ಅಂಕಿತಾ ಭಂಡಾರಿ ಕೊಲೆ ಪ್ರಕರಣ; ಹೃಷಿಕೇಶದ ರೆಸಾರ್ಟ್ ಮಾಲೀಕ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ಉತ್ತರಾಖಂಡದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಉತ್ತರಾಖಂಡದ ಕೋಟ್ವಾರ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಂಕಿತಾ ಪೌರಿ ಜಿಲ್ಲೆಯ ನಿವಾಸಿಯಾಗಿದ್ದು, ಹೃಷಿಕೇಶದ ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅತಿಥಿಗಳಿಗೆ ಹೆಚ್ಚುವರಿ ಸೇವೆ ನೀಡಲು ನಿರಾಕರಿಸಿದಾಗ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಸಹಚರರು ಆಕೆಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಡೆಹ್ರಾಡೂನ್, ಮೇ 30: ಸೆಪ್ಟೆಂಬರ್ 2022ರಿಂದ ದೇಶದ ಗಮನ ಸೆಳೆದಿರುವ ಹೈಪ್ರೊಫೈಲ್ ಅಂಕಿತಾ ಭಂಡಾರಿ (Ankita Bhandari) ಕೊಲೆ ಪ್ರಕರಣದಲ್ಲಿ ಕೋಟ್‌ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು (ಮೇ 30) ತನ್ನ ತೀರ್ಪು ಪ್ರಕಟಿಸಿದೆ. 2022ರಲ್ಲಿ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಅವರ ಕೊಲೆಗೆ ಸಂಬಂಧಿಸಿದಂತೆ ಉತ್ತರಾಖಂಡದ ರೆಸಾರ್ಟ್ ಮಾಲೀಕ, ಇಬ್ಬರು ಉದ್ಯೋಗಿಗಳು ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ.
ಇಂದು ಕೋಟ್‌ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದರು. ಇದಲ್ಲದೆ, ಮೃತ ಯುವತಿ ಅಂಕಿತಾ ಭಂಡಾರಿ ಅವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೂವರಿಗೆ ನ್ಯಾಯಾಲಯ ಆದೇಶಿಸಿದೆ.
2022 Ankita Bhandari murder case: The ADJ court of Kotdwar has sentenced all three accused in the Ankita Bhandari murder case to life imprisonment after being convicted. The court has sentenced the three accused, Pulkit Arya, Saurabh Bhaskar and Ankit Gupta, to life imprisonment…
— ANI (@ANI) May 30, 2025
ಅಂಕಿತಾ ಅವರ ವಕೀಲ ಅಜಯ್ ಪಂತ್ ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದು, “ಅಂಕಿತಾಳ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ತಪ್ಪಿತಸ್ಥರೆಂದು ಉತ್ತರಾಖಂಡದ ಕೋಟ್ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್ನ ರೆಸಾರ್ಟ್‌ನಲ್ಲಿ ಯುವತಿಯ ಹತ್ಯೆ ಪ್ರಕರಣ: ಬಿಜೆಪಿ ನಾಯಕನ ಪುತ್ರ ಬಂಧನ
ಈ ಕೊಲೆಗೆ ಸಂಬಂಧಿಸಿದ ವಿಷಯಗಳು ಬಿಜೆಪಿ ನಾಯಕ ಮತ್ತು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಅವರ ಪುತ್ರನೊಂದಿಗೆ ಸಂಬಂಧ ಹೊಂದಿವೆ ಎಂದು ಈ ಹಿಂದೆ ಆರೋಪಿಸಲಾಗಿತ್ತು.
2022 Ankita Bhandari murder case: Three accused, Pulkit Arya, Saurabh Bhaskar, and Ankit Gupta, have been found guilty of Ankita’s murder in the Additional District and Sessions Judge Court, Kotdwar, Uttarakhand. The sentence against the three accused is yet to be announced:…
— ANI (@ANI) May 30, 2025
ಅಂಕಿತಾ ಭಂಡಾರಿ ಯಾರು?:
ಪೌರಿ ಜಿಲ್ಲೆಯ ನಿವಾಸಿ ಅಂಕಿತಾ ಭಂಡಾರಿ ಹೃಷಿಕೇಶದ ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ವಿಐಪಿ ಅತಿಥಿಗೆ ಹೆಚ್ಚುವರಿ ಸೇವೆಗಳನ್ನು ನೀಡುವಂತೆ ಒತ್ತಡ ಹೇರಿದಾಗ ಅದಕ್ಕೆ ವಿರೋಧಿಸಿದ ಅಂಕಿತಾ ಅವರನ್ನು ಬ್ಯಾರೇಜ್‌ಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ, ಹೊಸಬರ ನೇಮಕ
ಅಂಕಿತಾ ಅವರನ್ನು ಪುಲ್ಕಿತ್ ಆರ್ಯ ಮತ್ತು ಅವರ ಸ್ನೇಹಿತರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಸೆಪ್ಟೆಂಬರ್ 18, 2022ರಂದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಂಕಿತಾ ಭಂಡಾರಿಯ ಶವವನ್ನು ಸೆಪ್ಟೆಂಬರ್ 24ರಂದು ಋಷಿಕೇಶದ ಚಿಲ್ಲಾ ಕಾಲುವೆಯಿಂದ ಹೊರಗೆ ತೆಗೆಯಲಾಯಿತು. ಅಧಿಕಾರಿಗಳು ಅವರ ಶವವನ್ನು ಪತ್ತೆಹಚ್ಚುವ ಮೊದಲು 6 ದಿನಗಳ ಕಾಲ ಆಕೆ ಕಾಣೆಯಾಗಿದ್ದರು. ಉಪ ಪೊಲೀಸ್ ಮಹಾನಿರ್ದೇಶಕ ಪಿ ರೇಣುಕಾ ದೇವಿ ನೇತೃತ್ವದ ಎಸ್‌ಐಟಿ ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿತು.
ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪುಲ್ಕಿತ್ ಆರ್ಯ ಅವರ ತಂದೆ ವಿನೋದ್ ಆರ್ಯ ಬಿಜೆಪಿ ನಾಯಕರಾಗಿದ್ದು, ಅವರ ಮಗನ ಹೆಸರು ಕೊಲೆಯ ಪ್ರಮುಖ ಆರೋಪಿಯಾಗಿ ಕೇಳಿಬಂದ ತಕ್ಷಣ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅಂಕಿತಾ ಅವರ ಮೃತದೇಹವನ್ನು ಅವರ ಕೊಲೆಯಾದ ಕೆಲವು ದಿನಗಳ ನಂತರ ರೆಸಾರ್ಟ್ ಬಳಿಯ ಚಿಲ್ಲಾ ಬ್ಯಾರೇಜ್‌ನಿಂದ ವಶಪಡಿಸಿಕೊಳ್ಳಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








