ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಹೊರ ರಾಜ್ಯದ ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ಸ್ಕೂಟರ್ ಮತ್ತು ಆಟೋ ಟಚ್ ವಿಚಾರವಾಗಿ ವಾಗ್ವಾದ ಏರ್ಪಟ್ಟು, ಯುವತಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು, ಮೇ 31: ಹೊರ ರಾಜ್ಯದ ಯುವತಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ನಡೆದಿದೆ. ಸ್ಕೂಟಿಗೆ ಆಟೋ ಟಚ್ ಆಗುತ್ತೆಂದು ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಯುವತಿ ಚೆಪ್ಪಲಿಯಿಂದ ಹೊಡೆಯುವ ವಿಡಿಯೋ ಆಟೋ ಚಾಲಕನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಸದ್ಯ ಆಟೋ ಚಾಲಕ ಮತ್ತು ಯುವತಿ ಠಾಣೆಗೆ ತೆರಳಿದ್ದಾರೆ.
Latest Videos
