ಮಕ್ಕಳಲ್ಲಿ ಏಕಾಗ್ರತೆ ಕಡಿಮೆ ಮಾಡಿ ಹೈಪರ್ಆ್ಯಕ್ಟಿವ್ ಮಾಡುವ 5 ಆಹಾರಗಳಿವು
ನಿಮ್ಮ ಮಗುವಿಗೆ ಎಡಿಎಚ್‌ಡಿ ಇರುವುದು ಪತ್ತೆಯಾದರೆ ಅಥವಾ ಅವರಲ್ಲಿ ಈ ಲಕ್ಷಣಗಳು ಕಂಡುಬಂದರೆ ಈ ಆಹಾರಗಳನ್ನು ನಿಮ್ಮ ಮಕ್ಕಳಿಂದ ದೂರವಿಡಿ. ಸಂಶೋಧನೆಯ ಪ್ರಕಾರ, ಹುಡುಗಿಯರಿಗಿಂತ ಹುಡುಗರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ನಮಗೆ ಗೊತ್ತಿಲ್ಲದೆ ನಮ್ಮ ಮಕ್ಕಳು ಕೆಲವು ತೀರಾ ಗಂಭೀರವಲ್ಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ನಾವು ಆ ಬಗ್ಗೆ ಗಮನ ಹರಿಸುವುದೇ ಇಲ್ಲ. ಅಂಥದ್ದೇ ಒಂದು ಸಮಸ್ಯೆ ಎಡಿಎಚ್‌ಡಿ (ADHD). ಇದು ಏಕಾಗ್ರತೆ ಕೊರತೆಯ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ ಆಗಿದೆ. ಇದು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾನಸಿಕ ಅಸ್ವಸ್ಥತೆಯಾಗಿದೆ (Mental Disorder). ಈ ಸಮಸ್ಯೆ ಇರುವ ಮಕ್ಕಳು ಯಾವ ವಿಷಯವನ್ನೂ ಗಮನವಿಟ್ಟು ಅರ್ಥಮಾಡಿಕೊಳ್ಳುವ ಸಾಮಾರ್ಥ್ಯ ಇರುವುದಿಲ್ಲ, ಬೇರೆಯವರು ಮಾತನಾಡುವಾಗ ಕೇಳುವ ತಾಳ್ಮೆ ಇರುವುದಿಲ್ಲ, ಬೇರೆಯವರು ಏನಂದುಕೊಳ್ಳುತ್ತಾರೆ ಎಂಬ ಅರಿವಿಲ್ಲದೆ ತಮಗೆ ಸರಿ ಎನಿಸಿದ್ದನ್ನಷ್ಟೇ ಮಾಡುತ್ತಾರೆ.
ಸಂಶೋಧನೆಯ ಪ್ರಕಾರ, ಹುಡುಗಿಯರಿಗಿಂತ ಹುಡುಗರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಎಡಿಎಚ್‌ಡಿಗೆ ಕಾರಣವೇನು ಎಂಬುದರ ಬಗ್ಗೆ ತಜ್ಞರಿಗೂ ತಿಳಿದಿಲ್ಲ. ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಪತ್ತೆಹಚ್ಚಲಾಗಿದೆ. ಅವುಗಳೆಂದರೆ ಸರಿಯಾದ ಕಾಳಜಿ ವಹಿಸದಿರುವುದು, ಸೋಂಕುಗಳು, ಧೂಮಪಾನ ಅಥವಾ ಯಾವುದೇ ವಸ್ತುವಿನ ದುರ್ಬಳಕೆ.
ನಿಮ್ಮ ಮಗುವಿಗೆ ಎಡಿಎಚ್‌ಡಿ ಇರುವುದು ಪತ್ತೆಯಾದರೆ ಅಥವಾ ಅವರಲ್ಲಿ ಈ ಲಕ್ಷಣಗಳು ಕಂಡುಬಂದರೆ ಈ ಆಹಾರಗಳನ್ನು ನಿಮ್ಮ ಮಕ್ಕಳಿಂದ ದೂರವಿಡಿ.
ಇದನ್ನೂ ಓದಿ: ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ನೀಡಿ
1. ಕ್ಯಾಂಡಿಗಳು, ಜೆಲ್ಲಿ, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳು ಹೆಚ್ಚು ಸಕ್ಕರೆಯ ಆಹಾರಗಳಾಗಿವೆ. ಇದು ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿಯನ್ನು ಉಂಟುಮಾಡುತ್ತದೆ. ಇದು ಮಕ್ಕಳಲ್ಲಿ ಮಧುಮೇಹ, ಸ್ಥೂಲಕಾಯತೆ ಮತ್ತು ದಂತಕ್ಷಯದ ಅಪಾಯವನ್ನು ಹೆಚ್ಚಿಸುತ್ತದೆ.
2. ಆಲೂಗೆಡ್ಡೆ ಚಿಪ್ಸ್ ಹೆಚ್ಚುವರಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಅದು ಎಡಿಎಚ್‌ಡಿ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಮಗುವಿನ ಆಹಾರದಲ್ಲಿ ಚಿಪ್ಸ್, ಸೋಡಾಗಳ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಅದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
3. ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕರ ಆಯ್ಕೆಗಳಾಗಿದ್ದರೂ, ಕೆಲವುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ನಿಮ್ಮ ಮಗುವಿಗೆ ಫ್ರೋಜನ್ ತರಕಾರಿಗಳಿಗಿಂತ ಮನೆಯಲ್ಲಿ ಬೇಯಿಸಿದ ತರಕಾರಿಗಳನ್ನು ನೀಡುವುದು ಉತ್ತಮ.
ಇದನ್ನೂ ಓದಿ: National nutritional week:ನಿಮ್ಮ ಹದಿಹರೆಯದ ಮಕ್ಕಳ ಆಹಾರಕ್ರಮದಲ್ಲಿ ಇರಲೇಬೇಕಾದ ಪ್ರಮುಖ ಆಹಾರಗಳು
4. ಕೇಕ್ ಮಿಶ್ರಣ ಮತ್ತು ಫ್ರಾಸ್ಟಿಂಗ್ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೃತಕ ಬಣ್ಣಗಳನ್ನು ಒಳಗೊಂಡಿರುತ್ತದೆ. ಇದು ಹೈಪರ್ಆ್ಯಕ್ಟಿವಿಟಿ ಮತ್ತು ಇತರ ಎಡಿಎಚ್‌ಡಿ ರೋಗಲಕ್ಷಣಗಳಿಗೆ ಕಾರಣವಾಗಬಹುದು.
5. ಕೆಲವೊಮ್ಮೆ ಮಕ್ಕಳು ಹಾಲು, ಚಾಕೊಲೇಟ್, ಸೋಯಾ, ಗೋಧಿ, ಮೊಸರು ಮತ್ತು ವಿಶೇಷವಾಗಿ ಕೆಲವು ಡೈರಿ ಉತ್ಪನ್ನಗಳನ್ನು ಸೇವಿಸಲು ಆರಂಭಿಸಿದ ನಂತರ ಎಡಿಎಚ್‌ಡಿ ಸಮಸ್ಯೆ ಕಂಡುಬರುತ್ತದೆ. ಹೀಗಾಗಿ, ಮಕ್ಕಳಿಗೆ ನೈಸರ್ಗಿಕ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀನ್ಸ್, ಮೀನುಗಳನ್ನು ನೀಡಿ. ನಿಮಗೆ ಅನುಮಾನವಿದ್ದರೆ ಮಕ್ಕಳ ಡಯಟಿಷಿಯನ್ ಅನ್ನು ಸಂಪರ್ಕ ಮಾಡಿ ಮಾಹಿತಿ ಪಡೆಯಿರಿ.