ಜಗತ್ತಿನಲ್ಲೇ ಅತೀ ಹೆಚ್ಚು ಕ್ಷಯರೋಗ ಪ್ರಕರಣಗಳಿರುವ ದೇಶ ಭಾರತ: ವಿಶ್ವ ಆರೋಗ್ಯ ಸಂಸ್ಥೆ ವರದಿ
30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆ ಕಾರಣವೆಂದು ವರದಿ ಬಹಿರಂಗಪಡಿಸಿದೆ. ಇಂಡೋನೇಷ್ಯಾ (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ 3.0) ನಂತರದ ಸ್ಥಾನದಲ್ಲಿದೆ.
ದೆಹಲಿ ನವೆಂಬರ್ 09: 2022 ರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯರೋಗ (Tuberculosis -TB) ಪ್ರಕರಣಗಳನ್ನು ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಟಿಬಿ ವರದಿ 2023 ಹೇಳುತ್ತದೆ. ವಿಶ್ವದ ಒಟ್ಟು ಟಿಬಿ ಪ್ರಕರಣಗಳಲ್ಲಿ ಭಾರತದಲ್ಲಿ ಶೇಕಡಾ 27 ರಷ್ಟು ಪ್ರಕರಣಗಳಿವೆ. 28.2 ಲಕ್ಷ ಪ್ರಕರಣಗಳಿದ್ದು, ಅವುಗಳಲ್ಲಿ ಶೇ 12ರಷ್ಟು (3,42,000 ಜನರು) ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ತಿಳಿಸಿದೆ.
30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆ ಕಾರಣವೆಂದು ವರದಿ ಬಹಿರಂಗಪಡಿಸಿದೆ. ಇಂಡೋನೇಷ್ಯಾ (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ 3.0) ನಂತರದ ಸ್ಥಾನದಲ್ಲಿದೆ.
ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದೆ ಎಂದು ವರದಿ ತೋರಿಸುತ್ತದೆ. 2015 ರಲ್ಲಿ 1,00,000 ಜನರ ಪೈಕಿ 258 ರೋಗಿಗಳಿದ್ದರೆ, 2022 ರಲ್ಲಿ 1,00,000 ಜನರಿಗೆ 199 ಕ್ಕೆ ರೋಗ ಪ್ರಕರಣಗಳಿವೆ. ಆದರೆ ದರವು ಇನ್ನೂ ಜಾಗತಿಕ ಸರಾಸರಿ 100,000 ಕ್ಕೆ 133 ಕ್ಕಿಂತ ಹೆಚ್ಚಾಗಿದೆ.
ಸಾವಿನ ಅನುಪಾತ
ರೋಗವು ಎಷ್ಟು ತೀವ್ರವಾಗಿದೆ ಎಂಬುದರ ಮಾಪನಕೇಸ್ ಫರ್ಟಿಲಿಟಿ ರೇಶಿಯೋ (CFR)ಭಾರತದಲ್ಲಿ ಶೇಕಡಾ 12 ರಷ್ಟಿದೆ, ಅಂದರೆ 100 ರೋಗಿಗಳಲ್ಲಿ 12 ಜನರು ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ಈ ಅಂಕಿ ಅಂಶವು ಜಾಗತಿಕ ಸರಾಸರಿಯ ದ್ವಿಗುಣವಾಗಿದೆ, ಇದು ಶೇಕಡಾ 5.8 ರಷ್ಟಿದೆ. ಸಿಂಗಾಪುರವು ಶೇಕಡಾ 1 ರಷ್ಟು ಕಡಿಮೆ ಅಂಕಗಳನ್ನು ಹೊಂದಿದ್ದರೆ, ಚೀನಾ ಶೇಕಡಾ 4 ರೊಂದಿಗೆ 14 ನೇ ಸ್ಥಾನದಲ್ಲಿದೆ. ಟಿಬಿ ಗುಣಪಡಿಸಬಹುದಾದರೂ, ತಡವಾಗಿ ಪತ್ತೆಯಾದಾಗ ಸಾವು ಸಂಭವಿಸಬಹುದು.
ಇನ್ನಷ್ಟು ಹದಗೆಡಿಸಿದ ಕೋವಿಡ್
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಸಾವಿನ ಸಂಖ್ಯೆಯು ಹೆಚ್ಚಾಗಿದೆ ಎಂದು ವರದಿ ಅಂದಾಜಿಸಿದೆ. ಪೂರ್ವ-ಸಾಂಕ್ರಾಮಿಕ ಪ್ರವೃತ್ತಿಗಳಿಗೆ ಹೋಲಿಸಿದರೆ, 2020 ಮತ್ತು 2022 ರ ನಡುವೆ ಭಾರತದಲ್ಲಿ ಸುಮಾರು 60,000 ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 2022 ರಲ್ಲಿ 192 ದೇಶಗಳ 75 ಲಕ್ಷಕ್ಕೂ ಹೆಚ್ಚು ಜನರು ಟಿಬಿಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ, ಇದು 1995 ರಿಂದ ಪ್ರಪಂಚದಾದ್ಯಂತ WHO ರೋಗವನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ ನಂತರ ದಾಖಲಾದ ಅತ್ಯಧಿಕ ಅಂಕಿ ಅಂಶವಾಗಿದೆ.
ಇದನ್ನೂ ಓದಿ: Genital Tuberculosis: ಜನನಾಂಗದ ಕ್ಷಯರೋಗ ಪುರುಷ, ಸ್ತ್ರೀ ಬಂಜೆತಕ್ಕೆ ಕಾರಣ
ಚಿಕಿತ್ಸಾ ಸೇವೆಗಳಲ್ಲಿನ ಚೇತರಿಕೆ
ವರದಿಯು 2022 ರಲ್ಲಿ TB ರೋಗನಿರ್ಣಯ ಮತ್ತು ಚಿಕಿತ್ಸಾ ಸೇವೆಗಳಲ್ಲಿನ ಚೇತರಿಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅದೇ ವೇಳೆ ಟಿಬಿ ನಿಯಂತ್ರಣ ಪ್ರಯತ್ನಗಳ ಮೇಲೆ COVID-19 ಪ್ರಭಾವದ ಸಂಭಾವ್ಯ ಹಿಮ್ಮುಖವನ್ನು ಸೂಚಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Thu, 9 November 23