AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19: ಕೊವಿಡ್ ಸೋಂಕಿತರಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ? ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

Covid 19 Side effects: ಅಮೇರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರ ಅಧ್ಯಯನದಲ್ಲಿ, ಕೊರೊನಾ ಸೋಂಕಿನಿಂದ ಉಂಟಾಗುವ ಅಡ್ಡಪರಿಣಾಮಗಳಿಗೆ ಯಾವುದೇ ವ್ಯಕ್ತಿ ವಿನಾಯಿತಿ ಹೊಂದಿಲ್ಲ ಎಂಬುದು ಬಹಿರಂಗವಾಗಿದೆ. ಅಧ್ಯಯನದಲ್ಲಿ ಲಭ್ಯವಾದ ಮಾಹಿತಿಗಳನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

Covid 19: ಕೊವಿಡ್ ಸೋಂಕಿತರಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ? ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ
ಚೀನಾದ ಶಾಂಘೈನ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೊವಿಡ್​ ಸೋಂಕಿತರು ವಿಶ್ರಾಂತಿ ಪಡೆಯುತ್ತಿರುವುದು
TV9 Web
| Edited By: |

Updated on:Apr 28, 2022 | 8:24 AM

Share

ಕೊವಿಡ್ 19 (Covid 19) ಸೋಂಕಿಗೆ ಈಗ ಲಸಿಕೆ ಬಂದಿದೆ. ಜನರು ಮೊದಲಿಗಿಂತ ನಿರಾಳರಾಗಿರಬಹುದು. ಆದರೆ ಇತ್ತೀಚೆಗೆ ಸಂಶೋಧನೆಯೊಂದರಲ್ಲಿ ಹೊರಬಿದ್ದಿರುವ ಮಾಹಿತಿ ಆತಂಕ ಸೃಷ್ಟಿಸುವಂತಿದೆ. ಅದರಲ್ಲಿ ಕೊರೊನಾ ಸೋಂಕು ತಗುಲಿದ ವ್ಯಕ್ತಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತದೆಯೇ ಎಂದು ಅಧ್ಯಯನ ಮಾಡಲಾಗಿತ್ತು. ಇದೀಗ ಸಂಶೋಧನೆಯಿಂದ ಸಿಕ್ಕಿದ ಮಾಹಿತಿ ಬಹಿರಂಗವಾಗಿದೆ. ಅದರಂತೆ, ಸೌಮ್ಯವಾದ ಕೊರೊನಾ ಸೋಂಕು ಕಾಣಿಸಿಕೊಂಡರೂ ಸಹ ಭವಿಷ್ಯದಲ್ಲಿ ಅದು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಮೇರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದು, ಕೊರೊನಾ ಸೋಂಕಿನಿಂದ ಉಂಟಾಗುವ ಅಡ್ಡಪರಿಣಾಮಗಳಿಗೆ ಯಾವುದೇ ವ್ಯಕ್ತಿ ವಿನಾಯಿತಿ ಹೊಂದಿಲ್ಲ ಎಂದಿದ್ದಾರೆ. ಅಧ್ಯಯನದಲ್ಲಿ ಲಭ್ಯವಾದ ಮಾಹಿತಿಗಳನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವಿಟರ್ ಮೂಲಕ ಸೋಮವಾರದಂದು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಅಧ್ಯಯನ ಪ್ರಕಟವಾಗಿದ್ದು ಅದರಲ್ಲಿ, ಕೋವಿಡ್​ನಿಂದ ಬಳಲುತ್ತಿರುವ ಜನರಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಒಂದು ವರ್ಷದ ನಂತರವೂ ಹೃದಯಕ್ಕೆ ಸಂಬಂಧಿಸಿದ ಉರಿಯೂತ, ಹೆಪ್ಪುಗಟ್ಟುವಿಕೆ, ಅನಿಯಮಿತ ಹೃದಯ ಬಡಿತವನ್ನು ಒಳಗೊಂಡಿರುವ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಕ್ಲಿನಿಕಲ್ ಎಪಿಡೆಮಿಯಾಲಜಿ ಸೆಂಟರ್‌ನ ನಿರ್ದೇಶಕರಾದ ಡಾ ಜಿಯಾದ್ ಅಲ್-ಅಲಿ ಈ ಸಂಶೋಧನೆಯನ್ನು ನಡೆಸಿದ್ದು, ಸೌಮ್ಯವಾದ ಕೊವಿಡ್ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗದ ಜನರಲ್ಲಿಯೂ ಸಹ ಹೃದಯ ಸಮಸ್ಯೆಗಳ ಅಪಾಯವು ಸಂಶೋಧನೆಗಳಲ್ಲಿ ಕಂಡುಬಂದಿದ್ದು, ಇದು ಆಶ್ಚರ್ಯ ಉಂಟುಮಾಡಿದೆ ಎಂದಿದ್ದಾರೆ.

‘‘ಹೃದಯ ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು, ಮಧುಮೇಹಿಗಳು, ಧೂಮಪಾನಿಗಳು ಮತ್ತು ಇತರ ಕೆಲವು ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರಿಗೆ ಕೊವಿಡ್ ಸೋಂಕಿನಿಂದ ಅಪಾಯಗಳು ಹೆಚ್ಚು ಎಂದು ಸಂಶೋಧಕರು ನಿರೀಕ್ಷಿಸಿದ್ದರು. ಆದರೆ ಯಾವುದೇ ಹೃದಯ ಸಮಸ್ಯೆಗಳಿಲ್ಲದ ಜನರು, ಅಥ್ಲೆಟಿಕ್ ಜೀವನಶೈಲಿ ಇರುವವರು, ಹೆಚ್ಚಿನ BMI ಹೊಂದಿರದ, ಬೊಜ್ಜು ಇಲ್ಲದ, ಧೂಮಪಾನಿಗಳಲ್ಲದ ಮತ್ತು ಮೂತ್ರಪಿಂಡ ಕಾಯಿಲೆ ಸೇರಿದಂತೆ ಯಾವುದೇ ಕಾಯಿಲೆಯಿಂದ ಬಳಲುತ್ತಿರದ ಜನರಲ್ಲೂ ಸೋಂಕು ಪರಿಣಾಮ ಬೀರುತ್ತದೆ’’ ಎಂದಿದ್ದಾರೆ ಸಂಶೋಧಕರು.

ಕೊವಿಡ್ ಸೋಂಕು ತಗುಲದವರನ್ನು ಹೋಲಿಸಿದಾಗ ಕೋವಿಡ್​ಗೆ ತುತ್ತಾದವರಲ್ಲಿ ಈ ಲಕ್ಷಣಗಳು ಕಂಡುಬಂದಿವೆ ಎಂದು ಸಂಶೋಧನೆ ಹೇಳಿದೆ. ‘‘ಪಾರ್ಶ್ವವಾಯು, ಕಾಲುಗಳು ಮತ್ತು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ’’ದ ಸಾಧ್ಯತೆಗಳು ಕೊರೊನಾ ಸೋಂಕಿಗೆ ತುತ್ತಾದರೆ ಹೆಚ್ಚು ಎಂದು ಅಧ್ಯಯದನಲ್ಲಿ ಬಹಿರಂಗವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಧ್ಯಯನದ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವೀಟ್:

11 ಮಿಲಿಯನ್ (1.1 ಕೋಟಿ) ಜನರನ್ನು ಪರೀಕ್ಷಿಸಿ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ 10 ಪ್ರತಿಶತ ಮಹಿಳೆಯರನ್ನು ಪರೀಕ್ಷಿಸಲಾಗಿತ್ತು. ಕೊವಿಡ್ ಸೋಂಕಿನಿಂದ ಉಂಟಾಗುವ ಅಡ್ಡಪರಿಣಾಮಗಳು ಯಾರನ್ನೂ ಬಿಟ್ಟಿಲ್ಲ ಎಂದು ಡಾ.ಅಲ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಲಸಿಕೆಯ 2ನೇ ಡೋಸ್- ಬೂಸ್ಟರ್ ಡೋಸ್​ ನಡುವಿನ ಅಂತರ 6 ತಿಂಗಳಿಗೆ ತಗ್ಗುವ ಸಾಧ್ಯತೆ

ಸಿಎಂಗಳ ಜೊತೆ ನರೇಂದ್ರ ಮೋದಿ ಸಭೆ; ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಬೊಮ್ಮಾಯಿ

Published On - 8:21 am, Thu, 28 April 22

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!