Heart Disease: ಹೃದಯ ರೋಗಕ್ಕೆ ಕಾರಣವಾಗುವ ಈ ನವ ಗಂಡಾಂತರಗಳ ಬಗ್ಗೆ ತಿಳಿದುಕೊಳ್ಳಿ

ಧಡೂತಿ ದೇಹ ಹೊಂದಿರುವವರಿಗೆ ಹೃದ್ರೋಗ ಖಂಡಿತವಾಗಿಯೂ ಬರುತ್ತದೆ ಎಂದು ಹೇಳಲಾಗದು. ಆದರೆ ಧಡೂತಿ ದೇಹ ಮೈಗೂಡುವುದಕ್ಕೆ ಕಾರಣವಾಗುವಂತಹ ಅನೇಕ ಅಂಶಗಳು ಹೃದ್ರೋಗಕ್ಕೂ ದಾರಿ ಮಾಡಿಕೊಡಬಹುದು. ಕೊಬ್ಬು ಮತ್ತು ಸೋಡಿಯಂ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದು, ದೈಹಿಕ ವ್ಯಾಯಾಮ ಮಾಡದಿರುವುದು, ಅಧಿಕ ರಕ್ತದೊತ್ತಡ ಉಂಟಾಗುವುದು, ಅಧಿಕ ಕೊಲೆಸ್ಟರಾಲ್‌, ಮಧುಮೇಹ ಇವೇ ಮುಂತಾದ ಧಡೂತಿ ದೇಹದ ಪೋಷಕಗಳು ಕೊನೆಗೆ ಹೃದ್ರೋಗಕ್ಕೂ ಕಾರಣವಾಗಬಲ್ಲದು ಎಂಬುದನ್ನು ಮರೆಯಬಾರದು.

Heart Disease: ಹೃದಯ ರೋಗಕ್ಕೆ ಕಾರಣವಾಗುವ ಈ ನವ ಗಂಡಾಂತರಗಳ ಬಗ್ಗೆ ತಿಳಿದುಕೊಳ್ಳಿ
ಹೃದಯ ರೋಗಕ್ಕೆ ಕಾರಣವಾಗುವ ಈ 9 ಗಂಡಾಂತರಗಳ ಬಗ್ಗೆ ತಿಳಿದುಕೊಳ್ಳಿ
Follow us
| Updated By: ಸಾಧು ಶ್ರೀನಾಥ್​

Updated on: Apr 28, 2022 | 6:06 AM

ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಜನರನ್ನು ಹೃದಯ ರೋಗ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಬಾಧಿಸತೊಡಗಿದೆ. ಅದು ಬಂದು ಹೃದಯದ ಬಾಗಿಲು ಬಡಿದಾಗ ಜೀವ ಕೈಚೆಲ್ಲುವುದು ಸಹ ಗೊತ್ತಾಗುವುದಿಲ್ಲ. ಆದರೆ ಹೃದಯ ರೋಗವನ್ನು (heart disease) ಮನಸ್ಸು ಮತ್ತು ಹೃದಯಕ್ಕೆ ಹಚ್ಚಿಕೊಂಡು ಚಿಕ್ಕ ಚಿಕ್ಕ ಹೆಜ್ಜೆ ಹಾಕುತ್ತಾ ಸಾಗಿದರೆ ಆರೋಗ್ಯವಂತ ಹೃದಯವನ್ನು (heart health) ಬಹಳ ಕಾಲ ಲಬ್ ಡಬ್​ ಅನ್ನುತ್ತಾ ಸುಸ್ಥಿತಿಯಲ್ಲಿಡಬಹುದು.

ಹೃದಯದ ಆರೋಗ್ಯದ ಬಗ್ಗೆ ಹೇಳಿದ ತಕ್ಷಣ ಓಹೋ ಅದಾ ಗೊತ್ತಿದೆ ಬಿಡೀ ಎಂದು ತಮಗೆ ತಿಳಿದಿರುವ ನಾಲ್ಕಾರು ವೈದ್ಯೋಪಚಾರಗಳನ್ನು ಹೆಸರಿಸಿ, ನಮಗೂ ಗೊತ್ತು ಬಿಡಿ ಅನ್ನುತ್ತಾರೆ ಅನೇಕ ಮಂದಿ. ಆದರೆ ಅಲ್ಲಿಂದ ಮುಂದಕ್ಕೆ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಎಳ್ಳಷ್ಟೂ ಜಾಗ್ರತೆಯನ್ನು ವಹಿಸುವುದಿಲ್ಲ. ಸರಾಸರಿಯಲ್ಲಿ ಹೇಳಬೇಕು ಅಂದರೆ ಬಹಳಷ್ಟು ಮಂದಿಗೆ ಹೃದಯವನ್ನು ಘಾಸಿಗೊಳಸಬಹುದಾದ ಯಾವುದಾದರೂ ಒಂದು ಸಮಸ್ಯೆಯಾದರೂ ಕಾಡುತ್ತಿರುರುತ್ತದೆ. ಆದರೆ ಇದಮಿತ್ಥಂ ಎಂದು ಎಲ್ಲರಿಗೂ ಒಂದೇ ತೆರನಾದ ಹೃದಯಕ್ಕೆ ಅಪಾಯಕಾರಿಯಾಗಬಹುದಾದ ಸಮಸ್ಯೆ ಇರುತ್ತದೆ ಎಂದು ಹೇಳಲಾಗದು. ಹಾಗಾಗಿ ಸದ್ಯಕ್ಕೆ ಹೃದಯ ರೋಗಕ್ಕೆ ಕಾರಣವಾಗುವ ಈ 9 ಗಂಡಾಂತರಗಳ ಬಗ್ಗೆ ತಿಳಿದುಕೊಳ್ಳೋಣಾ ಬನ್ನಿ.

  1.  ಅಧಿಕ ರಕ್ತದೊತ್ತಡ (High Blood Pressure): ಅಧಿಕ ರಕ್ತದೊತ್ತಡ ಅಂದರೆ ಹೈಪರ್​ ಟೆನ್ಶನ್​ ಅನ್ನುವುದು ನಿಜಕ್ಕೂ ಟೆನ್ಶನ್​ ತರುವ ವಿಚಾರವೇ. ಅಂದರೆ ಸಾಮಾನ್ಯವಾಗಿ ಒಬ್ಬ ಮನುಷ್ಯನ ಹೃದಯ ಬಡಿತ ವೇಗ 120/80 ಇರಬೇಕು. ಇದಕ್ಕಿಂತ ಅಧಿಕವಾಗಿ ಹೃದಯ ವೇಗವಾಗಿ ಕೆಲಸ ಮಾಡುವ ಹಂತಕ್ಕೆ ಬಂದಿದೆ ಅಂದರೆ ಹೃದಯವು ರಕ್ತವನ್ನು ಬಲವಂತವಾಗಿ/ ಒತ್ತಡ ಹಾಕಿ ದೇಹದಲ್ಲಿ ಪರಿಚಲನೆ ಮಾಡಲು ಹವಣಿಸುತ್ತಿದೆ ಅಂದರೆ ಅದರಿಂದ ನಿಜಕ್ಕೂ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ಹಾಗಂತ ಅಧಿಕ ರಕ್ತದೊತ್ತಡ ಹೃದ್ರೋಗ ಇರುವುದರ ಸೂಚಕ ಎಂದು ಪರಿಭಾವಿಸಬೇಕಿಲ್ಲ. ಆದರೆ ಅಉ ನಿಶ್ಚಿತವಾಗಿ/ ನಿಧಾನವಾಗಿ ಹೃದಯದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದರ್ಥ.
  2. ಅಧಿಕ ಕೊಲೆಸ್ಟರಾಲ್ (High Cholesterol): ಕೊಲೆಸ್ಟರಾಲ್‌ ಅಥವಾ ಕೊಬ್ಬು ಎನ್ನುವುದು ಎಲ್ಲ ಪ್ರಾಣಿಗಳ ಜೀವಕೋಶಗಳ ಪದರುಗಳಲ್ಲಿರುವ ಜೀವರಾಸಾಯನಿಕ ಕ್ರಿಯೆಯಿಂದ ಉತ್ಪನ್ನವಾದ ಮೇಣದಂತಹ ಜೈವಿಕವಸ್ತುವಾಗಿದ್ದು, ಇದು ರಕ್ತದೊಳಗಿನ ಜೀವದ್ರವ್ಯದಲ್ಲಿ ಸಾಗಿಸಲ್ಪಡುತ್ತದೆ. ಅಧಿಕ ಕೊಲೆಸ್ಟರಾಲ್‌ ಪ್ರಮಾಣವು ಹೆಚ್ಚು ಕೇಂದ್ರಿಕೃತ LDL ಮತ್ತು ಕಡಿಮೆ ಕೇಂದ್ರಿಕೃತ ಕ್ರಿಯಾತ್ಮಕ HDL ಗಳು ಹೃದಯ ರೋಗಕ್ಕೆ ಸಂಬಂಧಿಸಿರುತ್ತವೆ. ಏಕೆಂದರೆ ಇವು ಧಮನಿಗಳ ಒಳ ಪದರುಗಳಲ್ಲಿ ಕೊಬ್ಬಿನ ಅಂಶ ಬೆಳೆಯುವುದನ್ನು ಉತ್ತೇಜಿಸುತ್ತದೆ (ಅಥೆರೋಸ್‌ಕ್ಲೀರೋಸಿಸ್). ಈ ರೋಗವು ಹೃದಯಾಘಾತ, ಆಘಾತ, ಹೃದಯನಾಳದ ಹೊರವಲಯದ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಕಡಿಮೆ ಕೊಲೆಸ್ಟರಾಲ್ ಪ್ರಮಾಣವು ಯಾವುದೋ ಒಂದು ಅನಾರೋಗ್ಯದ ಕಾರಣಕ್ಕಾಗಿ ಉಂಟಾಗುತ್ತದೆ. ದೇಹದಲ್ಲಿ ಕೊಲೆಸ್ಟರಾಲ್‌ ಅಸಹಜವಾಗಿ ಕಡಿಮೆ ಪ್ರಮಾಣದಲ್ಲಿ ಇರುವುದನ್ನು ಹೈಪೋಕೊಲೆಸ್ಟರಾಲೇಮಿಯಾ ಎನ್ನುತ್ತಾರೆ. ಕೆಲವು ಅಧ್ಯಯನಗಳ ಪ್ರಕಾರ ಇದಕ್ಕೂ ಖಿನ್ನತೆ, ಕ್ಯಾನ್ಸರ್, ಮತ್ತು ಮೆದುಳಿನ ರಕ್ತಸ್ರಾವಕ್ಕೂ ಸಂಬಂಧವಿದೆ.
  3. ಲಿಂಗ (Gender): ಹೃದ್ರೋಗವು ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರಷರನ್ನೇ ಹೆಚ್ಚಾಗಿ ಬಾಧಿಸುತ್ತದೆ ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ನಿಜವಲ್ಲ. ಪುರುಷರಿಗೆ ಹೃದ್ರೋಗ ಸ್ವಲ್ಪ ಬೇಗನೇ ತಾಕಬಹುದು, ಮಹಿಳೆಯರಲ್ಲಿ ಸ್ವಲ್ಪ ತಡವಾಗಿ ಹೃದ್ರೋಗ ಕಾಣಿಸಿಕೊಳ್ಳಬಹುದು ಅಷ್ಟೆ. ಅದು ಬಿಟ್ಟು ಖಡಾಖಂಡಿತವಾಗಿ ಹೃದ್ರೋಗ ಎಂಬುದು ಪುರುಷರಿಗಷ್ಟೇ ಸೀಮಿತ ಅಲ್ಲ ಎನ್ನಲಾಗದು.
  4. ಧಡೂತಿ ದೇಹದವರಿಗೆ (Being Overweight): ಇನ್ನು ಧಡೂತಿ ದೇಹ ಹೊಂದಿರುವವರಿಗೆ ಹೃದ್ರೋಗ ಖಂಡಿತವಾಗಿಯೂ ಬರುತ್ತದೆ ಎಂದು ಹೇಳಲಾಗದು. ಆದರೆ ಧಡೂತಿ ದೇಹ ಮೈಗೂಡುವುದಕ್ಕೆ ಕಾರಣವಾಗುವಂತಹ ಅನೇಕ ಅಂಶಗಳು ಹೃದ್ರೋಗಕ್ಕೂ ದಾರಿ ಮಾಡಿಕೊಡಬಹುದು. ಕೊಬ್ಬು ಮತ್ತು ಸೋಡಿಯಂ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದು, ದೈಹಿಕ ವ್ಯಾಯಾಮ ಮಾಡದಿರುವುದು, ಅಧಿಕ ರಕ್ತದೊತ್ತಡ ಉಂಟಾಗುವುದು, ಅಧಿಕ ಕೊಲೆಸ್ಟರಾಲ್‌, ಮಧುಮೇಹ ಇವೇ ಮುಂತಾದ ಧಡೂತಿ ದೇಹದ ಪೋಷಕಗಳು ಕೊನೆಗೆ ಹೃದ್ರೋಗಕ್ಕೂ ಕಾರಣವಾಗಬಲ್ಲದು ಎಂಬುದನ್ನು ಮರೆಯಬಾರದು.
  5. ವಯಸ್ಸು (Age): ವಯೋಸಹಜ ಪ್ರಕ್ರಿಯೆಯಲ್ಲಿ ರಕ್ತ ನಾಳಗಳು ಕುಂದುತ್ತಾ ಸಾಗುತ್ತವೆ. ಇದರಿಂದ ಸರಾಗವಾಗಿ ರಕ್ತ ಪರಿಚಲನೆ ಆಗುವುದಕ್ಕೆ ತೊಡಕಾಗುತ್ತದೆ. ರಕ್ತ ನಾಳಗಳ ಮೇಲೆ ಕೊಬ್ಬು ಶೇಖರಣೆಯಾಗುವುದು, ಅದೊಂದು ಪದರವಾಗಿ ಸ್ಥಿರಗೊಳ್ಳುವುದು ವಯಸ್ಸಾದಂತೆಲ್ಲಾ ಜಾಸ್ತಿಯಾಗುತ್ತದೆ.
  6. ಧೂಮಪಾನ (Smoking): ಧೂಮಪಾನವು ನೇರವಾಗಿ ರಕ್ತನಾಳದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಸಿಗರೇಟ್​ನಲ್ಲಿರುವ ರಾಸಾಯನಿಕಗಳು ಅಪಧಮನಿಗಳ ಮೇಲೆ ಘನೀಕೃತವಾಗಿ ರಕ್ತವನ್ನೂ ಘನೀಕೃತಗೊಳಿಸುತ್ತದೆ. ಅದು ರಕ್ತದ ಸರಾಗ ಸಂಚಾರಕ್ಕೆ ತಡೆಯುತ್ತದೆ. ಅದು ಪಾರ್ಶ್ವವಾಯುವಿಗೂ ಕಾರಣವಾಗಬಲ್ಲದು.
  7. ಮಧುಮೇಹ (Having Diabetes): ಮಧುಮೇಹ ಅಧಿಕವಾಗುತ್ತಾ ಸಾಗಿದಂತೆ ಅದು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೃದಯದ ಕಾರ್ಯನಿರ್ವಹಣೆಗೆ ಸಹಾಯಕವಾಗುವ ರಕ್ತ ನಾಳಗಳು ಮತ್ತು ನರಗಳನ್ನು ಅಧಿಕ ಮಧುಮೇಹ ಕ್ಷಿಪ್ರವಾಗಿ ಹಾಳುಮಾಡುತ್ತಾ ಸಾಗುತ್ತದೆ.
  8. ಕುಳಿತುಕೊಂಡು ಕೆಲಸ ಮಾಡುವ ಆಧುನಿಕ ಜೀವನಶೈಲಿ (Sedentary Lifestyle): ಅನೇಕ ಮಂದಿ ದಿನದಲ್ಲಿ ಬಹಳ ಕಾಲ ಒಂದೇ ಕಡೆ ಕುಳಿತು ಉದ್ಯೋಗ ಮಾಡುತ್ತಾರೆ. ಎಲ್ಲಿಯೆ ಕುಳಿತುಕೊಳ್ಳಲಿ ದೀರ್ಘಕಾಲ ಒಂದೆ ಕಡೆ ಕುಳಿತುಕೊಳ್ಳುವುದು ಹೃದಯದ ಆರೋಗ್ಯಕ್ಕೆ ಬಾಧೆ ಕಲ್ಪಿಸಿದಂತಾಗುತ್ತದೆ. ಹೆಚ್ಚು ಹೆಚ್ಚು ಕಾಲ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಹೃದ್ರೋಗಕ್ಕೆ ದಾರಿ ಮಾಡಿಕೊಟ್ಟಂತೆ. ಅಂದರೆ ದೈಹಿಕವಾಗಿ ನಿಷ್ಕ್ರಿಯವಾಗಿದ್ದು, ಮೂಟೆ ಹಾಗೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಕಾಣಿಸುತ್ತವೆ.
  9. ಕೌಟುಂಬಿಕ ಹಿನ್ನೆಲೆ (Family History): ಕೌಟುಂಬಿಕ ಹಿನ್ನೆಲೆ ಅಂದರೆ ಪರಂಪರಾಗತವಾಗಿ ನಿಮ್ಮ ಹತ್ತಿರದ ಸಂಬಂಧಿಗಳು ಅಂದರೆ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಸೋದರ-ಸೋದರಿಯರು ಹೀಗೆ ಹತ್ತಿರದವರಿಗೆ ಯಾರಿಗಾದರೂ ಹೃದ್ರೋಗ ಇದೆಯೆಂತಾದರೆ ಅದು ವಂಶಪಾರಂಪರ್ಯವಾಗಿ ಮುಂದಿನ ಪೀಳಿಗೆಯವರಿಗೆ ಬಳುವಳಿಯಾಗಿ ಬರುವುದು ಬಹುತೇಕ ಖಚಿತ. ಇನ್ನು ಹಿರಿಯರಲ್ಲಿ ಹೃದ್ರೋಗ ಇತ್ತೆಂದು ಇತರರಿಗೂ ಹೃದಯ ಕಾಯಿಲೆ ಬರುತ್ತದೆ ಎಂದಿಲ್ಲ. ಅಥವಾ ಮನೆ ಮಂದಿಗೆ ಯಾರಿಗೂ ಹೃದಯ ರೋಗ ಇಲ್ಲವೆಂದು ನಿಮಗೆ ಹೃದ್ರೋಗ ಬರುತ್ತದೆ ಎಂದಲ್ಲ. ಹಾಗಾಗಿ ನಿಮ್ಮ ಹೃದಯ ನಿಮ್ಮ ಜೋಪಾನ, ಆರೈಕೆ ಅಷ್ಟೆ. (ಬರಹ -ವಾಟ್ಸ್ ಅಪ್​ ಸಂದೇಶ)

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ