AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನಸಿಕ ಅಸ್ವಸ್ಥತೆಯು ಹೃದಯ ಹಾಗೂ ಮನಸ್ಸನ್ನು ಹಾನಿಗೊಳಿಸಬಹುದು

ಮಾನಸಿಕ ಅಸ್ವಸ್ಥತೆ ದೇಹದ ಉಷ್ಣಾಂಶ ಹೆಚ್ಚಳ, ಅಧಿಕ ರಕ್ತದೊತ್ತಡ, ಉಸಿರಾಟ, ಹೃದಯ ಬಡಿತಕ್ಕೂ ವ್ಯಕ್ತಿಗೆ ತಿಳಿಯದಂತೆ ಸಮಸ್ಯೆಯನ್ನುಂಟು ಮಾಡುತ್ತದೆ. ಆತಂಕ, ಖಿನ್ನತೆ, ಮಾನಸಿಕವಾಗಿ ವ್ಯಕ್ತಿಯನ್ನು ಕುಗ್ಗುವಂತೆ ಮಾಡುತ್ತದೆ

ಮಾನಸಿಕ ಅಸ್ವಸ್ಥತೆಯು ಹೃದಯ ಹಾಗೂ ಮನಸ್ಸನ್ನು ಹಾನಿಗೊಳಿಸಬಹುದು
ಮಾನಸಿಕ ಅಸ್ವಸ್ಥತೆ
TV9 Web
| Updated By: ನಯನಾ ರಾಜೀವ್|

Updated on: May 06, 2022 | 3:47 PM

Share

ಮಾನಸಿಕ ಅಸ್ವಸ್ಥತೆ( Mental Illness)ಯು ಹೃದಯ (Heart)ಹಾಗೂ ಮನಸ್ಸನ್ನು ಹಾನಿಗೊಳಿಸಬಹುದು ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಯೂನಿವರ್ಸಿಟಿ ಈ ವರದಿ ನೀಡಿದ್ದು, ಮಾನಸಿಕ ಅಸ್ವಸ್ಥತೆಯು ರಕ್ತದೊತ್ತಡ ಹಾಗೂ ಹೃದಯ ಬಡಿತದಲ್ಲಿ ಬದಲಾವಣೆಯನ್ನುಂಟು ಮಾಡುತ್ತದೆ. ಬಯೋಮೆಡಿಕಲ್ ಎಂಜಿನಿಯರಿಂಗ್ ಈ ಕುರಿತು ಅಧ್ಯಯನ ಮಾಡಿದ್ದು, ಮಾನಸಿಕ ಅಸ್ವಸ್ಥತೆಯು ಕ್ರಮೇಣವಾಗಿ ರಕ್ತದೊತ್ತಡವನ್ನುಂಟು ಮಾಡುತ್ತದೆ ಇದು ಹೃದಯ ಸಂಬಂಧಿ ಕಾಯಿಲೆ ಹಾಗೂ ದೇಹದ ಇನ್ನಿತರೆ ಅಂಗಗಳ ಮೇಲೆ ದುಷ್ಪರಿಣಾಮ ಬೀರಲಿದೆ.

ದೇಹದ ಉಷ್ಣಾಂಶ ಹೆಚ್ಚಳ, ಅಧಿಕ ರಕ್ತದೊತ್ತಡ, ಉಸಿರಾಟ, ಹೃದಯ ಬಡಿತಕ್ಕೂ ವ್ಯಕ್ತಿಗೆ ತಿಳಿಯದಂತೆ ಸಮಸ್ಯೆಯನ್ನುಂಟು ಮಾಡುತ್ತದೆ. ಆತಂಕ, ಖಿನ್ನತೆ, ಮಾನಸಿಕವಾಗಿ ವ್ಯಕ್ತಿಯನ್ನು ಕುಗ್ಗುವಂತೆ ಮಾಡುತ್ತದೆ. ಮಾನಿಸಿಕ ಅಸ್ವಸ್ಥರಲ್ಲಿ ಹೃದಯ ಬಡಿತದಲ್ಲಿ ಪದೇ ಪದೇ ವ್ಯತ್ಯಾಸವಿರುತ್ತದೆ. ಒತ್ತಡದ ಪರಿಸ್ಥಿತಿ ಸ್ವಲ್ಪ ತೊಂದರೆಭರಿತವಾಗಿದ್ದರೂ, ಹಾನಿಕಾರಕವಲ್ಲ. ನಮ್ಮ ದೇಹವು ಒತ್ತಡ ಪ್ರತಿಕ್ರಿಯೆಯಾಗಿ ಅಡ್ರಿನಲಿನ್ ಎಂಬ ಹಾರ್ಮೋನನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇದರಿಂದ ನಿಮ್ಮ ಉಸಿರಾಟದ ಮತ್ತು ಹೃದಯ ಬಡಿತ ಹೆಚ್ಚಾಗಿ ನಿಮ್ಮ ರಕ್ತದೊತ್ತಡವು ಹೆಚ್ಚಾಗುತ್ತದೆ.

ದೇಹದ ಮೇಲೆ ಈ ರೀತಿಯ ನಿರಂತರ ಒತ್ತಡವಿದ್ದರೆ ಸತತವಾಗಿ ನಿಮ್ಮ ಹೃದಯ ಬಡಿತ ಮತ್ತು ಉಸಿರಾಟವನ್ನು ಹೆಚ್ಚು ಮಾಡಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಶುರುಮಾಡುತ್ತದೆ. ಇದು ದೀರ್ಘಾವಧಿಯ ಸಮಸ್ಯೆಯಾಗಿ ನಂತರ ಹೃದಯ ನಾಳಗಳನ್ನು ಹಾನಿಮಾಡುತ್ತದೆ.

ಮನೋರೋಗ ಚಿಕಿತ್ಸೆಗಳು ಶಸ್ತ್ರಚಿಕಿತ್ಸೆಯ ನಂತರದ ಒತ್ತಡದಿಂದ ಹೊರಬರಲು ಉಪಯುಕ್ತವಾಗಿದೆ. ಸಾಮಾನ್ಯವಾಗಿ ರೋಗಿಗಳು ಶಸ್ತ್ರಚಿಕಿತ್ಸೆಯ ನಂತರ ದೊಡ್ಡ ಆಘಾತಕ್ಕೆ ಒಳಗಾಗಿರುತ್ತಾರೆ. ಈ ಚಿಕೆತ್ಸೆಯಿಂದ ರೋಗಿಯಲ್ಲಿ ಆಗುವ ವ್ಯಕ್ತಿಯ ಬದಲಾವಣೆಗಳನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇಷ್ಟೇಅಲ್ಲದೆ ಈ ಚಿಕಿತ್ಸೆಯು ಹಂತ ಹಂತವಾಗಿ ಅವರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಅವರ ವರ್ತನೆಯಲ್ಲಿ ಆಗುವ ಬದಲಾವಣೆಗಳನ್ನು ಕಡಿಮೆ ಮಾಡುತ್ತದೆ.

ದೀರ್ಘಾವಧಿಯ ಮಾನಸಿಕ ಒತ್ತಡ ಒಂದೇ ಕಾರಣದಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಬರಲು ಸಾಧ್ಯವಿಲ್ಲ. ಇದುವರೆಗೂ ಅಧಿಕರಕ್ತದೊತ್ತಡ ನಿಖರ ಕಾರಣ ಕೂಡ ತಿಳಿದಿಲ್ಲ. ಆದರೆ ಇದಕ್ಕೆ ಕಾರಣವಾಗಿರುವ ಬೇರೆ ಅಂಶಗಳೆಂದರೆ ಸ್ಥೂಲಕಾಯ, ಸೋಡಿಯಂನ ಅತಿಯಾದ ಸೇವನೆ, ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಅತಿಯಾದ ಮದ್ಯ ಸೇವನೆ. ಆದರೆ ಮಾನಸಿಕ ಒತ್ತಡ ನಿಮ್ಮ ಸಮಸ್ಯೆಗಳನ್ನು ಹೆಚ್ಚು ಮಾಡಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆಗೊಳಿಸಿ ತಲೆನೋವು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಶುರುಮಾಡಬಹುದು.

ಅಧ್ಯಯನಗಳ ಪ್ರಕಾರ ಶಸ್ತ್ರಚಿಕಿತ್ಸೆಯ ನಂತರ ಮೆದುಳಿನ ಲೋಕಸ್ ಸೆರುಳುಸ್ ನಿಂದ ನೊರ್-ಎಪಿನೆಫ್ರಿನ್ ಹೆಚ್ಚು ಬಿಡುಗಡೆಗೊಳ್ಳುತ್ತದೆ ಮತ್ತು ಹಿಪೋಕ್ಯಾಂಪಸ್ ಮತ್ತು ಅಮಿಗಳಾದ ನಲ್ಲಿ ಕೂಡ ಅಧಿಕ ನೋರ್-ಆಡ್ರೆನೆರ್ಜಿಕ್ ಚಟುವಟಿಕೆ ಇರುತ್ತದೆ. ಈ ಬದಲಾವಣೆಗಳಿಂದ ಭಯವುಳ್ಳ ಕನಸುಗಳು ಬರಲು ಶುರುವಾಗುತ್ತದೆ.

ಜೀವನಶೈಲಿ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ