AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಮನೆಯೊಂದರ ಬಾತ್‌ರೂಮ್‌ನಲ್ಲಿ ಭಾರೀ ಗಾತ್ರದ ಹಾವು ಪತ್ತೆ! ಇದು ಯಾವ ಜಾತಿ ಸರ್ಪ?

ಮನೆಯೊಂದರ ಬಾತ್ರೂಮ್​ನಲ್ಲಿ ಕಪ್ಪು ಬಣ್ಣದ ಹಾವೊಂದು ಕಾಣಿಸಿಕೊಂಡಿದೆ, ಇದರಿಂದ ಭಯಗೊಂಡ ಮನೆಯವರು ಪೊಲೀಸರಿಗೆ ಫೋನ್​​ ಮಾಡಿದ್ದಾರೆ.

Viral Post: ಮನೆಯೊಂದರ ಬಾತ್‌ರೂಮ್‌ನಲ್ಲಿ ಭಾರೀ ಗಾತ್ರದ ಹಾವು ಪತ್ತೆ! ಇದು ಯಾವ ಜಾತಿ ಸರ್ಪ?
ವೈರಲ್​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Jul 20, 2023 | 12:39 PM

Share

ಅಮೆರಿಕದ ಕೆರೊಲಿನಾದಲ್ಲಿರುವ ಮನೆಯೊಂದರ ಬಾತ್ರೂಮ್​ನಲ್ಲಿ ಕಪ್ಪು ಬಣ್ಣದ ಹಾವೊಂದು ಕಾಣಿಸಿಕೊಂಡಿದೆ, ಇದರಿಂದ ಭಯಗೊಂಡ ಮನೆಯವರು ಪೊಲೀಸರಿಗೆ ಫೋನ್​​ ಮಾಡಿದ್ದಾರೆ. ಅಮೆರಿಕದ ಗ್ರಹಾಂ ಪೊಲೀಸ್ ಇಲಾಖೆ ಈ ಬಗ್ಗೆ ಫೇಸ್‌ಬುಕ್​ನಲ್ಲಿ ಒಂದು ಪೋಸ್ಟ್​​​ನ್ನು ಹಂಚಿಕೊಂಡಿದ್ದಾರೆ. ಹಾವನ್ನು ನೋಡಿ ಭಯಗೊಂಡ ಮನೆಯವರು ಪೊಲೀಸರಿಗೆ ಫೋನ್​​ ಮಾಡಿ. ನಮ್ಮ ಮನೆಯ ಬಾತ್ರೂಮ್​​ಗೆ ಕಪ್ಪು ಬಣ್ಣದ ಹಾವು ಬಂದಿದೆ, ದಯವಿಟ್ಟು ಅದನ್ನು ಹಿಡಿಯಲು ಬನ್ನಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಹಾವು ಇರುವ ಮನೆಗೆ ಬಂದು ನೋಡಿದಾಗ ಬಾತ್ರೂಮ್​​ನಲ್ಲಿ ಬೃಹತ್​ ಆಕಾರದ ಕಪ್ಪು ಬಣ್ಣದ ಹಾವು ಪತ್ತೆಯಾಗಿದೆ. ಪೊಲೀಸರು ಹಾವು ಹಿಡಿದಿರುವ ಫೋಟೋವನ್ನು ​​ ಇಲಾಖೆಯ ಫೇಸ್​​ಬುಕ್​​ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಇದು ತುಂಬಾ ವಿಷಕಾರಿ ಹಾವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!

ಪೊಲೀಸರು ತಮ್ಮ ಫೇಸ್​​ಬುಕ್​​ ಪೋಸ್ಟ್​ ಜತೆಗೆ ಹೀಗೆ ಬರೆದುಕೊಂಡಿದ್ದಾರೆ. ರಾತ್ರಿ ವೇಳೆ ನಮ್ಮ ರಾಣೆಗೆ ಒಂದು ಕರೆ ಬಂದಿತ್ತು. ನಮ್ಮ ಮನೆಗೆ ದೊಡ್ಡದಾದ, ಕಪ್ಪು ಬಣ್ಣದ ಹಾವು ಬಂದಿದೆ ಸರ್​, ತಕ್ಷಣ ಬನ್ನಿ ಎಂದು, ಇದಕ್ಕೆ ನಾವು ಕೂಡ ಪ್ರತಿಕ್ರಿಯೆ ನೀಡಿ, ತಕ್ಷಣ ಹಾವು ಇರುವ ಮನೆಗೆ ಹೋಗಿ, ಸ್ನಾನಗೃಹದಲ್ಲಿ ಅಡಗಿಕೊಂಡಿದ್ದ ಹಾವನ್ನು ಪತ್ತೆ ಮಾಡಲು ಕಾರ್ಯಚರಣೆ ಆರಂಭಿಸಿದ್ದೇವು, ಸ್ವಲ್ಪ ಸಮಯದ ನಂತರ ಅದನ್ನು ಪತ್ತೆ ಮಾಡಿ, ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಗ್ರಹಾಂ ಪೊಲೀಸರು ತಿಳಿಸಿದ್ದಾರೆ.

ಆದರೆ ಪೊಲೀಸರು ಇದು ಯಾವ ಜಾತಿಯ ಹಾವು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಇದು ಮನೆ ಒಳಗೆ ಹೇಗೆ ಬಂತು ಎಂಬುದನ್ನು ಕೂಡ ಮನೆಯವರು ತಿಳಿಸಿಲ್ಲ. ಇನ್ನೂ ಈ ಪೋಸ್ಟ್​ಗೆ ಅನೇಕರು ಕಮೆಂಟ್​ ಮಾಡಿದ್ದು, ಒಬ್ಬ ಬಳಕೆದಾರ ಪೊಲೀಸರ ಕೆಲಸಕ್ಕೆ ಶ್ಲಾಘಿಸಿದ್ದಾರೆ. ವಾವ್! ಮಹೋನ್ನತ ವ್ಯಕ್ತಿ! ನೀವು ಮಾಡಿದ ಕೆಲಸಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:38 pm, Thu, 20 July 23