AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್

ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್

ಮಂಜುನಾಥ ಸಿ.
|

Updated on: May 31, 2025 | 9:46 PM

Share

Kamal Haasan: ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಚಿತ್ರರಂಗದ ಬಹುತೇಕರು ಖಂಡಿಸಿದ್ದಾರೆ. ಇದೀಗ ನಟ ಕಿಶೋರ್ ಮಾತನಾಡಿ, ಕಮಲ್ ಅವರ ಹೇಳಿಕೆಯನ್ನು ಇಷ್ಟು ಭಾವುಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವರು ವಿಚಾರವಂತರು ಏನೋ ಹೇಳಿದ್ದಾರೆ, ಅದು ಸರಿಯೋ ತಪ್ಪೊ ಪ್ರಶ್ನೆ ಕೇಳಿ ಉತ್ತರ ಪಡೆಯುವ ಹಕ್ಕು ನಮಗೆ ಇದೆ. ಅವರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಏನೂ ಆಗಿಬಿಡುವುದಿಲ್ಲ.

ಕನ್ನಡ ಭಾಷೆಯ ಉಗಮದ ಬಗ್ಗೆ ಕಮಲ್ ಹಾಸನ್ (Kamal Haasan) ನೀಡಿರುವ ಹೇಳಿಕೆಯನ್ನು ಚಿತ್ರರಂಗದ ಬಹುತೇಕರು ಖಂಡಿಸಿದ್ದಾರೆ. ಇದೀಗ ನಟ ಕಿಶೋರ್ ಮಾತನಾಡಿ, ಕಮಲ್ ಅವರ ಹೇಳಿಕೆಯನ್ನು ಇಷ್ಟು ಭಾವುಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವರು ವಿಚಾರವಂತರು ಏನೋ ಹೇಳಿದ್ದಾರೆ, ಅದು ಸರಿಯೋ ತಪ್ಪೊ ಪ್ರಶ್ನೆ ಕೇಳಿ ಉತ್ತರ ಪಡೆಯುವ ಹಕ್ಕು ನಮಗೆ ಇದೆ. ಅವರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಏನೂ ಆಗಿಬಿಡುವುದಿಲ್ಲ. ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ವಿಷಯವನ್ನು ಸಮಾಧಾನವಾಗಿ ಸ್ವೀಕರಿಸಬೇಕಿದೆ, ಜನರನ್ನು ರೊಚ್ಚಿಗೇಳಿಸದಂತೆ ವಿಷಯವನ್ನು ಹ್ಯಾಂಡಲ್ ಮಾಡುವುದು ಸೂಕ್ತ. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಎಂದ ಮಾತ್ರಕ್ಕೆ ಅದರಲ್ಲಿ ಅವಮಾನ ಆಗುವಂಥಹದ್ದು ಏನಿದೆ?’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ. ಸಂಪೂರ್ಣ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ