AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಇಷ್ಟೊಂದು ದುಬಾರಿ ಬಟ್ಟೆ ಹಾಕಿದ್ದೀರಾ, ಏನು ಕೆಲಸ ಮಾಡ್ತೀರಾ?’

Business : ಯಾವ ಬಿಝಿನೆಸ್​ ಸ್ಕೂಲಿನಲ್ಲಿ ಶಿಕ್ಷಣ ಪೂರೈಸಿದರು ಎನ್ನುವುದನ್ನು ಬಹಿರಂಗಪಡಿಸದ ಈ ಹುಡುಗಿಯರಿಬ್ಬರು ಯಾವ ಉದ್ಯಮ ಮಾಡಿ ಇಂಥ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ಮಾತ್ರ ತಿಳಿಸಿದ್ದಾರೆ.

Viral Video: 'ಇಷ್ಟೊಂದು ದುಬಾರಿ ಬಟ್ಟೆ ಹಾಕಿದ್ದೀರಾ, ಏನು ಕೆಲಸ ಮಾಡ್ತೀರಾ?'
ಟೊಮ್ಯಾಟೋ ಬಿಝಿನೆಸ್​ ಒಡತಿಯರನ್ನು ಸಂದರ್ಶಿಸುತ್ತಿರುವ ಸಂದರ್ಶಕಿ
ಶ್ರೀದೇವಿ ಕಳಸದ
|

Updated on:Jul 19, 2023 | 4:11 PM

Share

Tomato : ಟೊಮ್ಯಾಟೋ ಕದ್ದವರು, ಟೊಮ್ಯಾಟೋ ನುಂಗಿದವರು, ಟೊಮ್ಯಾಟೋ ಕಾಯುವವರು, ಟೊಮ್ಯಾಟೋ ಧರಿಸಿದವರನ್ನೆಲ್ಲ ನೋಡುತ್ತಿದ್ದೀರಿ. ಟೊಮ್ಯಾಟೋ ಮೀಮ್​ಗಳು, ಟೊಮ್ಯಾಟೋ ಹಾಡುಗಳು, ಟೊಮ್ಯಾಟೋ ಜೋಕ್​ಗಳು, ಟೊಮ್ಯಾಟೋ ಜಗಳಗಳು… ಲೆಕ್ಕವೇ ಇಲ್ಲ. ಟೊಮ್ಯಾಟೋ ಇಷ್ಟೊಂದು ಡಿಮ್ಯಾಂಡ್​ನಲ್ಲಿರಬೇಕಾದರೆ ಯಾಕೆ ಟೊಮ್ಯಾಟೋ ಬಿಝಿನೆಸ್ ಮಾಡಬಾರದು ಎಂಬ ಆಲೋಚನೆ ಬೆಂಗಳೂರಿನ (Bengaluru) ಈ ಹುಡುಗಿಯರಿಬ್ಬರಿಗೆ ಅನ್ನಿಸಿದೆ. ಇವರ ಈ ವಿಡಿಯೋ ನೋಡಿದ ಮೇಲೆ ಬೆಂಗಳೂರಿನ ಬಿಝಿನೆಸ್ ಸ್ಕೂಲ್​​ಗಳಲ್ಲಿ ಟೊಮ್ಯಾಟೋ ಕೋರ್ಸ್​ ಶುರುವಾದರೂ ಆದೀತೇ!

ಓರಿಯನ್​ ಮಾಲ್​​ನ (Orion Mall) ಅಂಗಳದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಸಂದರ್ಶಕಿಯ ಪಾತ್ರವಹಿಸಿದ ಒಬ್ಬಾಕೆ ಈ ಇಬ್ಬರೂ ಹುಡುಗಿಯರನ್ನು ಮಾತನಾಡಿಸುತ್ತಾಳೆ. ತಾವು ಧರಿಸಿದ ಒಂದೊಂದು ಬಟ್ಟೆ, ಚಪ್ಪಲಿಗಳು ಮತ್ತು ಹಿಡಿದುಕೊಂಡಿರುವ ಬ್ಯಾಗ್​​ಗಳ ಬ್ರ್ಯಾಂಡ್​, ಅವುಗಳ ಬೆಲೆಯನ್ನು ಹೇಳುತ್ತಾ ಒಟ್ಟಾರೆ ಬೆಲೆಯನ್ನು ಲಕ್ಷಗಳಲ್ಲಿ ಹೇಳುತ್ತಾರೆ. ಅವಾಕ್ಕಾದ ಸಂದರ್ಶಕಿ, ಇಷ್ಟೊಂದು ತುಟ್ಟಿಯಾದ ಬಟ್ಟೆಗಳನ್ನು ಧರಿಸಿರುವ ನೀವು ಏನು ಕೆಲಸ ಮಾಡಿಕೊಂಡಿದ್ದೀರಿ? ಎಂದು ಕೇಳುತ್ತಾಳೆ. ಆ ಹುಡುಗಿಯರು ಟೊಮ್ಯಾಟೋ ಬಿಝಿನೆಸ್! ಎನ್ನುತ್ತಾರೆ.

ಇದನ್ನೂ ಓದಿ : Viral Video: ಪಾನೀಪೂರಿ ಪ್ರಿಯರೇ, ಒಂದೇ ಸಲ ಈ ವಿಡಿಯೋ ನೋಡಿ ಸಾಕು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಟೊಮ್ಯಾಟೋ ಷೋರೂಮ್​​ಗಳು, ಟೊಮ್ಯಾಟೋ ವಿಶ್ವವಿದ್ಯಾಲಯಗಳು, ಟೊಮ್ಯಾಟೋ ಸಂಶೋಧನಾ ಕೇಂದ್ರಗಳು, ಟೊಮ್ಯಾಟೋ ಮಾಲ್​​ಗಳು, ಟೊಮ್ಯಾಟೋ ದೇವಸ್ಥಾನಗಳು, ಟೊಮ್ಯಾಟೋ ಮ್ಯೂಸಿಯಮ್​​ಗಳು.. ಮುಂದಿನ ದಿನಗಳಲ್ಲಿ  ಹೀಗೆ ಏನೇ ನೆಲ್ಲಾ ತಲೆಎತ್ತಿ, ಟೊಮ್ಯಾಟೋ ಬೆಲೆ ಅಷ್ಟೇ ಅಲ್ಲ, ಟೊಮ್ಯಾಟೋನೇ ಚಂದ್ರನ ಮೇಲೆ ಹೋಗಿ ಕುಳಿತುಕೊಳ್ಳಲೂಬಹುದು! ಅದಕ್ಕಾಗಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡು ಯಾವ ಪುರಾಣದಲ್ಲಿ ಇದರ ಉಲ್ಲೇಖವಿದೆ ಎಂದು ಸಾರಿ ಹೇಳಬಹುದು.

ಇದನ್ನೂ ಓದಿ : Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ

ಒಟ್ಟಿನಲ್ಲಿ ಏರಿದ ಟೊಮ್ಯಾಟೋ ಇಳಿದು ತಟ್ಟೆಗೆ ಬರುವ ತನಕವೂ ಡಿಜಿಟಲ್​ ಕ್ರಿಯೇಟರ್ಸ್​ಗೆ ಕೂತಲ್ಲಿ ನಿಂತಲ್ಲಿ ಮಲಗಿದಲ್ಲಿ ಕನಸಿನಲ್ಲಿ ಟೊಮ್ಯಾಟೋ ಟೊಮ್ಯಾಟೋ ಟೊಮ್ಯಾಟೋ. ಅಂದಹಾಗೆ ನೀವು ಎಷ್ಟು ದಿನಗಳಾದವು ಅಡುಗೆಗೆ ಟೊಮ್ಯಾಟೋ ಹಾಕದೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:10 pm, Wed, 19 July 23

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್