Viral: ನೀನೆಂಥ ಕೆಟ್ಟ ಮೋಸಗಾರ ಎಂದು ಈಗ ಇಡೀ ಊರಿಗೆ ತಿಳಿಯುತ್ತದೆ!

Boyfriend Cheated: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ನೀಚತನವನ್ನು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸಿದ್ದಾಳೆ. ಇದು ತಮಾಷೆಗಾಗಿ ಮಾಡಿದ್ದಲ್ಲ.

Viral: ನೀನೆಂಥ ಕೆಟ್ಟ ಮೋಸಗಾರ ಎಂದು ಈಗ ಇಡೀ ಊರಿಗೆ ತಿಳಿಯುತ್ತದೆ!
Source : India Today
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 12, 2022 | 3:50 PM

Cheating in Relationship : ಪ್ರೇಮ ಸಂಬಂಧದಲ್ಲಿ ಮೋಸ ಹೋಗುವುದು, ಬ್ರೇಕ್​ಅಪ್​ಗೆ ಒಳಗಾಗುವುದು ಅನೇಕ ಜನರ ಮನಸ್ಸಿನ ಮೇಲೆ ಆಳಗಾಯ ಮಾಡುತ್ತದೆ ನಿಜ. ಬ್ರೇಕ್​ ಅಪ್​ನ ನಂತರ ಕೆಲವರು ಮೌನವಾಗಿದ್ದುಬಿಡುತ್ತಾರೆ. ಇನ್ನೂ ಕೆಲವರು ಅದರಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮತ್ತೂ ಕೆಲವರು ಇದನ್ನು ಬೇರೊಂದು ಹಂತದಲ್ಲಿ ತಮಗಾದ ನೋವನ್ನು ವ್ಯಕ್ತಪಡಿಸಲು ನೋಡುತ್ತಾರೆ. ಡೈಲಿ ಮೇಲ್​ನಲ್ಲಿ ಪ್ರಕಟವಾದ ವರದಿಯಲ್ಲಿ, ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ‘ನೀಚ’ ಕೃತ್ಯವನ್ನು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಬಹಿರಂಗಪಡಿಸಿದ್ದಾಳೆ. ಇದು ತಮಾಷೆಗಾಗಿ ಮಾಡಿದ್ದಲ್ಲ. ಜೆನ್ನಿ ನೀಡಿದ ಈ ಜಾಹೀರಾತು Mackay and Whitsunday Life​ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಜಾಹಿರಾತಿನ ಒಕ್ಕಣೆಯನ್ನು ಓದಿ; ‘ಆತ್ಮೀಯ ಸ್ಟೀವ್, ನೀನು ಅವಳೊಂದಿಗೆ ಖುಷಿಯಿಂದ ಇದ್ದೀಯೆಂದು ಭಾವಿಸುತ್ತೇನೆ. ಈಗ ನೋಡು ನೀನು ಎಂಥ ಮೋಸಗಾರ, ಕೆಟ್ಟವ ಎನ್ನುವುದು ಇಡೀ ಊರಿಗೇ ತಿಳಿಯುತ್ತದೆ. ವಿ.ಸೂ – ಈ ಜಾಹೀರಾತನ್ನು ನಿನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೀಡಿದ್ದೇನೆ.’

Mackay and Whitsunday Life​ ಪತ್ರಿಕೆಯು ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ, ‘ಮ್ಯಾಕೆ ಲೈಫ್‌ನ 4ನೇ ಪುಟದಲ್ಲಿ ಬಂದ ಈ ಜಾಹೀರಾತಿನ ಕುರಿತಾಗಿ ಬರುತ್ತಿರುವ ಸಂದೇಶಗಳಿಗೆ ಉತ್ತರಿಸಲಾಗದಷ್ಟು ಪ್ರಶ್ನೆಗಳಿಂದ ನಾವು ಮುಳುಗಿ ಹೋಗುತ್ತಿದ್ದೇವೆ, ಹಾಗಾಗಿ ಇಲ್ಲಿಯೇ ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ; ಸ್ಟೀವ್ ಯಾರೆಂದು ನಮಗೆ ಗೊತ್ತಿಲ್ಲ. ಆದರೆ ಆತ ಕೆಟ್ಟ ವ್ಯಕ್ತಿಯಂತೂ ಹೌದು. ಅಲ್ಲದೆ ಜೆನ್ನಿಯ ವಿಷಯವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾರೆವು.’ ಈ ಪೋಸ್ಟ್​ ಇದೀಗ ವೈರಲ್ ಆಗಿದ್ದು, 4,000 ಲೈಕ್ಸ್​, 2,500 ಪ್ರತಿಕ್ರಿಯೆ, 1,400 ಶೇರ್ ಆಗಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನೆಟ್ಟಿಗರೊಬ್ಬರು, ‘ನಾನು ಜೆನ್ನಿಯ ಪರವಾಗಿ ಇದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಯಾಕೆ ನೀವು ಕ್ರೆಡಿಟ್ ಕಾರ್ಡ್​ ಗೆ ಚಾರ್ಜ್​ ಮಾಡಿಲ್ಲ. ಸಾರ್ವಜನಿಕರಿಗಾಗಿ ಉಚಿತ ಸೇವೆ ನೀಡುತ್ತಿದ್ದೀರಾ?’ ಎಂದು ಪತ್ರಿಕೆಯವರಿಗೆ ಇನ್ನೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:47 pm, Fri, 12 August 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ