ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
ಮಾವ ಬುರ್ಖಾ ಧರಿಸಿ ಸೊಸೆಯ ಮನೆಗೆ ನುಗ್ಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್‌ನ ಬನಿಯಾಥೇರಾ ಪೊಲೀಸ್ ಠಾಣೆ ಪ್ರದೇಶದ ನರೌಲಿ ಪಟ್ಟಣದ ತೆಲಿವಾಲಾ ಕುವಾನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಲ್ವಾರ್ ಸೂಟ್ ಮತ್ತು ಬುರ್ಖಾ ಧರಿಸಿದ ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಕೊಲೆ(Murder) ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ್ದ ಮತ್ತು ಅವನ ಬಳಿ ಚಾಕು ಕೂಡ ಇತ್ತು.ಅದೃಷ್ಟವಶಾತ್, ಕುಟುಂಬ ಸದಸ್ಯರ ಜಾಗರೂಕತೆ ಮತ್ತು ತಿಳುವಳಿಕೆಯಿಂದಾಗಿ, ಒಂದು ದೊಡ್ಡ ಅನಾಹುತ ತಪ್ಪಿತು.

ಸಂಭಾಲ್, ಮೇ 29: ಮಾವ ಬುರ್ಖಾ ಧರಿಸಿ ಸೊಸೆಯ ಮನೆಗೆ ನುಗ್ಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಂಭಾಲ್‌ನ ಬನಿಯಾಥೇರಾ ಪೊಲೀಸ್ ಠಾಣೆ ಪ್ರದೇಶದ ನರೌಲಿ ಪಟ್ಟಣದ ತೆಲಿವಾಲಾ ಕುವಾನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಲ್ವಾರ್ ಸೂಟ್ ಮತ್ತು ಬುರ್ಖಾ ಧರಿಸಿದ ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಕೊಲೆ(Murder) ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ್ದ ಮತ್ತು ಅವನ ಬಳಿ ಚಾಕು ಕೂಡ ಇತ್ತು.ಅದೃಷ್ಟವಶಾತ್, ಕುಟುಂಬ ಸದಸ್ಯರ ಜಾಗರೂಕತೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಕೂಡ ಓಡಿ ಬಂದರು. ನೆರೆಹೊರೆಯವರ ಸಹಾಯದಿಂದ, ಕುಟುಂಬ ಸದಸ್ಯರು ಮನೆಯಲ್ಲಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆತನನ್ನು ಬನಿಯಾಥೆರಾ ಪೊಲೀಸ್ ಠಾಣೆಗೆ ಕರೆತಂದರು, ಅಲ್ಲಿ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ನಡೆದಿದ್ದೆಲ್ಲಿ? ಈ ವಿಚಿತ್ರ ಘಟನೆ ನರೌಲಿ ಪಟ್ಟಣದ ತೆಲಿವಾಲಾ ಕುವಾನ್ ಪ್ರದೇಶದಲ್ಲಿ ನಡೆದಿದ್ದು, ಭೂರಾ ಅವರ ಮಗ ಬಶೀರುದ್ದೀನ್ ಅವರ ಮನೆ ಅಲ್ಲಿಯೇ ಇದೆ. ಬುಧವಾರ ಬೆಳಗ್ಗೆ 10.30 ರ ಸುಮಾರಿಗೆ ಭೂರಾ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಮನೆಯಲ್ಲಿ ಕುಳಿತಿದ್ದರು. ಅದೇ ಸಮಯದಲ್ಲಿ, ಸಲ್ವಾರ್ ಸೂಟ್ ಮೇಲೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬರು ಮನೆಗೆ ಪ್ರವೇಶಿಸಿದ್ದರು. ಕುಟುಂಬ ಸದಸ್ಯರು ಆತನನ್ನು ಭಿಕ್ಷುಕಿ ಎಂದುಕೊಂಡಿದ್ದರು. ಮನೆಯವರು ಆತನ ಬಳಿ ಏನು ಬೇಕು ಎಂದು ಕೇಳಿದರು.
ಮತ್ತಷ್ಟು ಓದಿ: ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಕೇಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಇದ್ದಕ್ಕಿಂದ್ದಂತೆ ಆ ವ್ಯಕ್ತಿ ಚಾಕು ಹಿಡಿದು ಮಹಿಳೆ ಮೇಲೆ ಹಲ್ಲೆಗೆ ಮುಂದಾಗಿದ್ದ. ಇದ್ದವರೆಲ್ಲಾ ಚೀರಾಡಲು ಶುರು ಮಾಡಿದರು. ಆಗ ಅಕ್ಕಪಕ್ಕದ ಮನೆಯವರು ಓಡಿ ಬಂದು ಮಹಿಳೆಯನ್ನು ರಕ್ಷಿಸಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಸ್ವತಃ ತನ್ನ ಮಾವ ಎಂದು ತಿಳಿದು ಮಹಿಳೆಗೆ ಗಾಬರಿಯಾಗಿದೆ. ಆತ ಸೊಸೆಯನ್ನು ಕೊಲ್ಲಲು ಬಯಸಿದ್ದೇಕೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ.ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಝೀ ನ್ಯೂಸ್ ವರದಿ ಮಾಡಿದೆ.
ಫೂಲ್ ಜಹಾನ್ ಅವರ ತಂದೆ ಭೂರಾ ಅವರು ರಾಂಪುರ ಜಿಲ್ಲೆಯ ಸೈಫ್ನಿ ಪೊಲೀಸ್ ಠಾಣೆಯ ಮೊಹಲ್ಲಾ ಇದ್ಗಾ ಕೋಟ್ ನಿವಾಸಿ ಬಜ್ರುಲ್ ಹಸನ್ ವಿರುದ್ಧ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ದೂರು ಸ್ವೀಕರಿಸಲಾಗಿದೆ ಎಂದು ಹಂಗಾಮಿ ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾವ ತನ್ನ ಸೊಸೆಯನ್ನೇ ಕೊಲೆ ಮಾಡಲು ನಿರ್ಧರಿಸಿದ ಘಟನೆಯ ಬಗ್ಗೆ ತಿಳಿದು ಜನರು ಆಘಾತಕ್ಕೊಳಗಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Thu, 29 May 25








