Viral Video: ನಮ್ಮ ದೇಶದಲ್ಲಿ ಇಂಥ ಐಡಿಯಾ ಇತ್ತೇ, ಇದೆಯೇ? ನೆಟ್ಟಿಗರ ಜಗಳ ಬಿಡಿಸಿ

Creative Idea : ಷೋರೂಮು, ಇಂಟೀರಿಯರು, ಬ್ರ್ಯಾಂಡಿಂಗು, ಮಾರ್ಕೆಟಿಂಗು, ಅಂಬಾಸಿಡರು, ಅಡ್ವರ್ಟೈಸ್​ಮೆಂಟು, ಆಫರೂ ಅಂತೆಲ್ಲ ತಲೆ ಕೆಡಿಸಿಕೊಳ್ಳದೆ ಒಂದು ಫ್ರೇಮನ್ನಿಟ್ಟುಕೊಂಡು ಥರಾವರಿ ಶರ್ಟ್​ಗಳನ್ನು ಪ್ರದರ್ಶಿಸುತ್ತಿದ್ದಾರೆ ಈ ಅಂಕಲ್​.

Viral Video: ನಮ್ಮ ದೇಶದಲ್ಲಿ ಇಂಥ ಐಡಿಯಾ ಇತ್ತೇ, ಇದೆಯೇ? ನೆಟ್ಟಿಗರ ಜಗಳ ಬಿಡಿಸಿ
ಇದೇ ಐಡಿಯಾ ಬಗ್ಗೆ ಕೇಳ್ತಿರೋದು, ನಿಮ್ಮೂರಲ್ಲೂ ಇದೆಯಾ?
Follow us
ಶ್ರೀದೇವಿ ಕಳಸದ
|

Updated on:Jul 20, 2023 | 1:48 PM

Display : ಅಂಕಲ್​ ಈ ಕಾನ್ಸೆಪ್ಟ್ (Concept) ಮತ್ತು ವಿಡಿಯೋ ಮಾಡುತ್ತಿರುವುದರ ಬಗ್ಗೆ ಬಹಳ ಉತ್ಸುಕರಾದಂತಿದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕೊಬ್ಬರು ಈ ಕಾನ್ಸೆಪ್ಟ್​ ಹಳೆಯದು, ಭಾರತದಲ್ಲಿ ಇದು ಚಾಲ್ತಿಯಲ್ಲಿದ್ದು ಹತ್ತುವರ್ಷಗಳ ಮೇಲಾಯಿತು ಎಂದಿದ್ದಾರೆ. ಇಲ್ಲ ಇದು ಸುಳ್ಳು, ನಾನು ಭಾರತವನ್ನು ಪೂರ್ತಿ ಸುತ್ತಿದ್ದೇನೆ, ಇಂಥ ಕಾನ್ಸೆಪ್ಟ್ ಯಾವ ಅಂಗಡಿಗಳಲ್ಲಿಯೂ ಇಲ್ಲ ಎಂದು ಇನ್ನೊಬ್ಬರು. ಇಲ್ಲ ಇದೆ, ನಾನು ಇದನ್ನು ಭಾರತದಲ್ಲಿ 1962ರಿಂದ ನೋಡ್ತಾ ಬಂದಿದ್ದೇನೆ ಎಂದು ಮತ್ತೊಬ್ಬರು. ಹೀಗೆ ಒಬ್ಬರಿಗೊಬ್ಬರು ಅಂಕಿ ಸಂಖ್ಯೆಗಳನ್ನು ಏರಿಸಿಕೊಂಡು ಹೋಗಿದ್ದಾರೆ. ಅಂಕಲ್ ಮಾತ್ರ ಬಣ್ಣಬಣ್ಣದ ಅಂಗಿಗಳನ್ನು ಫ್ರೇಮಿನ ಹಿಂದೆ ಹಿಡಿದು ನಗುಮುಖದಿಂದ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sach Kadwa Hai (@sachkadwahai)

ಇಂಥ ಕೆಲವರ ಈ ತೂರಾಟ ಹಾರಾಟಕ್ಕೆ ಕೆಲವರು, ಅಯ್ಯೋ ಆ ಶರ್ಟ್​ಮುಂದೆ ಇರುವ ಗಾಜಿನ ಚೌಕಟ್ಟು ಒಡೆದೇ ಹೋಗುತ್ತದೆ ಸಾಕು ಜಗಳ ನಿಲ್ಲಿಸಿ ಎಂದು ಆವಾಝ್ ಹಾಕಿದ್ದಾರೆ. ಅದಕ್ಕೆ ಮತ್ತೊಂದಿಷ್ಟು ಜನ ಅದು ಪ್ಲಾಸ್ಟಿಕ್​ ಫ್ರೇಮ್, ಹಾಗಾಗಿ​ ಒಡೆಯಲಾರದು ಎಂದಿದ್ದಾರೆ. ಇನ್ನೂ ಕೆಲವರು ಅದು ಫೈಬರ್​ ಫ್ರೇಮ್​ ಒಡೆಯಲಾರದು ಎಂದಿದ್ದಾರೆ. ಎಲ್ಲಾ ಸುಮ್ಮನೇ ಇರ್ರಿ, ಈ ಐಡಿಯಾ ನಮ್ಮ ಅಜ್ಮೀರ್​​ದಲ್ಲಿ ಹೆಚ್ಚೂ ಕಡಿಮೆ 50 ವರ್ಷಗಳಿಂದ ಚಾಲ್ತಿಯಲ್ಲಿದೆ ಎಂದು ಈ ಕಾಲೆಳೆತಕ್ಕೆ ಪೂರ್ಣವಿರಾಮವಿಡಲು ಬಂದಿದ್ದಾರೆ.

ಇದನ್ನೂ ಓದಿ : Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ

ಅಯ್ಯೋ ದಡ್ಡರಾ, ನಮ್ಮ ಕಾನ್ಪುರದಲ್ಲಿ ಇದು 1,000 ವರ್ಷಗಳಿಂದ ಚಾಲ್ತಿಯಲ್ಲಿದೆ ಎಂದಿದ್ದಾರೆ ಮತ್ತೊಬ್ಬರು. ಕೊನೆಗೂ ಒಬ್ಬರು ವಿಷಯವನ್ನು ವಾಸ್ತವದಿಂದ ನೋಡುತ್ತ, ಇದು ಬಹಳ ಒಳ್ಳೆಯ ಉಪಾಯ, ಲೇಡೀಸ್ ಪ್ಯಾಟರ್ನ್​ ಮತ್ತು ಮಟೀರಿಯಲ್​ಗೆ ಇದು ಇನ್ನೂ ಹೆಚ್ಚು ಹೊಂದುತ್ತದೆ ಎಂದಿದ್ದಾರೆ.

ಇದನ್ನೂ ಓದಿ : Viral Video: ಇಷ್ಟೊಂದು ದುಬಾರಿ ಬಟ್ಟೆ ಹಾಕಿದ್ದೀರಾ, ಏನು ಕೆಲಸ ಮಾಡ್ತೀರಾ?

ಏನೇ ಆಗಲಿ ಆ ಅಂಕಲ್​ನ ತಾಳ್ಮೆಯನ್ನು ಮೆಚ್ಚುವಂಥದ್ದು. ನೆಟ್ಟಿಗರು ಎಷ್ಟೇ ಜಗಳಾಡಿದರೂ ಅವರು ಮಾತ್ರ ಎಡೆಬಿಡದೆ ಬಗೆಬಗೆಯ ಶರ್ಟ್​​ಗಳನ್ನು ಪ್ರದರ್ಶಿಸುತ್ತ ಹಸನ್ಮುಖಿಯಾಗಿಯೇ ಇದ್ದಾರೆ. ಇವರು ಯಾವ ಊರಿನವರು, ಇದು ಎಲ್ಲಿ ನಡೆಯುತ್ತಿದೆ ಎನ್ನುವ ವಿವರ ಮಾತ್ರ ಕೊನೆತನಕವೂ ಆ ಶರ್ಟ್​ನ ಫ್ರೇಮಿನಾಣೆಗೂ ಗೊತ್ತೇ ಆಗಿಲ್ಲ.

ಹೇಳಿ, ಈ ಅಂಕಲ್​ ನಿಮ್ಮೂರಿನವರಾ? ಮತ್ತೆ ಆ ಐಡಿಯಾ ನಿಮ್ಮೂರುಗಳಲ್ಲೂ ಚಾಲ್ತಿಯಲ್ಲಿ ಇದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:44 pm, Thu, 20 July 23