ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಚಿಕಿತ್ಸೆಗೆ ಬಳಸುವ ಸೈಕ್ಲೋಸೆರಿನ್ ಮತ್ತು ಲೈನ್ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗಿಗಳಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.
ಕ್ಷಯರೋಗ (TB) ಚಿಕಿತ್ಸೆಗಾಗಿ ಬಳಸುವ ಸೈಕ್ಲೋಸೆರೀನ್ (Cycloserine) ಮತ್ತು ಲಿನೆಜೊಲಿಡ್ (Linezolid) ಎಂಬ ಎರಡು ಔಷಧಗಳನ್ನು ಕೇಂದ್ರ ಸರ್ಕಾರ, ಕರ್ನಾಟಕಕ್ಕೆ (Karnataka) ಕಳೆದ ಎರಡು ತಿಂಗಳಿನಿಂದ ಪೂರೈಕೆ ಮಾಡಿಲ್ಲ. ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಔಷಧಿ ಕೊರತೆ ಉಂಟಾಗಿದೆ. ರಾಜ್ಯದಲ್ಲಿ 1870 ಕ್ಷಯರೋಗಿಗಳಿದ್ದು, ಇವರಿಗೆ ಔಷಧಿಗಳಾದ ಸೈಕ್ಲೋಸೆರೀನ್ ಮತ್ತು ಲಿನೆಜೊಲಿಡ ಔಷಧಿಗಳು ಅಗತ್ಯವಿದೆ. ಇನ್ನು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.
ಸದ್ಯ ಸೈಕ್ಲೋಸೆರಿನ್ ಮತ್ತು ಲೈನ್ಜೋಲಿಡ್ ಔಷಧಿಗಳ ಅಗತ್ಯವಿದೆ. ಈ ಔಷಧಿಗಳ ಕೊರತೆಯಿಂದ ನೇರ ನಿಗಾ ಚಿಕಿತ್ಸೆ (DOTS) ಮತ್ತು ನೇರ ನಿಗಾ ಚಿಕಿತ್ಸೆ ಪ್ಲಸ್ ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೈಕ್ಲೋಸೆರಿನ್ ಮತ್ತು ಲೈನ್ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗದಿಂದ ಬಳಲುತ್ತಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕ್ಲೋಸೆರಿನ್, ಲೈನ್ಜೋಲಿಡ್ ಮತ್ತು ಪ್ಯಾರಾಜೆನೆಮಡ್ ಕೊರತೆಯಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪುಣೆಯಲ್ಲಿ ಕೊವಿಡ್ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬೆನ್ನು ಮೂಳೆಯ ಕ್ಷಯರೋಗಕ್ಕೆ ಕಾರಣವಾಗುವ ಶಿಲೀಂಧ್ರ ಸೋಂಕು ಪತ್ತೆ
ಈಗಿರುವ ಸೈಕ್ಲೋಸೆರಿನ್ ಮತ್ತು ಲೈನ್ಜೋಲಿಡ್ ಔಷಧಿ ಎರಡು ವಾರಗಳವರೆಗೆ ಮಾತ್ರ ಆಗುತ್ತದೆ. ಈ ಎರಡು ಔಷಧಿಗಳು ತುಂಬಾ ದುಬಾರಿಯಾಗಿದ್ದು, ಖರೀದಿಸಲು ನಮಗೆ ಬಜೆಟ್ನ ಕೊರೆತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿಬಿ ಅಧಿಕಾರಿ ಡಾ.ಎಸ್.ನಾಗೇಶ್ ಹೇಳಿದ್ದಾರೆ.
ಈ ವರ್ಷ, ಬಿಬಿಎಂಪಿ ವ್ಯಾಪ್ತಿಯಲ್ಲಿ 14,325 ಟಿಬಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 4,050, ಮತ್ತು ಕಲಬುರಗಿ ಮತ್ತು ರಾಯಚೂರು ತಲಾ 3,900 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ