ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿದೆ ಬಂಜೆತನ; ಕಾರಣ ಇಲ್ಲಿದೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗಿದೆ. ಮಹಿಳೆಯರು ಹೆಚ್ಚು ಮಾನಸಿಕ, ಕೌಟುಂಬಿಕ ಮತ್ತು ಸಮುದಾಯದ ಒತ್ತಡವನ್ನು ಎದುರಿಸುವುದರಿಂದ ಅವರಲ್ಲಿ ಸಂತಾನೋತ್ಪತ್ತಿಯ ಕೊರತೆ ಹೆಚ್ಚು.

ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿದೆ ಬಂಜೆತನ; ಕಾರಣ ಇಲ್ಲಿದೆ
ಗರ್ಭಿಣಿ( ಸಾಂದರ್ಭಿಕ ಚಿತ್ರ)
Follow us
ಸುಷ್ಮಾ ಚಕ್ರೆ
|

Updated on: Sep 04, 2023 | 12:07 PM

ನವದೆಹಲಿ: ಇತ್ತೀಚೆಗೆ ಬಂಜೆತನವೆಂಬುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಮಹಿಳೆಯರಲ್ಲಿ ಮಾತ್ರವಲ್ಲದೆ ಪುರುಷರಲ್ಲೂ ಈ ಬಂಜೆತನ ಕಂಡುಬರುತ್ತದೆ. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಹೆಚ್ಚಿನ ಬಂಜೆತನದ ಪ್ರಮಾಣವನ್ನು ಹೊಂದಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಮದುವೆಯ ವಯಸ್ಸು ಮತ್ತು ಜೀವನಶೈಲಿಯ ಅಂಶಗಳು ಬಂಜೆತನಕ್ಕೆ ಕಾರಣವಾಗುತ್ತಿದೆ.

ಬಂಜೆತನದ ಪ್ರಮಾಣ ಹೆಚ್ಚುತ್ತಿರುವ ಇತರ ರಾಜ್ಯಗಳೆಂದರೆ ಗೋವಾ, ದೆಹಲಿ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ಎಂದು PLOS ONE ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. 1992ರಿಂದ 2016ರವರೆಗಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ 4 ಸುತ್ತಿನ ನಂತರ ಲಭ್ಯವಿರುವ ದ್ವಿತೀಯ ದತ್ತಾಂಶವನ್ನು ಆಧರಿಸಿ ‘ಬಂಜೆತನದ ಪ್ರವೃತ್ತಿಗಳು ಮತ್ತು ಭಾರತದಲ್ಲಿ ಅದರ ನಡವಳಿಕೆಯ ನಿರ್ಣಾಯಕ ಅಂಶಗಳು’ ಅಧ್ಯಯನವು ಬಂಜೆತನಕ್ಕೆ ಅನೇಕ ಕಾರಣಗಳನ್ನು ತಿಳಿಸಿದೆ. ಲೈಂಗಿಕವಾಗಿ ಹರಡುವ ರೋಗಗಳು, ಜೀವನಶೈಲಿಯ ಅಂಶಗಳು ಮತ್ತು ಆರೋಗ್ಯ ಅಭ್ಯಾಸಗಳು ಇವುಗಳಲ್ಲಿ ಪ್ರಮುಖವಾದವುಗಳಾಗಿವೆ.

ಇದನ್ನೂ ಓದಿ: ಬಂಜೆತನ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜ ಪರಿಣಾಮಕಾರಿ, ಇತರೆ ಪ್ರಯೋಜನಗಳು ಹೀಗಿವೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗಿದೆ. ಮಹಿಳೆಯರು ಹೆಚ್ಚು ಮಾನಸಿಕ, ಕೌಟುಂಬಿಕ ಮತ್ತು ಸಮುದಾಯದ ಒತ್ತಡವನ್ನು ಎದುರಿಸುವುದರಿಂದ ಅವರಲ್ಲಿ ಸಂತಾನೋತ್ಪತ್ತಿಯ ಕೊರತೆ ಹೆಚ್ಚು ಎಂದು ಅದು ಸೂಚಿಸಿದೆ. “ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಂಜೆತನದ ಪ್ರಮಾಣ ಹೆಚ್ಚಾಗಿದೆ” ಎಂದು ಮುಂಬೈನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ ಅಡಿಯಲ್ಲಿ ಸೆಂಟರ್ ಆಫ್ ಸೋಷಿಯಲ್ ಮೆಡಿಸಿನ್ ಮತ್ತು ಕಮ್ಯುನಿಟಿ ಹೆಲ್ತ್ ನಡೆಸಿದ ಅಧ್ಯಯನವು ಹೇಳಿದೆ.

ಬಂಜೆತನವನ್ನು ತಡೆಯಲು ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕಾದುದು ಅಗತ್ಯ. ಸರಿಯಾಗಿ ವ್ಯಾಯಾಮ ಮಾಡುವುದು, ಜಂಕ್​ಫುಡ್ ಅನ್ನು ಕಡಿಮೆ ಮಾಡುವುದರಿಂದ ನಮ್ಮ ದೇಹದಲ್ಲಿ ಬದಲಾವಣೆಯನ್ನು ನೋಡಬಹುದು. ಹೆಚ್ಚು ತೂಕ ಹೊಂದಿರುವ ಜನರಲ್ಲಿ ಬಂಜೆತನ, ಗರ್ಭಪಾತ, ಹೆರಿಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಧೂಮಪಾನ, ಆಲ್ಕೋಹಾಲ್ ಸೇವನೆ, ಗರ್ಭಪಾತಗಳು ಮತ್ತು ಪೂರ್ವ ಗರ್ಭನಿರೋಧಕ ಬಳಕೆಯು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಪೇಪರ್ ಕಪ್​​​​ನಲ್ಲಿ ಟೀ ಕುಡಿಯುವುದು ಬಂಜೆತನಕ್ಕೆ ಕಾರಣವಾಗಬಹುದೇ? ತಜ್ಞರು ಹೇಳುವುದೇನು?

ಭಾರತದ ಜನಗಣತಿಯ (1981, 1991, 2001) ಪ್ರಕಾರ, ಭಾರತದಲ್ಲಿ 1981ರಲ್ಲಿ ಬಂಜೆತನದ ಪ್ರಮಾಣ ಶೇ. 13ರಷ್ಟು ಇದ್ದುದು 2001ರಲ್ಲಿ ಶೇ. 16ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. 1998-99 ಮತ್ತು 2005-06ರ ನಡುವೆ ಬಂಜೆತನದ ಪ್ರಮಾಣವು ಕುಸಿದಿರುವುದನ್ನು ಗಮನಿಸಲಾಗಿದೆ. ಭಾರತದ ಮತ್ತೊಂದು ಅಧ್ಯಯನವು ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಸುಮಾರು ಶೇ. 8ರಷ್ಟು ಮಹಿಳೆಯರು ಪ್ರಾಥಮಿಕ ಮತ್ತು ಮಾಧ್ಯಮಿಕ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ಕಂಡುಹಿಡಿದಿದೆ.

ವಿಶ್ವಾದ್ಯಂತ ಸುಮಾರು ಶೇ. 8ರಿಂದ 12ರಷ್ಟು ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್‌ನ ಜನಸಂಖ್ಯಾಶಾಸ್ತ್ರಜ್ಞ ಅಲಿ, ಇತ್ತೀಚಿನ ದಶಕಗಳಲ್ಲಿ ಪ್ರಾಥಮಿಕ ಬಂಜೆತನ (ಗರ್ಭಧಾರಣೆಗೆ ಅಸಮರ್ಥತೆ) ಸಾಧಾರಣವಾಗಿ ಕಡಿಮೆಯಾಗಿದೆ. ಎಳೆಯ ವಯಸ್ಸಿನ ಮಹಿಳೆಯರಲ್ಲಿ ಪ್ರಾಥಮಿಕ ಫಲವತ್ತತೆ ಹೆಚ್ಚಾಗಿರುತ್ತದೆ. ವಯಸ್ಸಾದಂತೆ ದ್ವಿತೀಯ ಬಂಜೆತನ ಹೆಚ್ಚಾಗುತ್ತದೆ ಎಂದು ಅಧ್ಯಯನವು ಸೂಚಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ