Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

Kannada Short Stories : ನೀವು ಕನ್ನಡದಲ್ಲಿ ಕಥೆ ಬರೆಯುತ್ತೀರೆ ಅಥವಾ ಬರೆದ ಕಥೆಯನ್ನು ಓದುವಲ್ಲಿ ನಿಮಗೆ ಆಸಕ್ತಿ ಇದೆಯೇ? ಹಾಗಿದ್ದರೆ ಕನ್ನಡದ ಮೊದಲ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ನೀವು ಖಂಡಿತ ಭಾಗವಹಿಸಬಹುದು.

Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ
ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​
Follow us
ಶ್ರೀದೇವಿ ಕಳಸದ
|

Updated on:Jul 18, 2023 | 3:02 PM

Challenge : ಅಯ್ಯೋ ಅದೊಂದು ದೊಡ್ಡ ಕಥೆ ಬಿಡು. ಅವನ ಕಥೆ ಕೇಳಿದರೆ ಅಷ್ಟೇ. ಅಂದಹಾಗೆ ಆ ಕಥೆ ಮುಂದೇನಾಯ್ತು? ಬರೆದರೆ ಅದೊಂದು ಕಥೆನೇ. ಆ ಕಥೆ ಓದಬೇಕು ಅಂದರೆ ಆಗ್ತಾನೇ ಇಲ್ಲ. ಬರೀಲೇಬೇಕಂತಿಲ್ಲ ಬರೆದ ಕಥೆಯನ್ನು ಓದಿದರೂ ಆಯ್ತು! ಹೌದಾ? ಹೌದು, ಇದೀಗ ಮೈಲ್ಯಾಂಗ್​ (Mylang) ಕನ್ನಡದ ಹೊಸ ತಲೆಮಾರಿನ ಓದುಗರನ್ನು ಸೆಳೆಯುವುದಕ್ಕಾಗಿ ಮತ್ತು ಕಥಾಪ್ರಿಯರಿಗಾಗಿ ಆಡಿಯೋಸ್ಟೋರಿ ಚಾಲೇಂಜ್​ ಏರ್ಪಡಿಸಿದೆ. ಕನ್ನಡದಲ್ಲಿ ನಡೆಯುತ್ತಿರುವ ಈ ಮೊದಲ ಪ್ರಯತ್ನದಲ್ಲಿ ನೀವೂ ಪಾಲ್ಗೊಳ್ಳಬಹುದು ಮತ್ತು  ರೂ. 10,000 ಬಹುಮಾನವನ್ನೂ ಪಡೆಯಬಹುದು! ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೈಲ್ಯಾಂಗ್ ಆಡಿಯೋ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಕಥೆ ಬರೆಯಲು ಆಸಕ್ತಿ ಇದ್ದವರು ಈ ಅಪ್ಲಿಕೇಷನ್​ನಲ್ಲಿ ತಮ್ಮ ಕಥೆಗಳನ್ನು ಪ್ರಕಟಿಸಬಹುದು. ಇತರರ ಕಥೆಗಳಿಗೆ ಧ್ವನಿಯಾಗಲು ಇಚ್ಛಿಸುವವರು, ಅಂದರೆ ಕಥೆ ಓದಲು ಆಸಕ್ತಿ ಇರುವವರು ಈ ಅಪ್ಲೀಕೇಷನ್​ನಲ್ಲಿರುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ಓದಿ ಅಲ್ಲಿಯೇ ಆಡಿಯೋ ಅಪ್​ಲೋಡ್ ಮಾಡಬೇಕು. ಆಯ್ದ ಕಥೆಗೆ ರೂ. 10,000 ನಗದು ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ : Viral Video: ದೂಧಸಾಗರ; ರೈಲ್ವೆ ಹಳಿ ದಾಟಿದ್ದಕ್ಕೆ ಚಾರಣಿಗರಿಂದ ಬಸ್ಕಿ ಹೊಡೆಸಿದ ಪೊಲೀಸರು

ಮೈಲ್ಯಾಂಗ್​ನ ವಸಂತ ಶೆಟ್ಟಿ, ‘ಹೊಸ ತಲೆಮಾರಿನವರಿಗೆ ಕನ್ನಡದ ರುಚಿಯನ್ನು ಕಥೆಗಳ ಮೂಲಕ ಉಣಿಸಬೇಕು. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಈ ಪೀಳಿಗೆಯವರಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವುದು ನಮ್ಮ ಆಶಯ. ಈ ಸ್ಪರ್ಧೆಗೆ ವಯಸ್ಸಿನ ಮಿತಿ ಇಲ್ಲ. ಕನ್ನಡದಲ್ಲಿ ಕಥೆ ಬರೆಯಬಲ್ಲ ಮತ್ತು ಕಥೆಗಳನ್ನು ಓದಬಲ್ಲ ಯಾರೂ ಇದರಲ್ಲಿ ಭಾಗವಹಿಸಬಹುದು. ಈ ಕುರಿತು ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದಿನವೇ 50 ಕಥೆಗಾರರು ತಮ್ಮ ಕಥೆಗಳನ್ನು ಮೈಲ್ಯಾಂಗ್​ನಲ್ಲಿ ಪ್ರಕಟಿಸಿದ್ದರು ಮತ್ತು 50 ಜನರು ಇತರರ ಕಥೆಗಳನ್ನು ಓದಿದ್ದರು. ಕರ್ನಾಟಕ ಅಷ್ಟೇ ಅಲ್ಲ, ಹೊರನಾಡ/ದೇಶಗಳಲ್ಲಿರುವ ಕನ್ನಡಿಗರೂ ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ’ ಎನ್ನುತ್ತಾರೆ.

ನೀವೂ ಭಾಗವಹಿಸಿ, ಆಸಕ್ತರಿಗೂ ತಿಳಿಸಿ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:27 pm, Tue, 18 July 23

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ