AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಜ್ಜಅಜ್ಜಿಯ ನೃತ್ಯ; ಸಂಗಾತಿ ಎಂದರೆ ನಿಮ್ಮೊಂದಿಗೆ ಪ್ರತೀ ಕ್ಷಣವೂ ಜೀವಿಸುತ್ತಿರಬೇಕು

Dance : ಸಂಬಂಧದ ಮಧ್ಯೆ ತೇವವನ್ನು ಜೀವನಪೂರ್ತಿ ಕಾಯ್ದುಕೊಂಡು ಹೋಗಲು ಪರಸ್ಪರರ ಪ್ರಯತ್ನ ಮತ್ತು ಕೊಡುಗೆ ಬೇಕು; ಇದೀಗ ವೈರಲ್ ಆಗಿರುವ ಈ ವಯೋವೃದ್ಧ ಜೋಡಿಯ ನೃತ್ಯ ನೆಟ್ಟಿಗರಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಿದೆ.

Viral Video: ಅಜ್ಜಅಜ್ಜಿಯ ನೃತ್ಯ; ಸಂಗಾತಿ ಎಂದರೆ ನಿಮ್ಮೊಂದಿಗೆ ಪ್ರತೀ ಕ್ಷಣವೂ ಜೀವಿಸುತ್ತಿರಬೇಕು
ಹಿರಿಯ ಜೋಡಿಯ ನೃತ್ಯ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 20, 2023 | 4:22 PM

Share

Old Couple : ಈ ವಿಡಿಯೋ ನೋಡಿದವರು ತಮ್ಮ ತಮ್ಮ ಸಂಗಾತಿಗಳನ್ನು ಟ್ಯಾಗ್​ ಮಾಡಿ ಹುರುಪು ತುಂಬುತ್ತಿದ್ದಾರೆ. ನಾನು 100 ವರ್ಷದ ತನಕವಾದರೂ ನನ್ನ ಹೆಂಡತಿಯೊಂದಿಗೆ ಹೀಗಿರಬೇಕು ಎಂದು ಭಾವಿಸುತ್ತಿದ್ದೇನೆ ನೋಡೋಣ ಎನ್ನುತ್ತಿದ್ದಾರೆ. ಹೌದು ಸಂಗಾತಿಯನ್ನು ಪ್ರೀತಿಸಬೇಕು, ಅದಕ್ಕಿಂತ ಮುಖ್ಯ ಗೌರವಿಸಬೇಕು. ಆಗ ಹೀಗೆ ಒಟ್ಟಾಗಿ ಆನಂದಿಸಬಹುದು ಎನ್ನುತ್ತಿದ್ದಾರೆ. ಇದು ಒಬ್ಬರಿಂದ ಸಂಭವಿಸುವಂಥದ್ದಲ್ಲ, ಪರಸ್ಪರರ ಪ್ರಯತ್ನ, ಕೊಡುಗೆ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಒಬ್ಬರು ಮಾತ್ರ ಇವರು ಎಷ್ಟು ವಯಾಗ್ರಾ (Viagra) ತೆಗೆದುಕೊಂಡಿದ್ದರು? ಎಂದು ಕೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು 7 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 8,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 1.5 ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ಇಡೀ ಸಂಪೂರ್ಣ ಬದುಕಬೇಕು, ಹಾಗೆಂದು ಆ ವ್ಯಕ್ತಿಯನ್ನು ಹುಡುಕುವುದು ನನ್ನ ಕಡೆಯಿಂದಷ್ಟೇ ಆಗಬಾರದು. ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳುವಲ್ಲಿ ಪ್ರತೀ ಹಂತದಲ್ಲಿಯೂ ಇಬ್ಬರ ಒಳಗೊಳ್ಳುವಿಕೆಯ ಇರಬೇಕು ಎಂದಿದ್ಧಾರೆ ಒಬ್ಬರು.

ಇದನ್ನೂ ಓದಿ : Viral Video: ಮೊಬೈಲ್​ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ

ನನಗೆ ಇವರ ನೃತ್ಯ ನೋಡಿ ಖಿನ್ನತೆ ಆವರಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಇದನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ. ವಯಸ್ಸಾದ ಮೇಲೆ ನನ್ನ ಗಂಡನೊಂದಿಗೆ ನಾನು ಹೀಗೇ ಖುಷಿಯಿಂದ ಇರುತ್ತೇನೆ ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಇಬ್ಬರೂ ಸೇರಿ ನರ್ತಿಸುವುದಕ್ಕಿಂತ ಮಿಗಿಲಾದ ಸಂತೋಷ ಈ ಜಗತ್ತಿನಲ್ಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿದ ಮೇಲೆ ಖುಷಿಯಿಂದ ನಗದೇ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:21 pm, Thu, 20 July 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್