Viral Post: ಅಪ್ಪ ಅಮ್ಮನಿಲ್ಲದ ಮಕ್ಕಳಿಗೆ ಕೇಕ್ ಉಚಿತ
Cake : ಉತ್ತರ ಪ್ರದೇಶದ ಸಿಹಿತಿನಿಸುಗಳ ಅಂಗಡಿಯೊಂದರಲ್ಲಿ ಅನಾಥ ಮಕ್ಕಳಿಗೆ ಉಚಿತವಾಗಿ ಕೇಕ್ ನೀಡಲಾಗುತ್ತದೆ ಎಂದು ವ್ಯಾಪಾರಿಯೊಬ್ಬರು ಕೇಕ್ ಕೌಂಟರಿನ ಮೇಲೆ ಹೀಗೆ ಬರೆದು ಅಂಟಿಸಿದ್ದಾರೆ.
Uttara Pradesh : ಉತ್ತರ ಪ್ರದೇಶದ ಸಿಹಿತಿಂಡಿಗಳ ಅಂಗಡಿಯಲ್ಲಿ 14 ವರ್ಷದೊಳಗಿನ ಅನಾಥ ಮಕ್ಕಳಿಗೆ ಉಚಿತ ಕೇಕ್ ನೀಡುತ್ತಿದೆ. ಅಂಗಡಿ ಮಾಲಿಕರ ಈ ಸಹಾನುಭೂತಿ ಮತ್ತು ಸಾಮಾಜಿಕ ಕಳಕಳಿಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಕೇಕ್ ಕೌಂಟರಿಗೆ ಅಂಟಿಸಿದ ಫಲಕದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. ಈ ಚಿತ್ರವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಸುಮಾರು 13,000 ಲೈಕ್ಸ್ ಮತ್ತು ಸಾಕಷ್ಟು ರೀಟ್ವೀಟ್ ಗೆ ಒಳಪಟ್ಟಿದೆ. ಫಲಕದಲ್ಲಿ ಹೀಗಿದೆ, ‘ಉಚಿತ ಉಚಿತ ಉಚಿತ! ತಂದೆ ತಾಯಿ ಇಲ್ಲದ 14 ವರ್ಷದೊಳಗಿನ ಮಕ್ಕಳಿಗೆ ಈ ಕೇಕ್ ಉಚಿತ’. ಉತ್ತರ ಪ್ರದೇಶದ ದೇವರಿಯಾದಲ್ಲಿರುವ ಕನಕ್ ಸ್ವೀಟ್ಸ್ ಅಂಗಡಿಯ ಚಿತ್ರ ಇದಾಗಿದೆ ಎಂದು ಅವನೀಶ್ ನಂತರದ ಟ್ವೀಟ್ನಲ್ಲಿ ಹೇಳಿದ್ದಾರೆ.
Love and Respect for the Shop Owner.❤️ pic.twitter.com/aNcSfttPrV
ಇದನ್ನೂ ಓದಿ— Awanish Sharan (@AwanishSharan) August 12, 2022
ವ್ಯಾಪಾರದೊಂದಿಗೆ ಅನುಕಂಪ, ಕಳಕಳಿ, ಪ್ರೀತಿಯನ್ನೂ ಅನೇಕ ವ್ಯಾಪಾರಿಗಳು ಬೆಳೆಸಿಕೊಂಡಿರುತ್ತಾರೆ ಎನ್ನುವುದನ್ನು ಇದು ಸೂಚಿಸುತ್ತದೆ. ಆದರೆ ಎಷ್ಟು ವರ್ಷಗಳ ತನಕ ಈ ಉಚಿತ ಕೇಕ್ ಹಂಚಿಕೆ ಸಾಗುತ್ತದೆಯೋ? ಈ ಅಂಗಡಿ ಮಾಲಿಕರು ಮತ್ತು ಅನಾಥ ಮಕ್ಕಳ ನಡುವೆ ಬಾಂಧವ್ಯ ಬೆಳೆದು ಏನಾದರೂ ಮಹತ್ತರ ಕಾರಣಕ್ಕೆ ಅದು ಕಾರಣವಾಗುತ್ತದೆಯೋ? ಹಾಗಾದರೆ ಒಳ್ಳೆಯದೇ.
ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:52 pm, Fri, 12 August 22