ಎದೆಹಾಲುಣಿಸುವುದರಿಂದ ತಾಯಂದಿರಲ್ಲಿ ಖಿನ್ನತೆ ಉಂಟಾಗುತ್ತಾ?; ಇಲ್ಲಿದೆ ಮಾಹಿತಿ

ಹಾಲುಣಿಸುವ ತಾಯಂದಿರು ಸಮತೋಲಿತ ಜೀವನಶೈಲಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅನಾರೋಗ್ಯಕರ ಆಹಾರ, ಮಗುವಿನ ಒತ್ತಡ ಮತ್ತು ನಿದ್ರೆಯ ಕೊರತೆಯಂತಹ ಅಂಶಗಳು ಅವರ ಖಿನ್ನತೆಗೆ ಕಾರಣವಾಗಬಹುದು.

ಎದೆಹಾಲುಣಿಸುವುದರಿಂದ ತಾಯಂದಿರಲ್ಲಿ ಖಿನ್ನತೆ ಉಂಟಾಗುತ್ತಾ?; ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
|

Updated on: Sep 03, 2023 | 6:38 PM

ಮಗುವಿಗೆ ಆರೇಳು ತಿಂಗಳವರೆಗೆ ತಾಯಿಯ ಎದೆ ಹಾಲೊಂದೇ (Breast Milk) ಆಹಾರ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಎದೆ ಹಾಲು ಪ್ರಮುಖ ಪಾತ್ರ ವಹಿಸುವುದರಿಂದ ಇದನ್ನು ಮಕ್ಕಳ ಪಾಲಿನ ಅಮೃತವೆಂದೇ ಹೇಳಬಹುದು. ಆದರೆ, ಎದೆ ಹಾಲುಣಿಸುವ ತಾಯಿಯರಲ್ಲಿ ಕೆಲವರಲ್ಲಿ ಖಿನ್ನತೆ (Depression) ಉಂಟಾಗುತ್ತದೆ. ಈ ಖಿನ್ನತೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಸ್ತನ್ಯಪಾನ (Breastfeeding) ತಾಯಂದಿರ ಕರ್ತವ್ಯವಾದರೂ ಅದು ಕೆಲವು ಮಹಿಳೆಯರ ಮನಸಿನ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಸ್ತನ್ಯಪಾನ ಮಾಡುವಾಗ ನೀವು ಖಿನ್ನತೆಯನ್ನು ಅನುಭವಿಸುತ್ತಿದ್ದರೆ ಅಥವಾ ಅಗಾಧವಾದ ದುಃಖ ಅನುಭವಿಸುತ್ತಿದ್ದರೆ, ನೀವು D-MER ಅಥವಾ ಡೈಸ್ಫೋರಿಕ್ ಮಿಲ್ಕ್ ಎಜೆಕ್ಷನ್ ರಿಫ್ಲೆಕ್ಸ್ ಎಂದು ಕರೆಯಲ್ಪಡುವ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಈ ರೀತಿ ಸ್ತನ್ಯಪಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ಹೊಸ ತಾಯಂದಿರು ಕೆಲವೊಮ್ಮೆ ತನಗೆ ಮಗುವಿಗೆ ಸರಿಯಾಗಿ ಹಾಲುಣಿಸಲು ಸಾಧ್ಯವಾಗುತ್ತಿಲ್ಲ ಎಂಬ ಪಾಪಪ್ರಜ್ಞೆಯಿಂದ ಖಿನ್ನತೆಗೆ ಒಳಗಾಗಬಹುದು. ಇನ್ನು ಕೆಲವರು ದಿನಕ್ಕೆ 10-12 ಬಾರಿ ಹಾಲುಣಿಸಿ ಅದರಿಂದಲೇ ಖಿನ್ನತೆ ಅನುಭವಿಸಬಹುದು.

ಇದನ್ನೂ ಓದಿ: ಸ್ತನ್ಯಪಾನ, ವ್ಯಾಯಾಮ, ಎದೆಹಾಲಿನ ದಾನ: ಬಾಳಂತಿಯರು ತಿಳಿದುಕೊಳ್ಳಲೇಬೇಕಾದ ಸಂಗತಿಗಳು

ಸ್ತನ್ಯಪಾನ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಕ್ರಿಯೆ. ಆದರೆ, ಇದು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹಾಲುಣಿಸುವ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಖಿನ್ನತೆಯ ಲಕ್ಷಣಗಳನ್ನು ಪ್ರಚೋದಿಸುವ ಅಥವಾ ಉಲ್ಬಣಗೊಳಿಸುವಲ್ಲಿ ಪಾತ್ರವನ್ನು ವಹಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಹಾಲುಣಿಸುವ ತೊಂದರೆಗಳನ್ನು ಅನುಭವಿಸಿದ ಮಹಿಳೆಯರು ಪ್ರಸವಾನಂತರದ ಖಿನ್ನತೆಯ ಲಕ್ಷಣಗಳನ್ನು ಹೊಂದುವ ಸಾಧ್ಯತೆಯಿದೆ.

ಹಾಲುಣಿಸುವ ತಾಯಂದಿರು ಸಮತೋಲಿತ ಜೀವನಶೈಲಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅನಾರೋಗ್ಯಕರ ಆಹಾರ, ಮಗುವಿನ ಒತ್ತಡ ಮತ್ತು ನಿದ್ರೆಯ ಕೊರತೆಯಂತಹ ಅಂಶಗಳು ಅವರ ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ, ಹಾಲುಣಿಸುವ ಮಹಿಳೆಯರಿಗೆ ಅವರ ಗಂಡನ ಕಾಳಜಿ ಬಹಳ ಮುಖ್ಯ.

ಅನೇಕ ಮಹಿಳೆಯರು ತಮ್ಮ ಶಿಶುಗಳಿಗೆ ಹಾಲುಣಿಸಲು ಅಪಾರ ಒತ್ತಡವನ್ನು ಅನುಭವಿಸುತ್ತಾರೆ. ಹೀಗಾಗಿ, ಎದೆಹಾಲಿನ ಬದಲು ಫಾರ್ಮುಲಾ ಹಾಲನ್ನು ಕೂಡ ನೀಡುವ ಪದ್ಧತಿ ಈಗೀಗ ಹೆಚ್ಚಾಗುತ್ತಿದೆ. ಇನ್ನು ಕೆಲವು ಮಹಿಳೆಯರಿಗೆ ಎದೆ ಹಾಲುಣಿಸುವುದರಿಂದ ತಮ್ಮ ಆರೋಗ್ಯ ಹದಗೆಡುತ್ತಿದೆ ಎಂಬ ಯೋಚನೆಯೇ ಖಿನ್ನತೆಗೆ ಕಾರಣವಾಗಬಹುದು.

ಇದನ್ನೂ ಓದಿ: Breast feeding: ಮಗುವಿಗೆ ಎಷ್ಟು ಸಮಯಗಳವರೆಗೆ ಎದೆಹಾಲು ಉಣಿಸಬೇಕು? ತಾಯಿ ದೇಹದಲ್ಲಿರುವ ಗಾಯ ಮಾಯವಾಗಲು ಸ್ತನ್ಯಪಾನ ಉತ್ತಮ

ನಮ್ಮ ಜೀವನದಲ್ಲಿ ಬೇಸರವಾಗುವ ಘಟನೆಗಳು ನಡೆದಾಗ ನಮಗೆ ದುಃಖವಾಗುವುದು ಸಹಜ. ಆದರೆ ಈ ಭಾವನೆ ತುಂಬಾ ದಿನಗಳವರೆಗೆ ಇದ್ದರೆ ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡರೆ ಎಚ್ಚರ ವಹಿಸುವುದು ಅಗತ್ಯ. ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಆಲೋಚಿಸುವ, ನಾವು ತೊಡಗಿಸಿಕೊಳ್ಳುವ ರೀತಿಯು ಬದಲಾಗುತ್ತದೆ. ಖಿನ್ನತೆಯು ವೃತ್ತಿ, ಶಿಕ್ಷಣ, ಊಟ, ನಿದ್ರೆ, ಭಾವನೆಗಳು, ವರ್ತನೆ, ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು. ಖಿನ್ನತೆ ಕೂಡ ಒಂದು ರೋಗ. ಇದನ್ನು ನಮ್ಮ ಮನಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್