬೇಕು ಎಂಬ ಕಟ್ಟಾಜ್ಞೆಯನ್ನು ಪಾಲಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಪ್ರವಾಸಿಗರು ಮತ್ತು ರೈಲು ಪ್ರಯಾಣಿಕರು ಪರಸ್ಪರ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ರೈಲ್ವೇ ಕಾಯಿದೆ ಸೆಕ್ಷನ್ 147 ಮತ್ತು 159 ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಪ್ರವಾಸಿಗರು ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂದು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:26 am, Tue, 18 July 23