ಗುತ್ತಿಗೆದಾರನ ಸೈಟ್ ಬಳಿ ಕರೆಸಿ, ಕೊಂದು, ಒಡವೆಗಳನ್ನು ದೋಚಿ ಬಿಹಾರ ಮೂಲದ ಕಾರ್ಮಿಕರಿಬ್ಬರು ಪರಾರಿ
ಹಂತಕರಿಬ್ಬರು ಬಿಹಾರ ಮೂಲದವರು ಅಂತ ಗೊತ್ತಾಗಿದೆ. ಅಸಲಿಗೆ ಅವರಲ್ಲೊಬ್ಬ ರಾತ್ರಿ ವಿಜಯ್ಗೆ ಫೋನ್ ಮಾಡಿ ಮತ್ತೊಬ್ಬನಿಗೆ ಹುಷಾರಿಲ್ಲ ವಿಚಿತ್ರವಾಗಿ ಆಡುತ್ತಿದ್ದಾನೆ ಅಂತ ಹೇಳಿ ಕರೆಸಿಕೊಂಡಿದ್ದಾನೆ. ಅವರು ಅಲ್ಲಿಗೆ ಬಂದಾಗ ಹಿಂದಿನಿಂದ ದಾಳಿ ನಡೆಸಿ ಕೊಂದಿದ್ದಾರೆ. ಬೆರಳಲ್ಲಿದ್ದ ಉಂಗುರ ತೆಗೆಯಲು ಬಾರದೆ ಹೋದಾಗ ಬೆರಳನ್ನೇ ಕತ್ತರಿಸಿದ್ದಾರೆ! ವಿಜಯ್ ಅವರ ವಾಹನ ಬಸ್ ನಿಲ್ದಾಣದ ಬಳಿ ಸಿಕ್ಕಿದೆ.
ಹಾಸನ, ಮೇ 31: ಯಾರನ್ನೂ ನಂಬುವಂತಿಲ್ಲ, ಅದರಲ್ಲೂ ಅಪರಚಿತರನ್ನು ನಂಬಲೇಬಾರದು ಎನ್ನುವ ಕಾಲವಿದು. ನಿನ್ನೆ ರಾತ್ರಿ ಹಾಸನದಲ್ಲಿ ಅಗಿರುವ ಘಟನೆಯನ್ನು ಗಮನಿಸಿ. ಕಟ್ಟಡ ನಿರ್ಮಾಣದ ಕಾರ್ಮಿಕರಿಬ್ಬರು ತಮಗೆ ಕೆಲಸ ನೀಡಿ ಇರಲು ಆಶ್ರಯ ಒದಗಿಸಿದ್ದ ವಿಜಯ್ ಹೆಸರಿನ ಗುತ್ತಿಗೆದಾರರೊಬ್ಬರನ್ನು ನಿರ್ದಯತೆಯಿಂದ ಕೊಂದು ಅವರ ಮೈಮೇಲಿದ್ದ ಚಿನ್ನದ ಸರ ಹಾಗೂ ಎರಡು ಉಂಗುರಗಳಲ್ಲದೆ, ಹಣ, ಮೊಬೈಲ್ ಫೋನನ್ನು ದೋಚಿ ಗುತ್ತಿಗೆದಾರನ ದ್ವಿಚಕ್ರವಾಹನದಲ್ಲೇ (contractor’s two-wheeler) ಪರಾರಿಯಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಿದ್ದ ವ್ಯಕ್ತಿ ಫೋನ್ ಮಾಡಿದಾಗಲೇ ವಿಜಯ್ ಪತ್ನಿ ಹೇಮಾವತಿ, ಇವರ ಸಹೋದರ ವಿನಯ್ ಗೆ ವಿಷಯ ಗೊತ್ತಾಗಿದೆ. ವಿನಯ್ ನಮ್ಮ ವರದಿಗಾರನೊಂದಿಗೆ ಮಾತಾಡಿದ್ದಾರೆ.
ಇದನ್ನೂ ಓದಿ: ಅಂಕಿತಾ ಭಂಡಾರಿ ಕೊಲೆ ಪ್ರಕರಣ; ಹೃಷಿಕೇಶದ ರೆಸಾರ್ಟ್ ಮಾಲೀಕ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ